ಹಲವು ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿರುವ ಬೆಂಗಳೂರು ಜನರಿಗೆ, ಕೊರೋನಾ ನಾಲ್ಕನೇ ಅಲೆ ಹೊತ್ತಲ್ಲೇ ಮತ್ತೊಂದು ಮೆಗಾ ಶಾಕ್ ಕಾದಿದೆ. ಸಾಲು ಸಾಲು ಬೆಲೆ ಏರಿಕೆಗೆ ಕಂಗಾಲಾಗಿರುವ ಜನರ ಜೇಬಿಗೆ BWSSB ಇಂದ ‘ಜಲ ಕತ್ತರಿ’ ಬೀಳಲಿದೆ. ಕರೆಂಟ್ ಬಿಲ್, ಗಾರ್ಬೆಜ್ ಬಿಲ್ ಅಂತ ಹೊರೆ ಹೊತ್ತಿರುವ ಸಿಲಿಕಾನ್ ಸಿಟಿ ಮಂದಿ ಇದೀಗ ವಾಟರ್ ಬಿಲ್ ಏರಿಕೆಯ ಹೊರೆಯನ್ನೂ ಹೊತ್ತುಕೊಳ್ಳಬೇಕಿದೆ.
ಕೊರೋನಾ ನಾಲ್ಕನೇ ಅಲೆ ಭೀತಿ ಹೊತ್ತಲ್ಲೆ ರಾಜಧಾನಿ ಮಂದಿಗೆ ಮತ್ತೊಂದು ಮೆಗಾ ಶಾಕ್ !
ತೈಲ ಬೆಲೆ ಏರಿಕೆ, ಅಡುಗೆ ಎಣ್ಣೆ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ, ಹಾಲಿನ ದರ ಏರಿಕೆ, ವಿದ್ಯುತ್ ದರ ಏರಿಕೆ ಹೀಗೆ ಸಾಲು ಸಾಲು ಏರಿಕೆ ಹೊರೆ ಅನುಭವಿಸಿದ ಬೆಂಗಳೂರು ಜನರು ಈಗ ಮತ್ತೊಂದು ದರ ಏರಿಕೆಗೆ ಸಜ್ಜಾಗಬೇಕಿದೆ. ಈ ಬಾರಿ ದರ ಏರಿಕೆ ಅಖಾಡಕ್ಕೆ ಬೆಂಗಳೂರು ಜಲ ಮಂಡಳಿ ಬಂದಿದ್ದು, ಮುಂದಿನ ವಾರದಿಂದ ಬಾಟರ್ ಬಿಲ್ ನಲ್ಲಿ ಏರಿಕೆ ಕಾಣಲಿದೆ. ವಾಟರ್ ಬಿಲ್ ಏರಿಕೆ ಮಾಡುವಂತೆ BWSSB ಸರ್ಕಾರಕ್ಕೆ ಪಸ್ತವಾನೆ ಈಗಾಗಲೇ ಸಲ್ಲಿಸಿದೆ.
ಸತತ ಬೆಲೆ ಏರಿಕೆ ಬಿಸಿ ನಡುವೆ ಸಿಲಿಕಾನ್ ಸಿಟಿ ಜನರಿಗೆ 5% ವಾಟರ್ ಶಾಕ್ !
ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಈಗ ವಾಟರ್ ಬಿಲ್ ಟೆನ್ಷನ್ ಶುರುವಾಗಲಿದೆ. ಪ್ರತಿ ಸಾವಿರ ಲೀಟರ್ ನೀರಿನದ ದರಕ್ಕೆ 5% ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಇರುವ ದರದಲ್ಲಿ ಕಮರ್ಷಿಯಲ್ ಸೇರಿದಂತೆ ಎಲ್ಲಾ ವಾಟರ್ ದರ 5% ರಷ್ಟು ಹೆಚ್ಚಳಕ್ಕೆ ಚಿಂತನೆ ನಡೆಸಲಾಗಿದೆ. ಆದರೆ ಕೈಗಾರಿಕಾ ಬಳಕೆ ಹಾಗೂ ಈಜುಕೊಳಗಳ ಬಳಕೆಗಳ ದರದಲ್ಲಿ 8% ದರ ಏರಿಕೆ ನಿಗದಿ ಮಾಡಲು ಕೋರಲಾಗಿದೆ. ಸರ್ಕಾರಕ್ಕೆ ಸಲ್ಲಿಸಲಾಗಿರುವ ಈ ಪ್ರಸ್ತಾವನೆಯ ಭವಿಷ್ಯ ಮುಂದಿನ ವಾರ ಗೊತ್ತಾಗಲಿದೆ.
ಈಗಿರುವ ಗೃಹ ಬಳಕೆಯ ನೀರಿನ ದರ !
