• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿಡಿಯೋ

ಬೆಳಗಾವಿಯ ಪುತ್ಥಳಿ ವಿಚಾರವಾಗಿ ನಾಳೆ ಸದನದಲ್ಲಿ ಸುದೀರ್ಘ ಚರ್ಚೆ ಮಾಡುತ್ತೇವೆ : BS Yediyurappa

ಬೆಳಗಾವಿಯ ಪುತ್ಥಳಿ ವಿಚಾರವಾಗಿ ನಾಳೆ ಸದನದಲ್ಲಿ ಸುದೀರ್ಘ ಚರ್ಚೆ ಮಾಡುತ್ತೇವೆ : BS Yediyurappa

Any Mind by Any Mind
December 19, 2021
in ವಿಡಿಯೋ
0
Share on WhatsAppShare on FacebookShare on Telegram

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ( ಎಂಇಎಸ್‌) ಪುಂಡಾಟದ ಬಗ್ಗೆ ನಾಳೆಯ ಸದನದಲ್ಲಿ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದರು. ಮಾಧ್ಯಮಗಳೊಂದಿಗೆ ಶಿವಮೊಗ್ಗದಲ್ಲಿ ಮಾತನಾಡಿ, ಅಪರಾಧಿಗಳನ್ನ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು.

ADVERTISEMENT

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿರುವ ಇಂಥಹ ಸಂದರ್ಭದಲ್ಲಿ ಉದ್ಧೇಶಪೂರ್ವಕವಾಗಿ ಈ ರೀತಿ ಗೊಂದಲ ಹಾಗೂ ಗಲಭೆ ಮಾಡುವ ಪ್ರಯತ್ನ ದುರಾದೃಷ್ಟಕರ. ಹಿರಿಯರ, ಮಹಾತ್ಮರ ಪುತ್ಥಳಿಗಳನ್ನ ಹಾಳು ಮಾಡುವ ಪ್ರಯತ್ನ ಹಾಗೂ ಇದೆಲ್ಲದನ್ನ ಸಹಿಸಲು ಸಾಧ್ಯವಿಲ್ಲ. ವಿಧಾನ ಮಂಡಲದಲ್ಲಿ ಸೋಮವಾರ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಗುವುದು. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಹೇಳಿದ್ದಾರೆ. ಸುಮಾರು ೨೭ ಜನರನ್ನ ಹಿಂಡಲಗಾ ಜೈಲಿಗೆ ಕಳುಹಿಸಿದ್ದೇವೆ. ಇನ್ನೂ ಯಾರ್‍ಯಾರು ಈ ಘಟನೆಯಲ್ಲಿ ಶಾಮೀಲಾಗಿದ್ದಾರೆ ಅವರನ್ನೆಲ್ಲಾ ಬಂಧಿಸುವ ಕೆಲಸವನ್ನ ಪೊಲೀಸರು ಮಾಡ್ತಾರೆ. ವಿಧಾನ ಮಂಡಲದಲ್ಲೂ ಕೂಡ ವ್ಯಾಪಕ ಚರ್ಚೆ ಮಾಡಿ ಇನ್ಮುಂದೆ ಈ ತರಹದ ಘಟನೆಗಳು ಮರುಕಳಿಸದಂತೆ ಏನೆಲ್ಲಾ ಎಚ್ಚರಿಕೆ ವಹಿಸಬೇಕೋ ಅಂತಹ ಪ್ರಾಮಾಣಿಕ ಪ್ರಯತ್ನ ಮಾಡ್ತೀವಿ. ಅಪರಾಧಿಗಳು ಯಾರೇ ಇರಲಿ ಅವರ ಮೇಲೆ ಶಿಸ್ತಿನ ಕ್ರಮ ಹಾಗೂ ತೀವ್ರ ಕ್ರಮ ಕೈಗೊಳ್ಳಲಾಗುತ್ತೆ.

ಎಂಇಎಸ್‌ ಬೆಳಗಾವಿಯಲ್ಲಿನ ಪುಂಡಾಟಕ್ಕೆ ಪರೋಕ್ಷವಾಗಿ ಬಿಜೆಪಿಯೇ ಕಾರಣ. ಹಿಂದೆಲ್ಲಾ ಪಕ್ಷವೇ ಬೆಂಬಲ ನೀಡಿಕೊಂಡು ಬಂದಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಇವೆಲ್ಲಾ ಸತ್ಯಕ್ಕೆ ದೂರವಾದ ಸಂಗತಿಗಳು. ಕಾಂಗ್ರೆಸ್‌ ನಾಯಕರು ಸುಮ್ಮನೇ ಆರೋಪ ಮಾಡುತ್ತಾರೆ. ಯಾರೇ ತಪ್ಪು ಮಾಡಿದರೂ ಸಹ ಕ್ಷಮಿಸೋ ಪ್ರಶ್ನೆಯೇ ಇಲ್ಲ. ಖಂಡಿತಾ ಕ್ರಮ ಕೈಗೊಳ್ಳಲಾಗುತ್ತೆ. ಕೆಲವರನ್ನ ಈಗಾಗಲೇ ಜೈಲಿಗೆ ಕಳುಹಿಸಿದ್ದೇ ಇದಕ್ಕೆ ಉದಾಹರಣೆ ಎಂದು ಯಡಿಯೂರಪ್ಪ ಹೇಳಿದರು.

