ಕುಸ್ತಿಪಟುಗಳ (wrestlers) ಪ್ರತಿಭಟನೆ (protest) ಇನ್ನೊಂದು ಹಂತಕ್ಕೆ ಹೋಗಿದ್ದು, ಕೇಂದ್ರ ಸರ್ಕಾರಕ್ಕೆ (Central government) ಮಹಾ ಅಘಾತವನ್ನ ಕೊಡಲು ಕುಸ್ತಿ ಪಟುಗಳು ತಯಾರಾಗಿದ್ದಾರೆ. ತಾವು ಗೆದ್ದ ಪದಕಗಳನ್ನ (medals) ಇಂದು ಹರಿದ್ವಾರದ (Haridwara) ಗಂಗಾನದಿಯಲ್ಲಿ (Ganga river) ಎಸೆಯುವುದಾಗಿ ತಮ್ಮ ಪ್ರಕಟಣೆಯಲ್ಲಿ ಕುಸ್ತಿ ಪಟುಗಳು ತಿಳಿಸಿದ್ದಾರೆ. ಆ ಬಳಿಕ ಇಂಡಿಯಾ ಗೇಟ್‌ನಲ್ಲಿ ಅಮರಣಾಂತ ಉಪವಾಸ ಕುಳಿತುಕೊಳ್ಳುವುದಾಗಿಯೂ ಸರ್ಕಾಕ್ಕೆ ಎಚ್ಚರಿಕೆಯನ್ನ ನೀಡಿದ್ದಾರೆ.
ಕುಸ್ತಿಪಟುಗಳು ಈಗಾಗಲೇ ಹರಿದ್ವಾರಕ್ಕೆ ತೆರಳಿದ್ದು, ಸಂಜೆ 6 ಗಂಟೆಗೆ ಪದಕಗಳನ್ನು ಗಂಗಾ ನದಿಗೆ ಎಸೆಯಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆನಂತರ ದಿಲ್ಲಿಯ ಇಂಡಿಯಾ ಗೇಟ್ ಬಳಿ ಆಮರಣಾಂತ ಉಪವಾಸ ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕುಸ್ತಿ ಪಟುಗಳ ಈ ನಿಲುವು ಇದೀಗ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.



ಭಾರತದ ಅಗ್ರ ಕುಸ್ತಿಪಟುಗಳಾದ ರಿಯೊ 2016 ರ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಟೋಕಿಯೊ ಒಲಂಪಿಕ್ಸ್ 2020 ರ ಪದಕ ವಿಜೇತ ಭಜರಂಗ್ ಪುನಿಯಾ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಅವರು ತಮ್ಮ ಮೆಡಲ್‌ಗಳನ್ನು ಎಸೆಯುವುದಾಗಿ ತಿಳಿಸಿದ್ದಾರೆ.

‘ಈ ನಮ್ಮ ಪದಕಗಳು ನಮ್ಮ ಜೀವನ ಮತ್ತು ಜೀವ. ನಾವು ಪದಕಗಳನ್ನ ಗಂಗಾ ನದಿಯಲ್ಲಿ ಹಾಕಿದ ನಂತರ, ನಾವು ಬದುಕುವುದರಲ್ಲಿ ಯಾವುದೇ ಅರ್ಥವಿಲ್ಲ. ಆದ್ದರಿಂದ ನಾವು ಇಂಡಿಯಾ ಗೇಟ್‌ಗೆ ಬಂದು ಅಲ್ಲಿಯೇ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ’ ಅಂತ ಕುಸ್ತಿಪಟುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