ದಾವಣಗೆರೆಯಲ್ಲಿ (Davanagere) ಭೀಕರ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ ಹಾಗೂ ಬೈಕ್ ನಡುವೆ ಅಪಘಾತವಾಗಿದ್ದು (Accident) ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ದಾವಣಗೆರೆ ತಾಲ್ಲೂಕಿನ ದಾವಣಗೆ ಚನ್ನಗಿರಿ ಮುಖ್ಯ ರಸ್ತೆಯ ಆರನೇಕಲ್ ಬಳಿ ಘಟನೆ ನಡೆದಿದೆ.

ಹದಡಿಗ್ರಾಮದ ರಾಮಪ್ಪ. (40) ಹಾಗೂ ರಾಜು. (38) ಮೃತರು ಎನ್ನಲಾಗಿದ್ದು, KA.25 C 4443 ನಂಬರ್ ಖಾಸಗಿ ಬಸ್ ದಾವಣಗೆರೆ ಯಿಂದ ಚನ್ನಗಿರಿ ಕಡೆ ಚಲಿಸುತ್ತಿದ್ದ ಬಸ್ KA17 ER 8189 ನಂಬರ್ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಈ ಖಾಸಗಿ ಬಸ್ ಗುದ್ದಿದ ರಭಸಕ್ಕೆ ಬೈಕ್ ಸಾವಾರರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಹದಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.






