ಸಿಲಿಕಾನ್ ಸಿಟಿಯಲ್ಲಿ (Silicon city) ಒತ್ತುವರಿ ಕಾರ್ಯಾರಣೆ ಜೋರಾಗಿದೆ.ಈಗ ಮತ್ತೆ ಬುಲ್ಲೋಜರ್ (Buldozer) ಗಳು ರಸ್ತೆಗಿಳಿದಿದ್ದು, ಅಕ್ರ ಕಟ್ಟಡಗಳ ವಿರುದ್ಧ ಘರ್ಷಿಸಿದೆ. ಆದ್ರೆ ಇದು ಬಿಬಿಎಂಪಿ (BBMP) ಕಾರ್ಯಾಚರಣೆ ಅಲ್ಲ, ಬದಲಿಗೆ ಬಿಡಿಎ (BDA) ಒತ್ತುವರಿ ತೆರವು ಕಾರ್ಯಾರಣೆ.

ಬೆಂಗಳೂರಿನ ಚಂದ್ರ ಲೇಔಟ್ (Chandra layout) ನಾಗರಬಾವಿಯ ಬಳಿ ಬಿಡಿಎ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನ ಸಂಪೂರ್ಣ ತೆರವು ಮಾಡಲಾಗಿದೆ. ಹೈಕೋರ್ಟ್ (Highcourt) ಆದೇಶದ ಹಿನ್ನಲೆ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ 500 ಕೋಟಿ ಮೌಲ್ಯದ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಇತಿಹಾಸದಲ್ಲಿ ಇದು ಅತೀ ದೊಡ್ಡ ತೆರವು ಕಾರ್ಯಾಚರಣೆಯಾಗಿದ್ದು, ಬರೋಬ್ಬರಿ 9 ಎಕರೆ 13 ಗುಂಟೆ ಭೂಮಿಯ ಒತ್ತುವರಿ ತೆರವುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.