ಇನ್ನು ಸಚಿವ ಸಂಪುಟ ವಿಸ್ತರಣೆ ಹಾಗೂ ಹಿರಿಯ ಶಾಸಕರ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಯಡಿಯೂರಪ್ಪ ಅದೆಲ್ಲಾ ಸಿಎಂ ಬಸವರಾಜ್‌ ಬೊಮ್ಮಾಯಿಗೆ ಬಿಟ್ಟ ವಿಷಯ ಎಂದರು. ಸಚಿವ ಸಂಪುಟದ ವಿಷಯ ನನಗೆ ಗೊತ್ತಿಲ್ಲ. ಅದನ್ನ ಸಿಎಂ ಬಸವರಾಜ್‌ ಬೊಮ್ಮಾಯಿಯವರನ್ನೇ ಕೇಳಬೇಕು. ನನಗೆ ಗೊತ್ತಿರೋ ಹಾಗೆ ಇದುವರೆಗೆ ಯಾವುದೇ ಆ ತರಹದ ಸುದ್ದಿಗಳಿಲ್ಲ. ತಮ್ಮ ಪುತ್ರ ಬಿವೈ ವಿಜಯೇಂದ್ರ ಸಚಿವರಾಗಬೇಕು ಎಂಬ ವಿಷಯದ ಮೇಲೂ ಕೂಡ ಪ್ರತಿಕ್ರಿಯೆಗೆ ನಿರಾಕರಿಸಿ ಈ ಕುರಿತು ಯಾವುದೇ ಚರ್ಚೆಯಾಗಿಲ್ಲ. ವಿಜಯೇಂದ್ರ ಸಚಿವ ಸಂಪುಟಕ್ಕೆ ತೆಗೆದುಕೊಳ್ಳವ ವಿಚಾರ ಹೈ ಕಮಾಂಡ್‌ಗೆ ಬಿಟ್ಟಿದ್ದು ಹಾಗೂ ಸಿಎಂ ಬಸವರಾಜ್‌ ಬೊಮ್ಮಾಯಿಗೆ ಬಿಟ್ಟ ವಿಚಾರ ಎಂದರು.

ಮತಾಂತರ ಕಾಯ್ದೆ ವಿಚಾರದಲ್ಲಿ ನಮಗೆ ನೂರಕ್ಕೆ ನೂರು ಬಹುಮತ ಸಿಗುತ್ತೆ. ಅದನ್ನ ಜಾರಿಗೆ ತಂದೇ ತರುತ್ತೇವೆ. ಮತಾಂತರ ಕಾಯ್ದೆ ಅಗತ್ಯವಿರುವಂತಹದು. ವಿಧಾನ ಪರಿಷತ್‌ನಲ್ಲೂ ಅದನ್ನ ಜಾರಿಗೊಳಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

Tags: BJPCongress PartyCovid 19ಕೋವಿಡ್-19ಬಿ ಎಸ್ ಯಡಿಯೂರಪ್ಪಬಿಜೆಪಿಬೆಳಗಾವಿಯ ಪುತ್ಥಳಿಸಿದ್ದರಾಮಯ್ಯ
Previous Post

ಭೂಕಬಳಿಕೆ ಪ್ರಕರಣ: ಭೈರತಿ ಬಸವರಾಜ್ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ ನಾಯಕರಿಂದ ಪ್ರತಿಭಟನೆ

Next Post

ಉದ್ಧವ್ ದೇವ್ರಲ್ಲ, ಡಿಕೆ ಶಿವಕುಮಾರ್ ಸಾಚ ಅಲ್ಲ : ಸಚಿವ ಈಶ್ವರಪ್ಪ ಕಿಡಿ

Related Posts

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
April 9, 2026
0

ಮಾರ್ಗದ ಉದ್ದಕ್ಕೂ ಜನರೊಂದಿಗೆ ಬೆರೆತ ಸಚಿವದ್ವಯರು; ಲೆವೆಲ್ ಕ್ರಾಸಿಂಗ್, ಅಂಡರ್ ಪಾಸ್, ಮೇಲು ಸೇತುವೆ ಬಗ್ಗೆ ಬೇಡಿಕೆಗಳ ಸುರಿಮಳೆ. ಇನ್ನಷ್ಟು ಡೆಮೋ ರೈಲು ಸಂಚಾರ ಮತ್ತು ಪ್ರಮುಖ...

Read moreDetails

RCB ಟಿಕೆಟ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..

March 27, 2026
ರಾಜ್ಯದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಕೇಂದ್ರದಲ್ಲಿ ರೈತರನ್ನ ಸಾ**..!

ರಾಜ್ಯದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಕೇಂದ್ರದಲ್ಲಿ ರೈತರನ್ನ ಸಾ**..!

March 14, 2026

ವಿಧಾನಸಭೆ ಬಜೆಟ್ ಅಧಿವೇಶನ ನೇರಪ್ರಸಾರ..!

March 12, 2026
ನನ್ನ ತಂದೆ ಕನಸು ಕಂಡಿದ್ರು, ನಾನು ನನಸು ಮಾಡಿದ್ದೇನೆ

ನನ್ನ ತಂದೆ ಕನಸು ಕಂಡಿದ್ರು, ನಾನು ನನಸು ಮಾಡಿದ್ದೇನೆ

March 8, 2026
Next Post
ಉದ್ಧವ್ ದೇವ್ರಲ್ಲ, ಡಿಕೆ ಶಿವಕುಮಾರ್ ಸಾಚ ಅಲ್ಲ : ಸಚಿವ ಈಶ್ವರಪ್ಪ ಕಿಡಿ

ಉದ್ಧವ್ ದೇವ್ರಲ್ಲ, ಡಿಕೆ ಶಿವಕುಮಾರ್ ಸಾಚ ಅಲ್ಲ : ಸಚಿವ ಈಶ್ವರಪ್ಪ ಕಿಡಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada