ಹಾವು ಮುಂಗೂಸಿಯಂತೆ ಒಂದೇ ಪಕ್ಷದಲ್ಲಿದ್ದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಹಾಗು ಮಾಜಿ ಸಚಿವ ವಿ ಸೋಮಣ್ಣ (V Somanna) ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶನಿವಾರ ಸಂಜೆ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ಸೋಮಣ್ಣ ಮಾತುಕತೆ ನಡೆಸಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ತುಮಕೂರು ಸಂಸದ ಜಿ.ಎಸ್ ಬಸವರಾಜು ಸೇರಿದಂತೆ ಹಲವು ನಾಯಕರ ಜೊತೆಗೂಡಿ ಭೇಟಿ ಮಾಡಿ ಲೋಕಸಭಾ (Loksabha) ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯುವ ಬಗ್ಗೆ ಮಹತ್ವದ ರ‍್ಚೆ ಮಾಡಿದ್ದಾರೆ.
ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿರುವ ವಿ. ಸೋಮಣ್ಣ, ಟಿಕೆಟ್ ಬಗ್ಗೆ ರ‍್ಚೆ ಆಗಿಲ್ಲ. ನಮ್ಮ ನಮ್ಮ ವಿಚಾರಗಳ ರ‍್ಚೆ ಮಾಡಲಾಗಿದೆ. ದೇಶಕ್ಕೆ ಮತ್ತೊಮ್ಮೆ ಪ್ರಧಾನಿ ಮೋದಿ (Narendra Modi) ಅಧಿಕಾರಕ್ಕೆ ರ‍್ತಾರೆ. ಮುನಿಸು, ಅಸಮಾಧಾನ ಎಲ್ಲವೂ ಶಮನ ಆಗಿದೆ. ಪಕ್ಷ ಅಂದ್ಮೇಲೆ ಅಸಮಾಧಾನ ಇರುತ್ತದೆ. ಇದೀಗ ಎಲ್ಲವನ್ನೂ ಬಿ.ಎಸ್ ಯಡಿಯೂರಪ್ಪ ಜೊತೆಗೆ ಮಾತನಾಡಲಾಗಿದೆ. ಈಗ ಅಸಮಾಧಾನವಿಲ್ಲ, ನಮ್ಮ ವಿಚಾರಗಳನ್ನ ತಿಳಿಸಲಾಗಿದೆ. ರಾಜಕಾರಣದಲ್ಲಿ ೪೫ ರ‍್ಷ ಮಣ್ಣು ಹೊತ್ತಿದ್ದೇನೆ ಎಂದಿದ್ದಾರೆ ಮಾಜಿ ಸಚಿವ ಸೋಮಣ್ಣ.
ನಾವು ಟಿಕೆಟ್ ಬಗ್ಗೆ ರ‍್ಚೆ ಮಾಡಲು ಬಂದಿರಲಿಲ್ಲ. ನೋವುಗಳ ಬಗ್ಗೆ ರ‍್ಚೆಯಾಗಿದೆ. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ಯಡಿಯೂರಪ್ಪ, ವಿಜಯೇಂದ್ರ (BY Vijayendra) ಜೊತೆ ರ‍್ಚೆಯಾಗಿದೆ. ಯಾವುದೇ ಗೊಂದಲ ಬೇಡ ಅಂತ ಹೇಳಿದ್ದಾರೆ. ಮುಂದಿನ ಮೇ ವರೆಗೂ ಚುನಾವಣೆ ಕಾವು ಇರಲಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವ ಬಯಕೆ, ಅದಕ್ಕೆ ಪಣ ತೊಟ್ಟಿದ್ದೇವೆ. ನನ್ನ ಅಸಮಾಧಾನ ಈಗಾಗಲೇ ಹೊರ ಹಾಕಿದ್ದೇನೆ. ನಿಮಗೂ ಗೊತ್ತಿದೆ. ಎಲ್ಲದಕ್ಕಿಂತ ದೇಶ ದೊಡ್ಡದು. ಯಡಿಯೂರಪ್ಪ ಅವರು ಹೇಳಿದ್ದಾರೆ, ಒಂದಾಗಿ ಹೋಗೋಣ ಅಂತ ಎಂದಿದ್ದಾರೆ.
