ಶ್ರೀಮಂತರ ಮನೆಗಳನ್ನು ನೋಡಿ ಕಳ್ಳತನ ಮಾಡಿ, ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡ್ತಿದ್ದ ಆರೋಪಿಯನ್ನು ವಿವಿ ಪುರಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳ್ಳತನ ಮಾಡಿದ್ದ ಚಿನ್ನವನ್ನು ಸಂಬಂಧಿಕರ ಮನೆಯಲ್ಲಿ ಇಡ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ರೂ ಕಳವು ಆದ್ದ ಚಿನ್ನಾಭರಣವನ್ನು ರಿಕವರಿ ಮಾಡುವುದು ಕಷ್ಟ ಆಗ್ತಿತ್ತು. ಅಂತಿಮವಾಗಿ ತನ್ನ ಬಾವನ ಪ್ರಾಣ ಕಳೆದುಕೊಳ್ಳುವಂತಾಗಿದೆ/
ಐಷಾರಾಮಿ ಮನೆಗಳನ್ನು ಗುರ್ತಿಸಿ, ಲಾಕ್ ಮುರಿದು ಮನೆ ದೋಚುತ್ತಿದ್ದ ಆರೋಪಿ ಕಳ್ಳತನಕ್ಕೂ ಮುನ್ನ ಅದೇ ಮನೆಯಲ್ಲಿ ಕೆಲಸ ಮಾಡ್ತಿದ್ದವರನ್ನು ಪರಿಚಯ ಮಾಡ್ಕೊಂಡು ಹಣದ ಆಸೆ ತೋರಿಸಿ, ಮಾಹಿತಿ ಪಡ್ಕೊಳ್ತಿದ್ದ. ಬೆಂಗಳೂರಿನ ವಿವಿ ಪುರಂನ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸೆಲ್ಲರ್‌ನಿಂದ ಮನೆ ಗ್ರಿಲ್ ಹೊಡೆದು, ಮನೆಗೆ ಎಂಟ್ರಿ ಕೊಟ್ಟಿದ್ದ.. ಮನೆಯಲ್ಲಿದ್ದ 2 KG ಚಿನ್ನಾಭರಣ ಕಳ್ಳತನ ಮಾಡ್ಕೊಂಡು ಎಸ್ಕೇಪ್ ಆಗಿದ್ದ. ಆ ಚಿನ್ನವನ್ನು ಸಂಬಂಧಿಕರ ಮನೆಯಲ್ಲಿ ಇಟ್ಟು ಪೊಲೀಸರ ಅತಿಥಿಯಾಗಿದ್ದಾನೆ.
ವಿವಿ ಪುರಂನಲ್ಲಿ ಕಳ್ಳತನ ಮಾಡಿದ್ದ 2 ಕೆಜಿ ಚಿನ್ನವನ್ನು ಮೂರು ಭಾಗ ಮಾಡಿದ್ದ ಆರೋಪಿ, ಜಕ್ಕೂರಿನ ಅಕ್ಕನ ಮನೆಯಲ್ಲಿ 650 ಗ್ರಾಂ, ಮುಂಬೈನ ಅಕ್ಕನ ಮನೆಯಲ್ಲಿ 350 ಗ್ರಾಂ ಹಾಗೂ ಕೊಲ್ಲಾಪುರದ ಸ್ನೇಹಿತನ ಮನೆಯಲ್ಲಿ 600 ಗ್ರಾಂ ಚಿನ್ನಾಭರಣ ಇಟ್ಟಿದ್ದನು. ಟವರ್ ಲೊಕೇಷನ್ ಆಧರಿಸಿ ಆರೋಪಿಯನ್ನ ಮಹಾರಾಷ್ಟ್ರದಲ್ಲಿ ಬಂಧನ ಮಾಡಿದ ಬಳಿಕ ಮೂರೂ ಕಡೆ ಚಿನ್ನವನ್ನು ಸೀಜ್ ಮಾಡಲಾಗಿತ್ತು.
ಜಕ್ಕೂರಿನ ಅಕ್ಕನ ಗಂಡ ಬಾಮೈದನಿಂದ ಮರ್ಯಾದೆ ಹೋಯ್ತು ಅಂತಾ ಬಾವ ಮೋಹನ್ ಕುಮಾರ್ ಕತ್ತು ಕೊಯ್ದುಕೊಂಡು ಸೂಸೈಡ್ ಮಾಡಿಕೊಂಡಿದ್ದಾರೆ. ಅಕ್ಕ ತಂಗಿ ಜೀವನ ಚೆನ್ನಾಗಿರಲಿ ಅಂತ ಸಹೋದರರು ಬಯಸುವವಾಗ ತಾನು ಮಾಡಿದ ಕಳ್ಳತನವೇ ಸಹೋದರಿ ಗಂಡನ ಪ್ರಾಣ ತೆಗೆದಿದೆ ಅನ್ನೋದು ವಿಶೇಷ..