ಹಾವೇರಿಯ ಶಿಗ್ಗಾಂವಿ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯಿಂದ ಅಧಿಕೃತ ಅಭ್ಯರ್ಥಿ ಆಗಿದ್ದಾರೆ. ಆದರೆ ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋಲುಂಡಿದ್ದ ಪಠಾಣ್‌ಗೆ ಟಿಕೆಟ್ ಕೊಡಲಾಗಿದೆ. ಇದು ಬಿಜೆಪಿಗೆ ಸಹಾಯ ಆಗುವ ಎಲ್ಲಾ ಲಕ್ಷಗಳುಗಳು ಶಿಗ್ಗಾಂವಿಯಲ್ಲಿ ಕಂಡು ಬರ್ತಿದೆ.
ಶಿಗ್ಗಾಂವಿಯ ತಹಶೀಲ್ದಾರ್ ಕಚೇರಿಗೆ ಕೊನೆ ಗಳಿಗೆಯಲ್ಲಿ ಬೈಕ್ನಲ್ಲಿ ಬಂದ ಅಜ್ಜಂಪೀರ್ ಖಾದ್ರಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಖಾದ್ರಿ, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೊನೆ ಗಳಿಗೆಯಲ್ಲಿ ಬೈಕ್ನಲ್ಲಿ ಬಂದ ಖಾದ್ರಿ, ಓಡುತ್ತಲೇ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಅಜ್ಜಂಪೀರ್ ಖಾದ್ರಿ, ಕಾಂಗ್ರೆಸ್, ಬಿಜೆಪಿ ಸೋಲಿಸೋದು ಒಂದೇ ನನ್ನ ಗುರಿ ಎಂದಿದ್ದಾರೆ. ಈ ತಾಲೂಕಿನ ಮಣ್ಣಲ್ಲಿ ಹುಟ್ಟಿ ಜನರ ಸೇವೆ ಮಾಡಿದ್ದೇನೆ. ಬಡವರ ಸೇವೆ ಮಾಡಿದ್ದೇನೆ. ನಾನು ಈ ತಾಲೂಕಿನ ಮಗ. ಹೊರಗಿನವರಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ. ಯಾರು ನನ್ನ ಮನವೊಲಿಕೆ ಮಾಡಿಲ್ಲ. ಕಾಂಗ್ರೆಸ್, ಬಿಜೆಪಿ ಸೋಲಿಸೋದೇ ನನ್ನ ಗುರಿ. ಜನರೆ ತಿರ್ಪುಗಾರರು ಎಂದಿದ್ದಾರೆ.
ಶಿಗ್ಗಾಂವಿ-ಸವಣೂರು ಕಾಂಗ್ರೆಸ್ ಟಿಕೆಟ್ ವಿಚಾರ ತಾರಕಕ್ಕೇರಿದೆ. ಟಿಕೆಟ್ ವಂಚಿತ ಖಾದ್ರಿ ಬೆಂಬಲಿಗರು ಕಲ್ಲು ತೂರಾಟ ಮಾಡಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತ ಅಜ್ಜಂಪೀರ್ ಖಾದ್ರಿ ಮನೆಗೆ ಆಗಮಿಸಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಕಾರಿನ ಹಿಂಬದಿಯ ಗ್ಲಾಸ್ ನಜ್ಜುಗುಜ್ಜು ಮಾಡಿದ್ದು, ಕಾರು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಗ್ಗಾವಿ-ಸವಣೂರು ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ಗೆ ಎರಡನೇ ಆಘಾತ ಎದುರಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಮಂಜುನಾಥ್ ಕುನ್ನೂರು ನಾಮಪತ್ರ ಸಲ್ಲಿಸಿದ್ದಾರೆ. ಶಿಗ್ಗಾಂವಿ ತಹಶೀಲ್ದಾರ್ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, ಹಿರಿಯ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪುತ್ರ ರಾಜು ಕುನ್ನೂರು ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗದ ಕಾರಣಕ್ಕೆ ಮಂಜುನಾಥ್ ಕುನ್ನೂರು ನಾಮಿನೇಷನ್ ಮಾಡಿದ್ದಾರೆ.
ಶಿಗ್ಗಾಂವಿ ಬಂಡಾಯದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಅಜ್ಜಂಪೀರ್ ಖಾದ್ರಿ ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇಬ್ಬರಿಗೆ ಟಿಕೆಟ್ ಕೊಡಲು ಆಗಲ್ಲ. ನಮಗೆ ಭರತ್ ಬೊಮ್ಮಾಯಿ ಸಮರ್ಥ ಎದುರಾಳಿ ಅಲ್ಲವೇ ಅಲ್ಲಾ ಅಂತ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ಗೆ ಇಬ್ಬರು ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವುದು ಸೋಲಿನ ಮುನ್ಸೂಚನೆ ಎನ್ನುವಂತೆ ಕಾಣಿಸುತ್ತಿದೆ. ಬಂಡಾಯ ಶಮನ ಮಾಡ್ತಾರಾ..? ಅನ್ನೋದ್ರ ಮೇಲೆ ಭರತ್ ಬೊಮ್ಮಾಯಿ ಸೋಲು ಗೆಲುವಿನ ಭವಿಷ್ಯ ನಿರ್ಧಾರ ಆಗಲಿದೆ.