
ಭಾರತದಲ್ಲಿ ಸ್ಟ್ರೀಟ್ ಫುಡ್ ಭಾರಿ ಜನಪ್ರಿಯ. ವಿದೇಶಗಳಿಂದ ಬರವು ಹಲವು ಪ್ರವಾಸಿಗರು ಭಾರತದ ಬೀದಿ ಬದಿಯ(India’s street side) ಆಹಾರ ಟೇಸ್ಟ್ ಮಾಡುತ್ತಾರೆ.ಹೀಗೆ ಉಜ್ಜೈನಿ ಪ್ರವಾಸಕ್ಕೆ ಆಗಮಿಸಿದ ಬ್ರಿಟಿಷ್ ಯೂಟ್ಯೂಬರ್ (British YouTuber! )ಸ್ಯಾಮ್ಯುಯೆಲ್ ನಿಕೋಲಸ್ ಪೆಪ್ಪರ್ ಬೀದಿ ಬದಿಯ (Bong Lassi is drunk)ಬಾಂಗ್ ಲಸ್ಸಿ ಕುಡಿದಿದ್ದಾರೆ.

ಇಷ್ಟೇ ನೋಡಿ, ನಿಕೋಲಸ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ. ಇದೀಗ ಚೇತರಿಸಿಕೊಲ್ಳುತ್ತಿರುವ ನಿಕೋಸಲ್, ಇನ್ನೆಂದು ಭಾರತದ ಬೀದಿ ಬದಿಯ ಆಹಾರ ತಿನ್ನುವ ಧೈರ್ಯ ಮಾಡುವುದಿಲ್ಲ ಎಂದಿದ್ದಾರೆ.
https://www.instagram.com/reel/DAEPvsmuAkW/?igsh=YXM1dGYzMGFiOHk5
ಸ್ಯಾಮ್ ಪೆಪ್ಪರ್ ಎಂದೇ ಯೂಟ್ಯೂಬ್ ಮೂಲಕ ಜನಪ್ರಿಯವಾಗಿರುವ ನಿಕೋಸಲ್, ಉಜ್ಜೈನಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಬೀದಿ ಬದಿ ವ್ಯಾಪಾರಿ ಬಳಿ ತೆರಳಿ ಬಾಂಗ್ ಲಸ್ಸಿ ಕುಡಿಯಲು ಮುಂದಾಗಿದ್ದಾರೆ. ಗಾಂಜಾ ರೀತಿಯ ಮಾದಕ ವಸ್ತುವನ್ನು ಲಸ್ಸಿಯಲ್ಲಿ ಮಿಶ್ರಣ ಮಾಡಿ ನೀಡುವ ಈ ಪಾನೀಯ ಭಾರಿ ಜನಪ್ರಿಯ. ಈ ಬಾಂಗ್ ಲಸ್ಸಿ ರೆಡಿ ಮಾಡುತ್ತಿರುವ ಹಾಗೂ ಕುಡಿಯುವ ವಿಡಿಯೋವನ್ನು ನಿಕೋಲಸ್ ಪೋಸ್ಟ್ ಮಾಡಿದ್ದ.
Sam has a melt down and starts crying when the Indian nurses leave his drip valve undone pic.twitter.com/wNlaTbVlhJ
— Sam Pepper Clips (@SamPepperClips) September 22, 2024
ಆದರೆ ಕುಡಿದ ಬೆನ್ನಲ್ಲೇ ನಿಕೋಲಸ್ ಅಸ್ವಸ್ಥನಾಗಿದ್ದಾನೆ. ತನ್ನ ಅಸ್ವಸ್ಥತೆಗೆ ಕಾರಣವನ್ನೂ ನೀಡುದ್ದಾನೆ. ಲಸ್ಸಿಯಲ್ಲಿ ಬಾಂಗ್ ಇರುವ ಕಾರಣಕ್ಕೆ ಅಸ್ವಸ್ಥನಾಗಿಲ್ಲ. ಆದರೆ ಶುಚಿತ್ವ ಎಳ್ಳಷ್ಟು ಇಲ್ಲ. ಬೀದಿ ಬದಿಯ ವ್ಯಾಪಾರಿಯ ಕೈಗಳ ಬೆರಳು, ಉಗುರು ಕಪ್ಪಾಗಿತ್ತು. ಅದೇ ಕೈಗಳನ್ನು ಗ್ಲಾಸಿನಲ್ಲಿಟ್ಟು ಲಸ್ಸಿಯನ್ನು ತೆಗೆಯುತ್ತಾರೆ. ಬಳಿಕ ಬಟ್ಟೆಗೆ ಬಾಂಗ್ ಹುಡಿ ಹಾಕಿ ಅದಕ್ಕೆ ಲಸ್ಸಿ ಮಿಶ್ರಣ ಮಾಡುತ್ತಾರೆ. ಇದನ್ನು ಕೂಡ ಕೈಗಳಲ್ಲೇ ಉಜ್ಜಿ ಮಾಡುತ್ತಾರೆ. ಬಾಂಗ್ ಲಸ್ಸಿ ತಯಾರಿಕೆಯಲ್ಲಿನ ಶುಚಿತ್ವದ ಕೊರತೆ, ಗುಣಮಟ್ಟದ ಉತ್ಪನ್ನಗಳ ಕೊರತೆಯಿಂದ ಈ ರೀತಿ ಆಗಿದೆ ಎಂದು ವಿಡಿಯೋ ಸಮೇತ ನಿಕೋಲಸ್ ವಿವರಿಸಿದ್ದಾನೆ.