ಮದುವೆ ಸಮಾರಂಭದಲ್ಲಿ ಮದುಮಗಳು ಹೆಚ್ಚು ತಲೆ ಕೆಡೆಸಿಕೊಳ್ಳುವಂಥದ್ದು ಸೀರೆ, ಒಡವೆ ,ಮೇಕಪ್ (makeup)ಅಲಂಕಾರದ ಬಗ್ಗೆ ..ಆದರೆ ಇತ್ತೀಚಿನ ದಿನಗಳಲ್ಲಿ ಮತ್ತೊಂದು ವಿಚಾರದ ಬಗ್ಗೆ ಹೆಣ್ಣು ಮಕ್ಕಳು ತುಂಬಾನೇ ತಲೆಕೆಡಿಸಿಕೊಳ್ತಿದ್ದಾರೆ ಅದುವೆ ಫೂಟ್ ವೇರ್(foot wear)
ಹೌದು, ಫೂಟ್ ವೇರ್ (foot wear) ಕೂಡ ತುಂಬಾನೇ ಇಂಪಾರ್ಟೆಂಟ್ (important).. ಹೆಣ್ಣು ಮಕ್ಕಳು ತಮಗೆ ಬೇಕಾದಾಗೆ ಅಲಂಕಾರ ಮಾಡಿಕೊಂಡು ಸುಂದರವಾದ ಬಟ್ಟೆಗಳನ್ನು ಧರಿಸುತ್ತಾರೆ.ಆದರೆ ನಾವು ನಡಿಬೇಕಾದ್ರೆ ನಮ್ಮ ಪಾದರಕ್ಷೆಗಳನ್ನ ಕೂಡ ನೋಡುಲು ಹೆಚ್ಚು ಜನ ಇರ್ತಾರೆ.. ಯಾವ ರೀತಿಯ ಸ್ಲಿಪ್ಪರ್ಸ್ ನ (slippers)ವೇರ್ ಮಾಡಿದ್ದಾರೆ ಅನ್ನೋದು ಕೂಡ ಗಮನಹರಿಸುವವರ ಸಂಖ್ಯೆ ಜಾಸ್ತಿಯಾಗಿದೆ..
ನಾವೇನಾದ್ರೂ ಮಾರುಕಟ್ಟೆಗೆ ಹೋಗಿ ಮದುವಣಗಿತ್ತಿಗೆ ಸ್ಲಿಪ್ಪರ್ ತೋರಿಸಿ ಅಂತ ಕೇಳಿದ್ರೆ ಸಾಕು ಅಬ್ಬಬ್ಬಾ ರಾಶಿ ರಾಶಿ ಕಲೆಕ್ಷನ್ ಗಳನ್ನು (collections)ತೋರಿಸ್ತಾರೆ.. ಸೀರೆಗೆ ಒಂದು ರೀತಿಯ ಚಪ್ಪಲಿಗಳು ಸಿಕ್ಕಿದ್ರೆ , ಲೆಹಂಗಾಗೆ (Lehenga)ಮತ್ತೊಂದು ರೀತಿಯ ಫುಟ್ ವೇರ್ ಸಿಗತ್ತೆ.ಹೀಗೆ ಸಂಗೀತ್ ಗೆ(sangeet), ರಿಸೆಪ್ಶನ್ ಗೆ (reception )ಹಳದಿಗೆ ಪ್ರತಿಯೊಂದು ಇವೆಂಟ್ ಗೂ ಕೂಡ ಸಾಕಷ್ಟು ರೀತಿಯ ಫೂಟ್ ವೇರ್ ಕಲೆಕ್ಷನ್ ಗಳು ಲಭ್ಯವಿದೆ..
ಹೀಲ್ಸ್(heels),ಜುಟ್ಟಿ(jutti),ವೆಡ್ಜಸ್(wedges),ಫ್ಲ್ಯಾಟ್ಸ್(flats),ಪಂಪ್ಸ್(pumps),ಅಂಕಲ್ ಸ್ಟ್ರಾಪ್ಸ್(ankle straps),ಸ್ಟೈಲೆಟ್ಟೋಸ್ ಹೀಗೆ ಹೇಳ್ತಾ ಹೋದ್ರೆ ತುಂಬಾ ಇದೆ..ಅದರಲ್ಲೂ ಮಧುಮಗಳ ತಮ್ಮ ಬಟ್ಟೆಗೆ ಮ್ಯಾಚ್ ಆಗುವಂತ ಪಾದರಕ್ಷೆ ಯನ್ನ ಬಳಸ್ತಾರೆ..
