ರಾಜಕಾರಣದಲ್ಲಿ ಅಷ್ಟಾಗಿ ಹೆಸರು ಮಾಡದೇ, ಒಂದು ಬಾರಿ ಗೆಲುವು, ಇನ್ನೊಂದು ಬಾರಿ ಸೋಲನ್ನ ಕಂಡ ನಟಿ ಕಂ ರಾಜಕಾರಣಿ ರಮ್ಯಾ(Ramya), total ಆಗಿ ಪಾಲಿಟಿಕ್ಸ್‌ನಿಂದಲೇ ದೂರವಾಗುತ್ತಿದ್ದಾರಾ? ಎಮನಬ ಪ್ರಶ್ನೆ ಹುಟ್ಟುಕೊಂಡಿದೆ. ನಟನೆಯಲ್ಲಿ ಉತ್ತಮ ಹೆಸರು ಮಾಡಿ, ಉನ್ನತ ಸ್ಥಾನದಲ್ಲಿದ್ದಾಗಲೇ ರಮ್ಯಾ, ರಾಜಕಾರಣಕ್ಕೆ ಎಂಟ್ರಿ ಕೊಟ್ಟವರು. ಆದ್ರೆ, ಇದೀಗ ಅವರೇ ರಾಜಕಾರಣದಿಂದ ದೂರ ಸರಿಯುತ್ತಿದ್ದಾರಾ? ಎಂಬ ಪ್ರಶ್ನೆ ಹುಟ್ಟಿದೆ.

ರಾಜಕಾರಣ ಸಾಕಾಯ್ತಾ ರಮ್ಯಾಗೆ?:
2012 ರಲ್ಲಿ ಯೂತ್ ಕಾಂಗ್ರೆಸ್‌ನ(Congress) ಸದಸ್ಯೆಯಾಗಿ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ ರಮ್ಯಾ, 2013 ರಲ್ಲಿ ಮಂಡ್ಯ(Mandya) ಲೋಕಸಭಾ(Lokasaba) ಕ್ಷೇತ್ರದ ಉಪ-ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಕಣಕ್ಕಿಳಿದು, ಭರ್ಜರಿ ಜಯಗಳಿಸಿದ್ರು. ಅಂದು ರಮ್ಯಾ ಪರ ಇಡೀ ಕಾಂಗ್ರೆಸ್‌ನ ದಿಗ್ಗಜ ನಾಯಕರುಗಳೇ ನಿಂತಿದ್ರು. ಸಿಎಂ ಸಿದ್ಧರಾಮಯ್ಯ(Siddaramaiah), ಸಚಿವ ಅಂಬರೀಶ್(Ambareesh), ಡಿ.ಕೆ.ಶಿವಕುಮಾರ್(DK Shivakumar), ಎಸ್.ಎಂ.ಕೃಷ್ಣ(SM Krishna). ಹೀಗೆ ಸಾಲು ಸಾಲು ನಾಯಕರುಗಳು ರಮ್ಯಾ ಗೆಲುವಿಗೆ ಸಾಥ್ ನೀಡಿದ್ರು. ಆದ್ರೆ, ಕೇವಲ ಆರು ತಿಂಗಳ ಅವಧಿಗಷ್ಟೇ ಸಂಸದೆಯಾಗಿ ಆಯ್ಕೆಯಾಗಿದ್ದ ರಮ್ಯಾಗೆ, 2014 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆ ಚುನಾವಣೆಯಲ್ಲಿ 5500 ಮತಗಳ ಅಂತರದಿಂದ, ಜೆಡಿಎಸ್‌ನ ಸಿ.ಎಸ್. ಪುಟ್ಟರಾಜು ವಿರುದ್ಧ ರಮ್ಯಾ ಪರಾಭವಗೊಂಡಿದ್ರು.

ಬಳಿಕ ಮಂಡ್ಯದಲ್ಲಿ ಮಾಡಿದ್ದ ಮನೆಯನ್ನು ಸಹ ಖಾಲಿ ಮಾಡಿಕೊಂಡು ರಮ್ಯಾ ಹೊರಟು ಹೋಗಿದ್ದರು. ಇನ್ನು 2019 ರಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ರಮ್ಯಾರ ಬದಲಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಅವರಿಗೆ ಟಿಕೆಟ್ ಕೊಟ್ಟಿತ್ತು. ಆ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದ್ದು, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸಂಸತ್ ಪ್ರವೇಶಿಸುವಂತೆ ಮಾಡಿತ್ತು.

ಇಷ್ಟೆಲ್ಲದರ ಮಧ್ಯೆ ಮತ್ತೆ ರಮ್ಯಾ 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿದ್ರು. ಆದ್ರೆ ಅದ್ಯಾವುದು ವರ್ಕ್‌ಔಟ್ ಆಗಲಿಲ್ಲ. ಇನ್ನು ಈ ಬಾರಿ ಮಂಡ್ಯ ಕ್ಷೇತ್ರಕ್ಕೆ ಉದ್ಯಮಿ ಸ್ಟಾರ್ ಚಂದ್ರು @ ವೆಂಕಟರಮಣೇಗೌಡ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುತ್ತಿದ್ದು, ರಮ್ಯಾಗೆ ಅವಕಾಶ ಕೈ ತಪ್ಪಿದೆ. ಇದರಿಂದ ತೆರೆಮರೆಯಲ್ಲಿ ಅಸಮಾಧಾನಗೊಂಡಿರುವ ರಮ್ಯಾ, ರಾಜಕಾರಣದಿಂದಲೇ ದೂರವಾಗಲು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಚರ್ಚೆಯಾಗುತ್ತಿದೆ.

#Ramya #Mandya #LokaSaba #Congress #Election #Actress #Kannada