ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ (Monsoon session) ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಮಾತನಾಡುವ ವೇಳೆ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬೆಂಗಳೂರಿಗೆ ಬಸ್ ಖರೀದಿ ಮಾಡುವುದು ಬೇಡ..ಬದಲಿಗೆ ಹಡಗುಗಳನ್ನು ಖರೀದಿಸಿ, ಇನ್ಮುಂದೆ ಕರಾವಳಿ..ಬೇಡ ಬೆಂಗಳೂರಲ್ಲೇ ಬೀಚ್ ಗಳು ಆಗೋಗಿವೆ ಎಂದು ಲೇವಡಿ ಮಾಡಿದ್ದಾರೆ.

ಈಗಾಗಲೇ ಮುಳುಗಿರುವ ಬೆಂಗಳೂರಲ್ಲಿ ಬಸ್ ಗಳನ್ನು ಚಲಾಯಿಸಲು ಸಾಧ್ಯವಿಲ್ಲ. ರಾಜಧಾನಿಯಲ್ಲಿ ಹಡುಗುಗಳನ್ನೇ ಓಡಿಸಬೇಕು. ನಗರದಲ್ಲಿ ಹಳೆಯ ಮರಗಳಿಂದ ಜನರ ಜೀವ ಹಾನಿಯಾಗಿದೆ. ಮರಗಳ ರೆಂಬೆಗಳನ್ನು ಕತ್ತರಿಸಲು ನಿಮ್ಮ ಬಳಿ ಹಣವಿಲ್ಲ. ಬೆಂಗಳೂರಲ್ಲಿ ಹಣ ಇಲ್ಲದೇ ಅಭಿವೃದ್ಧಿಯೇ ಇಲ್ಲ ಎಂದಿದ್ದಾರೆ.

ಬೆಂಗಳೂರು ಒಳಗೆ ಗಾರ್ಬೆಜ್ ಅಂತಾ ಅಮೇರಿಕಾ ಪತ್ರಿಕೆಯಲ್ಲಿ ವರದಿಯಾಗಿದೆ.ಈಗ ಗಾರ್ಬೇಜ್ ಒಳಗೆ ಬೆಂಗಳೂರು ಇದೆ. ಡಿಸಿಎಂ ಡಿ.ಕೆ ಶಿವಕುಮಾರ್ ಡೋಂಟ್ ವರಿ ಅಂದಿದ್ರು. ಆದ್ರೆ ಜನರು ಈಗ ವರೀ ಮಾಡ್ಕೊಳ್ತಿದ್ದಾರೆ. ಕಸ ಎತ್ತುವ ಕಾರ್ಮಿಕರಿಗೂ ನಾಲ್ಕು ತಿಂಗಳಿನಿಂದ ಸಂಬಳ ಕೊಟ್ಟಿಲ್ಲಅಲ್ಲೂ ಕಸ, ಇಲ್ಲೂ ಕಸ, ಬೆಂಗಳೂರಿನ ಎಲ್ಲೆಲ್ಲೂ ಕಸ ಎಂದಿದ್ದಾರೆ.
ಈಗ ಸರ್ಕಾರಕ್ಕೆ ಹನಿಮೂನ್ ಪೀರಿಯಡ್ ಆಯ್ತು, ಮಕ್ಕಳು ಆಯ್ತು, ಮಕ್ಕಳು ಸ್ಕೂಲ್ ಗೆ ಹೋಗಿದ್ದೂ ಆಯ್ತು. ಆದರೆ ಇನ್ನೂ ಅಭಿವೃದ್ಧಿ ಮಾಡಿಲ್ಲ. ನಾವು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಶಾಸಕರಿಗೂ ಅನುದಾನ ಕೊಟ್ಟಿದ್ದೇವೆ. ನನ್ನ ಕ್ಷೇತ್ರಕ್ಕೂ ನಾನು ವಿರೋಧ ಪಕ್ಷದ ನಾಯಕ 20 ಕೋಟಿ ಹಣವನ್ನು ಕೊಟ್ಟಿಲ್ಲ.ಈ ಸರ್ಕಾರ ಬಂದ ಮೇಲ ಅಭಿವೃದ್ಧಿ ಮರೀಚಿಕೆ ಎಂದಿದ್ದಾರೆ.