• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಬಾಸ್’ ಚಿತ್ರದ ಬಿಡುಗಡೆಗೆ ದರ್ಶನ್ ಒಪ್ಪಿಗೆ: ಸಿನಿಮಾ ಬಿಡುಗಡೆ ಯಾವಾಗ..?

ಪ್ರತಿಧ್ವನಿ by ಪ್ರತಿಧ್ವನಿ
August 4, 2026
in Top Story, ಸಿನಿಮಾ
0
‘ಬಾಸ್’ ಚಿತ್ರದ ಬಿಡುಗಡೆಗೆ ದರ್ಶನ್ ಒಪ್ಪಿಗೆ: ಸಿನಿಮಾ ಬಿಡುಗಡೆ ಯಾವಾಗ..?
Share on WhatsAppShare on FacebookShare on Telegram

ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಹಾಗೂ ಲವ ವಿ ನಿರ್ದೇಶನದ ‘ಬಾಗೆ .ಸ್’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ಚಿತ್ರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿತ್ತು. ಈ ಚಿತ್ರದ ಬಿಡುಗಡೆಗೆ ತಡೆ ಕೋರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ದರ್ಶನ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ್ದು, ‘ಬಾಸ್’ ಚಲನಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ. ಅಲ್ಲದೆ, ದರ್ಶನ್ ಅವರು ಸಹ “ಬಾಸ್” ಚಿತ್ರ ಬಿಡುಗಡೆ ಮಾಡಿಕೊಳ್ಳಲಿ ಎಂದು ಅವರ ಪರ ವಕೀಲರ ಮುಂದೆ ಹೇಳಿದ್ದಾರೆ. ಆಗಸ್ಟ್ 7 ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ADVERTISEMENT

ಹೈಕೋರ್ಟ್ ನಲ್ಲಿ ನಮ್ಮ ಚಿತ್ರ ಬಿಡುಗಡೆಗೆ ಅವಕಾಶ ಸಿಕ್ಕ ನಂತರ ನಾನು ವಿಜಯಲಕ್ಷ್ಮಿ ದರ್ಶನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅವರ ಪರ ವಕೀಲರಾದ ಪ್ರಥಮ್ ಅವರು ವಿಜಯಲಕ್ಷ್ಮಿ ಅವರ ಜೊತೆಗೆ ಮಾತನಾಡಿ, ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಿಕೊಟ್ಟರು. ನಾನು ವಿಜಯಲಕ್ಷ್ಮಿ ದರ್ಶನ್ ಅವರ ಜೊತೆಗೆ ