ನವದೆಹಲಿ : ಮೇ.೩೦: ತಮಿಳು ಸ್ಟಾರ್ ನಟ ಧನುಷ್ ಅವರು ಬಾಬಾ ರಾಮದೇವ್ ರೀತಿ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ನಟ ಧನುಷ್ ಅವರ ಹೊಚ್ಚ ಹೊಸ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಗೆ ಕಾರಣವಾಗಿದೆ.
ಧನುಷ್ ಅವರು ಮುಂದಿನ ಚಿತ್ರ ಕ್ಯಾಪ್ಟನ್ ಮಿಲ್ಲರ್ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದ ನಟ ಧನುಷ್, ಮುಂಬೈ ಏರ್ಪೋರ್ಟ್ನಲ್ಲಿ ತಮ್ಮ ಅಭಿಮಾನಿಗಳಿಗೆ ಫೋಟೋ ನೀಡಲು ಮುಂದಾದರು. ಈ ವೇಳೆ ಅವರು ಕಾಣಿಸಿಕೊಂಡ ರೀತಿ ಬಹಳ ವಿಭಿನ್ನವಾಗಿದ್ದು, ಅವರ ಲುಕ್ ನೋಡಿ ಅಭಿಮಾನಿಗಳು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನಟ ಧನುಷ್ ಲುಕ್ ನೋಡಿದ ಅಭಿಮಾನಿಗಳು ಕೂಡಲೇ ಅವರ ಫೋಟೋ ಕ್ಲಿಕ್ಕಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಬಾಬಾ ರಾಮ್ದೇವ್ ಯಾವಾಗ ಈ ಅವತಾರ ಪಡೆದರು? ಬಾಬಾ ರಾಮ್ದೇವ್ ನೀವು ಯಾವಾಗ ಈ ರೀತಿ ಕಾಣಲು ಪ್ರಾರಂಭಿಸಿದ್ದೀರಿ? ಇದು ನಿಜಕ್ಕೂ ನೀವೇನಾ? ಎಂದು ಕಮೆಂಟ್ ಮಾಡಿದ್ದಾರೆ. ಈ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಶೇರ್ ಮತ್ತು ಕಮೆಂಟ್ಗಳನ್ನು ಪಡೆದುಕೊಂಡಿದೆ.
ನಟ ಧನುಷ್ ಅವರ ಹೊಸ ಲುಕ್ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದೇ ತಡ, ನೆಟ್ಟಿಗರು ಅಭಿಪ್ರಾಯಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಧನುಷ್ ಕಪ್ಪು ಕೂಲಿಂಗ್ ಗ್ಲಾಸ್ ಧರಿಸಿ, ನೇರಳೆ ಬಣ್ಣದ ಶರ್ಟ್ ಧರಿಸಿದ್ದು, ಉದ್ದವಾದ ಗಡ್ಡ ಬಿಟ್ಟಿದ್ದಾರೆ..