ಕಾರು ಅಪಘಾತದಲ್ಲಿ BRS ಪಕ್ಷದ ಶಾಸಕಿ ಲಾಸ್ಯ ನಂದಿತಾ ಮೃತಪಟ್ಟಿದ್ದಾರೆ. ತೆಲಂಗಾಣದ ಸಿಕಂದರಾಬಾದ್ ಕಂಟೋನ್‌ಮೆಂಟ್ ಕ್ಷೇತ್ರದ ಶಾಸಕಿಯಾಗಿದ್ದ ಅವರು ಸಂಗಾರೆಡ್ಡಿಯ ಅಮೀನಪುರ ಮಂಡಲದ ವ್ಯಾಪ್ತಿಯ ಸುಲ್ತಾನ್‌ಪುರ ಹೊರ ರಿಂಗ್ ರಸ್ತೆಯ ಸಮೀಪ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಶಾಸಕಿ ಲಾಸ್ಯ ನಂದಿತಾ ಅವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸಮೀಪದ ರೋಡ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ಗಾಯಗೊಂಡಿದ್ದ ಲಾಸ್ಯ ನಂದಿತಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣದಿಂದಾಗಿ 37 ವರ್ಷದ ಲಾಸ್ಯ ಅವರು ಮೃತಪಟ್ಟಿದ್ದಾರೆ.
ಲಾಸ್ಯ ನಂದಿತಾ ಅವರು ಕಳೆದ ವರ್ಷದ ನವೆಂಬರ್‌ನಲ್ಲಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಇವರು ಮಾಜಿ ಶಾಸಕ, ದಿವಂಗತ ಜಿ. ಸಾಯಣ್ಣ ಅವರ ಪುತ್ರಿಯಾಗಿದ್ದಾರೆ. 2023ರ ಫೆಬ್ರವರಿ 19ರಂದು ಲಾಸ್ಯ ನಂದಿತಾ ಅವರ ತಂದೆ ಮೃತಪಟ್ಟಿದ್ದರು. ಇದಾದ ಒಂದು ವರ್ಷದ ಬಳಿಕ ಲಾಸ್ಯ ನಂದಿತಾ ಮೃತಪಟ್ಟಿದ್ದಾರೆ. ಲಾಸ್ಯ ನಂದಿತಾ ಅವರ ನಿಧನದ ಹಿನ್ನೆಲೆಯಲ್ಲಿ ಬಿಆರ್‌ಎಸ್ ನಾಯಕರು, ಮುಖಂಡರು ಕಂಬನಿ ಮಿಡಿದಿದ್ದಾರೆ.
#Accident #LasyaNanditha #BRSMLA #Telangana #Death