ಬೆಂಗಳೂರು: ಇತ್ತೀಚಿಗೆ ಅಷ್ಟೇ ಬಿಜೆಪಿ ಸರ್ಕಾರ ತನ್ನ ಬಜೆಟ್ ಮಂಡನೆ ಮಾಡಿದೆ, ಇತ್ತ ರಾಜ್ಯ ರಾಜ್ಯಕೀಯದಲ್ಲಿ ಕೈ, ದಳಪತಿ , ಬಿಜೆಪಿ, ಇತರೆ ಪಕ್ಷದ ಬಿರುಸಿನ ಪ್ರಚಾರ ಸಹ ಮಾಡುತ್ತಿದೆ. ಇಲ್ಲಿ ಬಹಳ ಮುಖ್ಯವಾದ ಅಂಶ ಏನು ಅಂದರೆ ಕೆಲ ನಾಯಕರಿಗೆ ಇದು ಕೊನೆಯ ಅಧಿವೇಶನ ಅನ್ನೋದು ಇಲ್ಲಿ ತಪ್ಪಾಗಲಾರದು .
ಇಂದಿನ ಬಜೆಟ್ ಅಧಿವೇಶನದ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಇದು ನನ್ನ ಕೊನೆಯ ಅಧಿವೇಶನ ಎಂದಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರು ಯಾಕೆ ಮತ್ತೆ ಚುನಾವಣೆಗೆ ನಿಲ್ಲಿ, ಯಾಕೆ ನಿಮ್ಮ ಹೈಕಮಾಂಡ್ ನಿಮ್ಮನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಬಿಡಲ್ವಾ ಎಂದು ಕಾಂಗ್ರೆಸ್ ನಾಯಕರು ಸದನದಲ್ಲಿ ಬಿಎಸ್ ವೈ ಅವರ ಕಾಲೆಳೆದಿದ್ದಾರೆ.
ಇನ್ನು ಇದೇ ಸಮಯದಲ್ಲಿ ಮತ್ತೆ ನಾನು ನಾಳೆಯಿಂದ ನಅನು ರಾಜ್ಯ ಪ್ರವಾಸ ಮಾಡ್ತೇನೆ ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ, ನಮ್ಮ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ.
ನಾನು ಸಿದ್ದರಾಮಯ್ಯ ಅವರೇ ನೀವು ಎಲ್ಲಿ ಗೆದ್ದಿದ್ದಿರಾ ಅಲ್ಲಿಂದಲೇ ನಿಲ್ಲಬೇಕು. ಬಾದಾಮಿಯಲ್ಲಿ ನಿಂತು ಗೆದ್ದು ಬಂದವರು, ಯಾಕೆ ನೀವು ಅಲ್ಲಿಗೆ ಹೋಗ್ತಿಲ್ಲ. ಸಿದ್ದರಾಮಯ್ಯನವರಿಗೆ ಅಲ್ಲಿ ಭಯ ಕಾಡುತ್ತಿದ್ಯಾ? ಸಿದ್ದರಾಮಯ್ಯನವರು ಬಾದಾಮಿಯಲ್ಲೇ ನಿಲ್ಲಬೇಕು ಎಂದು ಹೇಳಿದರು.
ನಾನು ಬದುಕಿನ ಉಸಿರುವವರೆಗೆ ಬಿಜೆಪಿಯಲ್ಲೇ ಇರ್ತಿನಿ ಬಿಎಸ್’ವೈ ಸದನದಲ್ಲಿ ಎಂದು ಭಾವುಕರಾದರು.