• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬ್ರೆಜಿಲ್‌:ಲೈವ್ ಚರ್ಚೆಯ ವೇಳೆ ಮೇಯರ್ ಅಭ್ಯರ್ಥಿಗೆ ಥಳಿಸಿದ ಪ್ರತಿಸ್ಪರ್ಧಿ

ಪ್ರತಿಧ್ವನಿ by ಪ್ರತಿಧ್ವನಿ
September 17, 2024
in Top Story, ಇತರೆ / Others
0
Share on WhatsAppShare on FacebookShare on Telegram

ಬ್ರೆಜಿಲ್‌: ಸಾವೊ ಪೌಲೊದ ಮೇಯರ್‌ಗಾಗಿ ಸ್ಪರ್ಧಿಸುತ್ತಿರುವ ಸುದ್ದಿ ನಿರೂಪಕ ಸುದ್ದಿ ವಾಹಿನಿಯ ಚರ್ಚೆಯ ಸಮಯದಲ್ಲಿ ತನ್ನ ಎದುರಾಳಿಗೆ ಕುರ್ಚಿಯಿಂದ ಹೊಡೆದಿದ್ದಾರೆ.ಭಾನುವಾರ ಸಂಜೆ ನಡೆದ ಚರ್ಚೆ ವೇಳೆ ಜೋಸ್ ಲೂಯಿಜ್ ಡೇಟೆನಾ (José Luiz Datena) ಅವರು ಇನ್‌ಸ್ಟಾಗ್ರಾಮ್ ಇನ್ಫ್ಲೂಯೆನ್ಸರ್ , ಪ್ರತಿಸ್ಪರ್ಧಿ ಪಾಬ್ಲೊ ಮಾರ್ಕಲ್‌ಗೆ (Pablo Marçal) ಕುರ್ಚಿಯಿಂದ ಬಲವಾಗಿ ಹೊಡೆದಿದ್ದಾರೆ.

ADVERTISEMENT

ಹಲ್ಲೆಗೊಳಾದ ಮಾರ್ಕಲ್ ಉಸಿರಾಟದ ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಹಾಯಕರು ಮಾರ್ಕಲ್ ಅವರ ಪಕ್ಕೆಲುಬು ಮುರಿದಿದೆ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅವರ ಒಂದು ಬೆರಳಿಗೆ ತೀವ್ರ ಗಾಯವಾಗಿದೆ ಎಂದು ಎಂದು ತುರ್ತು ಅಧಿಕಾರಿಗಳು ಬ್ರೆಜಿಲಿಯನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

https://www.instagram.com/reel/C__iirDguX5/?igsh=MmUyNjY0YTFjdGph

ಪ್ರಸ್ತುತ ರಿಕಾರ್ಡೊ ನೂನ್ಸ್ ಮತ್ತು ಎಡಪಂಥೀಯ ಅಭ್ಯರ್ಥಿ ಗಿಲ್ಹೆರ್ಮ್ ಬೌಲೋಸ್ ಅವರ ನಂತರದ ಮೂರನೇ ಸ್ಥಾನದಲ್ಲಿರುವ ಮಾರ್ಕಲ್, ತನ್ನ ಪ್ರತಿಸ್ಪರ್ಧಿ ಟಿವಿ ನಿರೂಪಕರನ್ನು ‘ಅಸ್ಥಿರಗೊಳಿಸಲು’ ಬಯಸುವುದಾಗಿ ಹೇಳಿದ್ದು, ಅವರನ್ನು ಚುನಾವಣಾ ಕಣದಿಂದ ಹೊರದಬ್ಬುತ್ತೇನೆ ಎಂದು ಹೇಳಿದ್ದಾರೆ. ಅಕ್ಟೋಬರ್ ಆರಂಭದಲ್ಲಿ ಚುನಾವಣೆ ನಡೆಯಲಿದೆ.

ಭಾನುವಾರ, ಮಾರ್ಕಲ್ ಪದೇ ಪದೇ ಡೇಟೆನಾ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನು ಉಲ್ಲೇಖಿಸಿದರು. 2019 ರಲ್ಲಿ, ಡೇಟೆನಾ ಕೆಲಸ ಮಾಡಿದ ಕಾರ್ಯಕ್ರಮದ ವರದಿಗಾರ್ತಿ ಪೊಲೀಸರ ಬಳಿಗೆ ಹೋದರು. ಅವರ ಬಗ್ಗೆ ಆಗಾಗ್ಗೆ ಲೈಂಗಿಕವಾಗಿ ಸೂಚಿಸುವ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ನಂತರ ವರದಿಗಾರ ಆರೋಪವನ್ನು ಹಿಂಪಡೆದರು.

ಮಾರ್ಕಲ್ ಅವರು ಚರ್ಚೆಯನ್ನು ತಮ್ಮ ಇನ್ನೊಂದು ಅಂತರ್ಜಾಲ ಕಾರ್ಯಕ್ರಮವನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ಡೇಟೆನಾ ಹೇಳಿದ್ದು, ‘ಈ ಚರ್ಚೆಗಳ ಸಂಪೂರ್ಣ ಭವಿಷ್ಯವನ್ನು ಹಾಳುಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ಲೈಂಗಿಕ ಕಿರುಕುಳದ ಹೇಳಿಕೆಗಳು ಅವರ ಕುಟುಂಬಕ್ಕೆ ಗಮನಾರ್ಹವಾದ ಭಾವನಾತ್ಮಕ ಒತ್ತಡವನ್ನು ಉಂಟುಮಾಡಿದೆ ಎಂದು ಹೇಳುವ ಮೂಲಕ ಡೇಟೆನಾ ತನ್ನ ಎದುರಾಳಿಯನ್ನು ಟೀಕೆಗಳನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು.

ಪ್ರತಿಕ್ರಿಯೆಯಾಗಿ, ಮಾರ್ಕಲ್ ಡೇಟೆನಾವರನ್ನುದ್ದೇಶಿಸಿ ‘ಬೊಗಳುತ್ತಾರೆ ( bark)ಆದರೆ ಕಚ್ಚುವುದಿಲ್ಲ’ ಎಂದಿದ್ದಾರೆ.’ನೀವು ಒಮ್ಮೆ ಚರ್ಚೆಯ ಸಮಯದಲ್ಲಿ ನನಗೆ ಕಪಾಳಮೋಕ್ಷ ಮಾಡಲು ನನ್ನತ್ತ ಬಂದಿದ್ದಿರಿ. ಆದರೆ ನಿಮಗೆ ಧೈರ್ಯ ಇರಲಿಲ್ಲ ಎಂದಿದ್ದಾರೆ.ಇಷ್ಟಕ್ಕೆ ಸಿಟ್ಟುಗೊಂಡ ಡೇಟೆನಾ ಒಂದು ಕುರ್ಚಿಯನ್ನು ಎತ್ತಿಕೊಂಡು ಮಾರ್ಕಲ್ ಅವರ ಬೆನ್ನಿಗೆ ಹೊಡೆದಿದ್ದಾರೆ.

Tags: brazilcandidate was beaten by his opponentViral News
Previous Post

ಮಕ್ಕಳಲ್ಲಿ ಡೈಜೇಶನ್ ಸಮಸ್ಯೆಯಾದಾಗ ಏನಲ್ಲಾ ಸಿಂಪ್ಟಮ್ಸ್ ಕಾಡುತ್ತದೆ ಗೊತ್ತಾ?

Next Post

ನಾಗಮಂಗಲ ಗಲಭೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಏನಂದ್ರು..!

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post

ನಾಗಮಂಗಲ ಗಲಭೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಏನಂದ್ರು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada