ಉಡುಪಿಯಲ್ಲಿ ನಳಿನ್ ಕುಮಾರ್ ಕಟೀಲು ಮಾತನಾಡಿ, ಸಿದ್ದರಾಮಯ್ಯ ಆಡಳಿತ ಇದ್ದಾಗ ಹಿಂದೂ ಸರಣಿ ಕಗ್ಗೊಲೆಗಳು ನಡೆಯುತ್ತದೆ. ಸಿದ್ದರಾಮಯ್ಯ ಆಡಳಿತದಲ್ಲಿ ಹಿಂದುಗಳ ಮೇಲೆ ನಿರಂತರ ದಾಳಿ ಆಗುತ್ತಿದೆ. ಪಾಕಿಸ್ತಾನ ಧ್ವಜ ಹಿಡಿದು ಜಿಂದಾಬಾದ್ ಹೇಳಿದ್ದಕ್ಕೆ ಕೇಸ್ ಆಗಲ್ಲ. ಟ್ವೀಟ್ ಮೂಲಕ ಹಿಂದೂಗಳ ಹತ್ಯೆ ಮಾಡುವ ಎಚ್ಚರಿಕೆ ನಿರಂತರವಾಗಿ ನಡೆಯುತ್ತಿದೆ. ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗೂ ಮಂಗಳೂರಿನ ಚಟುವಟಿಕೆಗೂ ಯಾವ ವ್ಯತ್ಯಾಸವು ಇಲ್ಲ. ಕಾನೂನು, ಜನರ ರಕ್ಷಣೆ ಎರಡರಲ್ಲೂ ಸಂಪೂರ್ಣ ವಿಫಲವಾಗಿದೆ. ಗೃಹ ಸಚಿವರ ಸಭೆಯಲ್ಲಿ ಶಾಸಕರಿಗೆ ಅವಕಾಶ ಇಲ್ಲ ಎಂದಿದ್ದಾರೆ.

ಮುಸ್ಲಿಂ ಪ್ರಮುಖರು ಬಂದು ಗಲಾಟೆಯನ್ನು ನಡೆಸಿದ್ದಾರೆ ಯಾವ ಕ್ರಮ ಕೈಗೊಂಡ್ರಿ..? ಗೃಹ ಸಚಿವರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಆಕ್ರಮಣ ನಡೆದಿದೆ. ರಾಜ್ಯದಲ್ಲಿ ಸರಕಾರ ಇದೇಯೋ ಸತ್ತು ಹೋಗಿದೆಯೋ..? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರು ಸುಹಾಸ್ ಮನೆಗೆ ಹೋಗಲು ತಡೆಯಿದೆ. ಕಾಂಗ್ರೆಸ್ ಮುಸ್ಲಿಂ ಮುಖಂಡರು ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ಇಂತಹ ರಾಜಕೀಯಕ್ಕೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದೆ. ಸರ್ಕಾರ ಇರುವುದೇ ಹಿಂದೂ ಸಮಾಜದ ಧಮನಕ್ಕಾಗಿ, ಹಿಂದೂ ಸಮಾಜ ಪರ ಇರುವ ಎಲ್ಲರ ಮೇಲೆ ದಾಳಿ ನಡೆಯುತ್ತಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ವಿರುದ್ಧ ಬರೆದರೆ ಬಂಧಿಸುತ್ತಾರೆ. ಗೃಹ ಸಚಿವರ ಸಭೆಯಲ್ಲಿ ಧಮ್ಕಿ ಹಾಕಿದವರನ್ನು ಬಂಧಿಸಲು ತಾಕತ್ತಿಲ್ಲ. ಗುಂಡು ಹೊಡೆಯಿರಿ ಎಂದು ಹೇಳಿದ್ದಾರಲ್ಲ, ಬಂಧನ ಮಾಡಿ ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕ ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಎಂದಿದ್ದ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಮಂಗಳೂರಿನಲ್ಲಿ ಶಾಸಕ ಹರೀಶ್ ಪೂಂಜಾ ತಿರುಗೇಟು ನೀಡಿದ್ದು, ಅವರು ಹೀಗೆ ಯಾಕೆ ಹೇಳಿದ್ದಾರೆ ಅಂದ್ರೆ ಬುರ್ಕಾ ಹಾಕಿಕೊಂಡವರ ಲವ್ ಜಿಹಾದ್‌ಗೆ ಒಳಗಾದ ವ್ಯಕ್ತಿ ಗುಂಡೂರಾವ್. ಹಿಂದೂಗಳ ಬದಲು ಗುಂಡೂರಾವ್ ಅವರಿಗೆ ಮುಸ್ಲಿಮರ ಮೇಲೆ ಒಲವು ಜಾಸ್ತಿ. ರಿವರ್ಸ್ ಲವ್ ಜಿಹಾದ್ ಆಗಿರುವವರು ದಿನೇಶ್ ಗುಂಡೂರಾವ್, ಅದು ನಮ್ಮ ದುರ್ದೈವ ಎಂದಿದ್ದಾರೆ.
ನಾನು ಯಾಕೆ ಗುಂಡೂರಾವ್ ಬುರ್ಖಾ ಹಾಕಿದ ಸಚಿವ ಅಂತ ಹೇಳಿದೆ ಅಂದ್ರೆ ಅವರು ಮದುವೆ ಆಗಿದ್ದು ಮುಸ್ಲಿಂ ಸಮುದಾಯ ಮಹಿಳೆಯನ್ನು, ಲವ್ ಜಿಹಾದ್ ಅಂದ್ರೆ ಹಿಂದು ಹುಡುಗಿಯವರನ್ನು ಮುಸ್ಲಿಂ ಯುವಕರು ಮದುವೆ ಆಗೋದು. ಆದ್ರೆ ದಿನೇಶ್ ಗುಂಡೂರಾವ್ ಅವರಲ್ಲಿ ಉಲ್ಟಾ ಆಗಿದೆ. ದಿನೇಶ್ ಗುಂಡೂರಾವ್ ಅವರನ್ನು ಅವರ ಹೆಂಡತಿ ಲವ್ ಜಿಹಾದ್‌ಗೆ ಒಳಪಡಿಸಿದ್ದಾರೆ. ಹೀಗಾಗಿ ಹಿಂದುಗಳನ್ನು ಥರ್ಡ್ ಸಿಟಿಜನ್ ರೀತಿಯಲ್ಲಿ ನೋಡುತ್ತಾರೆ ಎಂದು ಮಂಗಳೂರಿನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಕ್ರೋಶ ಹೊರ ಹಾಕಿದ್ದಾರೆ.