ನಾನೂ ಕೂಡ ಟಿಕೆಟ್ ಆಕಾಂಕ್ಷಿ ಅಂತ ಹೇಳಿದ್ದೇನೆ. ನಾನು ಯಾವುದಾದ್ರೂ ಪಕ್ಷಕ್ಕೆ ಹೋಗ್ತೀನಿ ಅಂತ ಎಲ್ಲೂ ಹೇಳಿಲ್ಲ ಎಂದಿರುವ ಸೋಮಣ್ಣ, ನೀವು ಕುಸ್ತಿ ಆಡಲ್ವಾ.? ಮ್ಯಾನೇಜ್ಮೆಂಟ್ ಜೊತೆ ಕುಸ್ತಿ ಮಾಡಲ್ವಾ.? ಅದೇ ರೀತಿ ನಮ್ಮದೂ ಸಣ್ಣಪುಟ್ಟ ಮನಸ್ಥಾಪ ಎಂದು ಮಾಧ್ಯಮದವರಿಗೇ ತಿರುಗುಬಾಣ ಮಾಡಿದ್ದಾರೆ. ತುಮಕೂರಿನಲ್ಲಿ ಹಾಲಿ ಸಂಸದರು ವಯಸ್ಸಿನ ಕಾರಣ ಸ್ರ‍್ಧೆ ಮಾಡಲ್ಲ ಅಂದ್ರು. ಅದಕ್ಕೆ ಅದು ಬಿಜೆಪಿ ಸೀಟು ಆಗಿದೆ. ಜೆಡಿಎಸ್ ಸೀಟು ಅಂತಲ್ಲ. ಗೆಲ್ಲೋದು ಮುಖ್ಯ ಅಷ್ಟೆ ಎಂದು ತುಮಕೂರಲ್ಲಿ ಸ್ರ‍್ಧೆ ಇಂಗಿತ ಮಾಡಿದ್ದಾರೆ.
ಹೈಕಮಾಂಡ್ ತುಮಕೂರು (Tumkur) ಕ್ಷೇತ್ರದಿಂದ ಟಿಕೆಟ್ ಕೊಡುವುದಕ್ಕೆ ಯಡಿಯೂರಪ್ಪ ಅಡ್ಡಿಯಾಗಿದ್ರು ಅನ್ನೋ ಮಾಹಿತಿ ಸೋಮಣ್ಣಗೆ ಲಭ್ಯವಾಗಿತ್ತು. ಇನ್ನೂ ರ‍್ನಾಟಕದ ಟಿಕೆಟ್ ಘೋಷಣೆ ಆಗಿಲ್ಲ. ಅಷ್ಟರಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವೊಲಿಸಿ ಅನ್ನೋ ಸಂದೇಶ ಹೈಕಮಾಂಡ್‌ನಿಂದ ಬಂದಿದ್ದರಿಂದ ಮಾಜಿ ಸಿಎಂ ಬಿಎಸ್‌ವೈ ಭೇಟಿ ಮಾಡಿ ರ‍್ಚೆ ನಡೆಸಿದ್ದಾರೆ. ಹಿಂದಿನ ಮನಸ್ತಾಪಗಳನ್ನು ದೂರ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಇದೀಗ ಬಹುತೇಕ ಎಲ್ಲಾ ಮನಸ್ತಾಪಗಳು ದೂರ ಆಗಿದ್ದು, ಸೋಮಣ್ಣಗೆ ತುಮಕೂರು ಟಿಕೆಟ್ ಫಿಕ್ಸ್ ಎನ್ನುವಂತಾಗಿದೆ.
#BSY #BJP #BSYediyurappa #VSomanna #Loksabha #Election #ticket #Tumkur #Congress #JDS #election #LSPoll #NarendraModi