ಆದ್ರೆ ಈಗ ತುಂಬಾ ಟ್ರೆಂಡ್ (trend)ಅಲ್ಲಿ ಇರುವಂತದ್ದು ಬ್ರೈಡಲ್ ಸ್ನೀಕರ್ಸ್.. ಹೌದು ಮುಂಚೆಲ್ಲ ಶೂಸ್ (shoes)ಹಾಗೂ ಸ್ನೀಕರ್ಸ್ ಅಂದ್ರೆ ನಾವು ಜೀನ್ಸ್, ಮಾಡ್ರನ್ ಡ್ರೆಸ್ (modern dress)ಗೆ ವೇರ್ ಮಾಡ್ತಾ ಇದ್ವಿ..ಆದ್ರೆ ಈಗ ಮಧುಮಗಳಿಗೂ ಸ್ನೀಕರ್ಸ್ (sneakers)ಬಂದಿರೋದು ವಿಶೇಷ..
ಬ್ರೈಡಲ್ ಸ್ಪೀಕರ್ಸ್ (bridal sneakers)ಅಂದ್ರೆ ಹೆಚ್ಚಾಗಿ ನಾವು ವೈಟ್ (white)ಹಾಗೂ ಗೋಲ್ಡನ್ (golden)ಕಾಂಬಿನೇಶನ್ ನಲ್ಲಿ ನೋಡ್ತೀವಿ ಅಥವಾ ಸಿಲ್ವರ್ ಹಾಗೂ ವೈಟ್ ಕಾಂಬಿನೇಶನ್ (combination)ನೋಡ್ತೀವಿ..ಆದರೆ ಇವಾಗ ಬಂದಿರುವಂತಹ ಬ್ರೈಡಲ್ ಸ್ನೀಕರ್ಸ್ ವೆರೈಟಿಯಾಗಿದೆ ..ಎಂಬ್ರಾಯ್ಡರಿ ವರ್ಕ್(embroidery), ಶಿಮ್ಮರ್ ವರ್ಕ್ (shimmer work), ಫ್ಲೋರಲ್ ಡಿಸೈನ್ (floral design)ಪ್ರಿಂಟೆಡ್ (printed)ಸ್ನೀಕರ್ಸ್ ಇವೇ..
ಹೆಚ್ಚಾಗಿ ಮೆಹಂದಿ, ಸಂಗೀತ ಹಾಗೂ ಹಳದಿ ಕಾರ್ಯಕ್ರಮಕ್ಕೆ ಲೆಹೆಂಗವನ್ನ ಧರಿಸಿದಾಗ ಹೆಣ್ಣು ಮಕ್ಕಳು ಸ್ನೀಕರ್ಸ್ ನ ಹಾಕ್ತಾರೆ.. ಇದರಲ್ಲೂ ಕೂಡ ಹೀಲ್ಸ್ ಹಾಗೂ ಫ್ಲ್ಯಾಟ್ ಸ್ನೀಕರ್ಸ್ ನಿಮಗೆ ದೊರೆಯತ್ತೆ..ಹಾಗೂ ಸ್ನೀಕರ್ಸ್ ಹಾಕಿದ್ರೆ ನಮಗೆ ತುಂಬಾ ಕಂಫರ್ಟ್ ಅಂತನು ಮದುಮಕ್ಕಳು ಅಭಿಪ್ರಾಯ..
ಒಟ್ನಲ್ಲಿ ಕಾಲಕ್ಕೆ ತಕ್ಕಂತೆ ಟ್ರೆಂಡ್ ಚೇಂಜ್ ಆಗ್ತಾ ಇದೆ ಟ್ರೆಂಡ್ ಗೆ ಅನುಗುಣವಾಗಿ ನಾವು ಬದಲಾಗುತ್ತಿದ್ದೇವೆ..