• 1,000 Ltr : ₹7 (0 to 8,000 Ltr ವರೆಗೆ)• 1,000 Ltr : ₹11 (8,001 to 25,000 Ltr ವರೆಗೆ)• 1,000 Ltr : ₹26 (25,001 to 50,000 Ltr ವರೆಗೆ)• 1,000 Ltr : ₹45 (50,000 ಮೇಲ್ಪಟ್ಟಂತೆ Ltrಗೆ)
ಈಗಿರುವ ವಾಣಿಜ್ಯ ಬಳಕೆಯ ನೀರಿನದ ದರ !
• 1,000 Ltr : ₹50 (0 to 10,000 Ltr ವರೆಗೆ)• 1,000 Ltr : ₹57 (10,001 to 25,000 Ltr ವರೆಗೆ)• 1,000 Ltr : ₹65 (25,001 to 50,000 Ltr ವರೆಗೆ)• 1,000 Ltr : ₹76 (50,001 to 75,000 Ltr ವರೆಗೆ)• 1,000 Ltr : ₹86 (75,000 ಮೇಲ್ಪಟ್ಟಂತೆ Ltrಗೆ)
• ಕೈಗಾರಿಕಾ ಬಳಕೆಯ ನೀರಿನದ ದರ : 1,000 Ltrಗೆ ₹90• ಈಜುಕೊಳಕ್ಕೆ ಬಳಕೆಯ ನೀರಿನ ದರ : 1,000 Ltrಗೆ ₹90
ಗೃಹ ಬಳಕೆ ಮೇಲೆ 5% ವಾಟರ್ ಬಿಲ್ ಏರಿಕೆ !
– ಪ್ರತಿ ಸಾವಿರ ಲೀಟರ್ ಗೆ ₹7 ದರ, ಈ ದರಕ್ಕೆ 5% ಏರಿಕೆಯಾದರೆ ₹7.35 ಆಗಲಿದೆ : 35 ಪೈಸೆ ಹೆಚ್ಚಳ- ಮೊದಲ ಹಂತದ 8 ಸಾವಿರ ಲೀಟರ್ ಗೆ ₹56, ಇದಕ್ಕೆ 5% ಏರಿಕೆಯಾದರೆ ₹58.80 ಆಗಲಿದೆ : ₹2.80 ಹೆಚ್ಚಳ
ಕೈಗಾರಿಕಾ ಬಳಕೆ ಮೇಲೆ 8% ವಾಟರ್ ಬಿಲ್ ಏರಿಕೆ !
– ಪ್ರತಿ ಸಾವಿರ ಲೀಟರ್ ಗೆ ₹90 ದರ, ಈ ದರಕ್ಕೆ 8% ಏರಿಕೆಯಾದರೆ 97.20 ಆಗಲಿದೆ : ₹7.20 ಹೆಚ್ಚಳ
ವಾಟರ್ ದರ ಏರಿಕೆ ಬಗ್ಗೆ ಜಲಮಂಡಳಿ ಇಂಜಿನಿಯರ್ ಇನ್ ಚೀಫ್ ಸುರೇಶ್ ಮಾಹಿತಿ ನೀಡಿದ್ದು, 2013ರಲ್ಲಿ ಕೊನೆಯ ಬಾರಿಗೆ ಜಲ ಮಂಡಳಿ ದರ ಏರಿಕೆ ಮಾಡಿತ್ತು. ಅದಾಗಿ 9 ವರ್ಷಗಳಾಯಿತು, ಇದೀಗ ದರ ಏರಿಸುವ ಪ್ರಸ್ತಾವನೆ ಸಲ್ಲಿಸಿದೆ. ಪ್ರತಿ ಸಾವಿರ ಲೀಟರ್ ಗೆ 5% ಹಾಗೂ ಕೈಗಾರಿಕಾ ಬಳಕೆಗೆ 8% ದರ ಏರಿಕೆಗೆ ಪ್ರಸ್ತಾವನೆ ನೀಡಲಾಗಿದೆ. ಮುಂದಿನ ವಾರ ಸರ್ಕಾರ ಈ ಬಗ್ಗೆ ತಮ್ಮ ಅಂತಿಮ ನಿರ್ಧಾರ ಪ್ರಕಟ ಮಾಡಲಿದೆ ಎಂದಿದ್ದಾರೆ.
ಒಟ್ಟಾರೆ ದರ ಏರಿಕೆಯ ಹೊಡೆತಕ್ಕೆ ಪದೇ ಪದೇ ಬಲಿಯಾಗುತ್ತಿರುವ ಬೆಂಗಳೂರಿನ ಜನರ ಪಾಡು ಹೇಳತೀರದ್ದಾಗಿದೆ. ಇದೀಗ ವಾಟರ್ ಬಿಲ್ ಕೂಡ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದ್ದೇ ಆದಲ್ಲಿ, 8 ಸಾವಿರ ಲೀಟರ್ ಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆ ಮಾಡುತ್ತಿರುವ ಜನರಿಗೆ ಭಾರೀ ಹೊಡೆತ ಕೊಡಲಿದೆ.