ಪ್ಯಾನ್ ಇಂಡಿಯಾ ಸಿನಿಮಾಗಳ ಸಾಲಿನಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿರುವ ‘ಲೈಗರ್’ ಕರ್ನಾಟಕದಲ್ಲಿ ವಿವಾದಕ್ಕೆ ಸಿಲುಕಿದೆ.
ಹೌದು, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎನ್ನುವ ನಾಡಿನಲ್ಲಿ ಅದ್ದೂರಿಯಾಗಿ ಮೂವಿ ಪ್ರಚಾರ ಮಾಡಿರುವ ಲೈಗರ್ ಸಿನಿಮಾ ತಂಡ ಇದೀಗ ಕಾಂಟ್ರವರ್ಸಿಯಲ್ಲಿ ಸಿಲುಕಿದೆ.
ಪ್ಯಾನ್ ಇಂಡಿಯಾ ಸಿನಿಮಾವಾಗಿರು ಲೈಗರ್ ಕನ್ನಡದಲ್ಲೂ ತೆರೆಕಾಣುತ್ತಿದೆ. ಆದರೆ ಕರ್ನಾಟದಲ್ಲಿ ಬೆರಳೆಣಿಕೆಯಷ್ಟು ಶೋಗಳು ಮಾತ್ರ ಕನ್ನಡದಲ್ಲಿ ಪ್ರದರ್ಶನಕ್ಕಿಟ್ಟು 500 ಕ್ಕೂ ಹೆಚ್ಚು ಶೋಗಳನ್ನು ತೆಲುಗಿನಲ್ಲಿ ಪ್ರದರ್ಶಿಸಿರುವುದು ಈಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಸಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಹಂಚಿಕೊಂಡಿರುವ ಮಾಹಿತಿಯಲ್ಲಿ, Liger ಸಿನಿಮಾಕ್ಕೆ ಕರ್ನಾಟಕದಲ್ಲಿ ಕೊಟ್ಟಿರೋ ಪ್ರದರ್ಶನಗಳ ಸಂಖ್ಯೆ, ಕನ್ನಡ ಶೊ 2%, ತೆಲುಗು 92%, ಹಿಂದಿ 7%, ತಮಿಳು2%, ಮಲಯಾಳಂ .1% ಇದು ಎಷ್ಟು ಸರಿ ಎಂದು ಪ್ರಶ್ನಿಸಿದೆ.

ಇತ್ತ ಅಮೀರ್ ಖಾನ್ ಸಿನಿಮಾ ಬೆಂಬಲಿಸಿದಕ್ಕೆ ಲೈಗರ್ ಗೆ ಬಾಯ್‌ಕಟ್ ಹೇಳಿದ ಪ್ರೇಕ್ಷಕರು
‘ಲೈಗರ್’ ಸಿನಿಮಾದ ಪ್ರಚಾರದಲ್ಲಿ ನಿರತರಾಗಿರುವ ವಿಜಯ್ ದೇವರಕೊಂಡ, ‘ಲಾಲ್ ಸಿಂಗ್ ಚಡ್ಡ’ ಸಿನಿಮಾ ಮತ್ತು ಆಮಿರ್ ಖಾನ್ ಅನ್ನು ಬೆಂಬಲಿಸದ ಕಾರಣಕ್ಕೆ ವಿಜಯ್ ದೇವರಕೊಂಡ ಸಿನಿಮಾಕ್ಕೂ ಬಾಯ್‌ಕಾಟ್ ಬಿಸಿ ತಟ್ಟಿದೆ. ‘ಲಾಲ್ ಸಿಂಗ್ ಚಡ್ಡ’ ಸಿನಿಮಾವನ್ನು ಬಹಿಷ್ಕಾರ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿದೆ. ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಆಗಸ್ಟ್ 25 ರಂದು ಬಿಡುಗಡೆಯಾಗಲಿರುವ ಲೈಗರ್ ಈ ಬಾಯ್‌ಕಾಟ್ ಭೂತದ ನಡುವೆ ಎಷ್ಟು ಸಕ್ಸಸ್ ಕಾಣುತ್ತದೆ ನೋಡಬೇಕು.









