
ಕಲಬುರಗಿ : ಕಲಬುರಗಿ ಗುತ್ತಿಗೆದಾರ ಸಚಿನ್ ಸೂಸೈಡ್ ಕೇಸ್ ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಇದೇ ವಿಚಾರ ಬಿಜೆಪಿ-ಕಾಂಗ್ರೆಸ್ ನಡುವೆ ದೊಡ್ಡ ವಾಗ್ಯುದ್ಧವೇ ನಡೀತಿದೆ.

ಈಗಾಗ್ಲೇ ಸರ್ಕಾರ ಈ ಪ್ರಕರಣವನ್ನ CID ತನಿಖೆಗೆ ನೀಡಿದೆ. ಆದ್ರೆ ರೊಚ್ಚಿಗೆದ್ದಿರುವ ಕೇಸರಿಪಡೆ , ಸಿಬಿಐ ತನಿಖೆಗೆ ವಹಿಸುವಂತೆ ಪಟ್ಟು ಹಿಡಿದಿದೆ.

ರಾಜೀನಾಮೆ ಗೆ ಆಗ್ರಹ..!ಆರ್‌ಡಿಪಿಆರ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಭಾಗಿಯಾಗಿದ್ದಾರೆ ಎನ್ನಲಾದ ಬೀದರ್ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಬೇಕು.ಇಲ್ಲವಾದಲ್ಲಿ ಜನವರಿ 4ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಸೋಮವಾರ ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪ್ರಕರಣವನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ವಿಫಲವಾದಲ್ಲಿ ಜನವರಿ 4 ರಂದು ಕಲಬುರಗಿಯಲ್ಲಿ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಕಲಬುರಗಿಯಲ್ಲಿರುವ ಪ್ರಿಯಾಂಕ್ ಖರ್ಗೆ ಅವರ ನಿವಾಸಕ್ಕೂ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.
ಜ್ಯುನಿಯರ್ ಖರ್ಗೆ ಕೌಂಟರ್..!:ಪ್ರತಿಪಕ್ಷದವರುಎಷ್ಟೇ ಚೀರಾಟ, ಹಾರಾಟ ಮಾಡಿದರೂ, ಬಟ್ಟೆ ಹರಿದುಕೊಂಡರೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.ಮೊದಲು ದಾಖಲೆ ತೋರಿಸಿ ರಾಜೀನಾಮೆ ಕೇಳಲಿ. ಅದು ಬಿಟ್ಟು ಆರೋಪ ಮಾಡಿದಾಕ್ಷಣ ರಾಜೀನಾಮೆ ಕೊಡಲು ಆಗುತ್ತಾ?. ಇವರೇನೋ ನನ್ನ ರಾಜೀನಾಮೆ ಪಡೆಯಬಹುದು ಅಂದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.ನಮ್ಮ ಮನೆಗೆ ಮುತ್ತಿಗೆ ಹಾಕಲಿ, ಬೇಡ ಅಂದವರು ಯಾರು?. ಜನರು ನಗುತ್ತಿದ್ದಾರೆ. ದಾಖಲೆ ಇಲ್ಲದೆ ಯಾಕೆ ಪ್ರತಿಭಟನೆ ಮಾಡುತ್ತಾರೆ?. ಏನಂಥ ಮುತ್ತಿಗೆ ಹಾಕುತ್ತೀರಿ?. ನಿಮಗೆ ನಾಚಿಕೆ ಆಗಬೇಕು. ಮುನಿರತ್ನ ಕೇಸ್ನಲ್ಲಿ ಬಿಜೆಪಿಯಲ್ಲಿ ಒಂದು ನೋಟಿಸ್ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.