
ಚನ್ನಪಟ್ಟಣ :ನಿಖಿಲ್ ಕುಮಾರಸ್ವಾಮಿ (ಜೆಡಿಎಸ್) :ಸಿಪಿ ಯೋಗೀಶ್ವರ್ (ಕಾಂಗ್ರೆಸ್)
ಶಿಗ್ಗಾಂವಿ :ಭರತ್ ಬೊಮ್ಮಾಯಿ (ಬಿಜೆಪಿ) :ಯಾಸಿರ್ ಅಹಮದ್ ಖಾನ್ ಪಠಾಣ್ (ಕಾಂಗ್ರೆಸ್) :ಸಂಡೂರುಬಂಗಾರು ಹನುಮಂತು (ಬಿಜೆಪಿ ) .

ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ನಡೆಯುತ್ತಿದ್ದು ಆರಂಭಿಕ ಹಂತದಲ್ಲಿ ಕಾಂಗ್ರೆಸ್ಗೆ ಲಾಭ ಕಂಡು ಬರುತ್ತಿದೆ. ಸಂಡೂರಿನಲ್ಲಿ ಕಾಂಗ್ರೆಸ್ನ ಅನ್ನಪೂರ್ಣ ತುಕಾರಾಮ ಅವರು ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚನ್ನ ಪಟ್ಟಣದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದ್ದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಹಿನ್ನಡೆ ಉಂಟಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರು ಅಲ್ಪ ಪ್ರಮಾಣದ ಮುನ್ನಡೆಯೊಂದಿಗೆ ಸಾಗುತ್ತಿದ್ದಾರೆ. ಇನ್ನು ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಮುನ್ನಡೆ ಪಡೆದುಕೊಂಡಿದ್ದಾರೆ.
ಈ ಮೂರು ಕ್ಷೇತ್ರಗಳಿಗೆ ನವೆಂಬರ್ 13ರಂದು ಚುನಾವಣೆ ನಡೆದಿತ್ತು. ಈ ಮೂರು ಕ್ಷೇತ್ರಗಳು ಮೂರು ಪಕ್ಷಗಳಿಗೆ ಪ್ರತಿಷ್ಠೆಯಾಗಿತ್ತು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಫೈಟ್ ಆಗಿದ್ದರೆ ಶಿಗ್ಗಾವಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿಗೆ ಇಳಿದಿದ್ದವು. ಇನ್ನು ಸಂಡೂರಿನಲ್ಲಿ ಬಿಜಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿಯಿದೆ.
ಈ ಹಿಂದೆ ಆಯಾ ಕ್ಷೇತ್ರದಲ್ಲಿ ಇದ್ದ ಪಕ್ಷಗಳ ಅಭ್ಯರ್ಥಿಗಳೆ ಗೆಲುವು ಸಾಧಿಸಲಿದ್ದಾರೆ ಎಂದು ಚುನಾವಣಾ ಸಮೀಕ್ಷೆಗಳು ಅಂದಾಜು ಮಾಡಿದ್ದವು. ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ಸೇರಿ ಮೂರು ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ತೆರವು ಮಾಡಿದ ನಾಯಕರ ಕುಟುಂಬಸ್ಥರೇ ಸ್ಪರ್ಧಿಸಿದ್ದಾರೆ. ಆ ಮೂಲಕ ಆಯಾ ಕುಟುಂಬಗಳ ಪಾರುಪತ್ಯವನ್ನು ತಾವು ತೆರವು ಗೊಳಿಸಿದ ವಿಧಾನಸಭೆ ಕ್ಷೇತ್ರಗಳಲ್ಲಿ ಮುಂದುವರಿಕೆ ಮಾಡಲು ಆ ನಾಯಕರು ಪರದಾಟ ನಡೆಸಿದ್ದರು.
ಈ ಮೂರು ಕ್ಷೇತ್ರಗಳಿಗಿಂತ ಅವರ ಕುಟುಂಬದ ರಾಜಕಾರಣ ಹಾಗೂ ರಾಜ್ಯ ನಾಯಕರುಗಳ ಪ್ರತಿಷ್ಟೇಯೇ ಈ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗಿತ್ತು.ಅಭ್ಯರ್ಥಿಗಳ ಪ್ರಚಾರ, ಅವರ ಕಾರ್ಯವೈಖರಿ ಅವರ ಚುನಾವಣಾ ಕಾರ್ಯತಂತ್ರ, ಜನರೊಂದಿಗಿನ ಅವರ ನಡವಳಿಕೆ, ಅವರಲ್ಲಿರುವ ನಾಯಕತ್ವ ಗುಣ ಯಾವುದೂ ಅಷ್ಟೊಂದು ಮುನ್ನೆಲೆಗೆ ಬಂದಿರಲಿಲ್ಲ.