ರಾಜಾಜಿನಗರದ ಗಿರಿಯಾಸ್ ಸಿಗ್ನಲ್‌ನಿಂದ ಟೋಲ್‌ಗೇಟ್‌ಗೆ ಸಂಪರ್ಕಿಸುವ ರಸ್ತೆಯಲ್ಲಿ ಕಳೆದ ಆರು ವರ್ಷಗಳಿಂದ ಬ್ರಿಡ್ಹ್ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಕುಂಟುತ್ತಾ ಸಾಗಿದೆ. ಈ ಬಗ್ಗೆ ಸ್ಥಳಿಯರನ್ನು ವಿಚಾರಿಸಿದರೆ ಮೇಲ್ಸೇತುವೆಯ ನಕಾಶೆ ಇದ್ದದೆ ಒಂದು ಆದರೆ, ಯೋಜನೆ ಅನುಷ್ಠಾನ ಆದ ನಂತೆ ಜನಪ್ರತಿನಿಧಿಗಳ ತಿಕ್ಕಾಟದಿಂದ ಕಾಮಗಾರಿ ಸಮಯದಲ್ಲಿ ಬೇರೆಯದೆ ಆಗಿದೆ ಎಂದು ಹೇಳುತ್ತಾರೆ. ಈ ಬಗ್ಗೆ ಜನಪ್ರತಿನಿಧಿಗಳು ಅಷ್ಟಾಗಿ ತಲೆಕೆಡಸಿಕೊಳ್ಳದ ಕಾರಣ ಕಾಮಗಾರಿ ವಿಳಂಬವಾಗುವುದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.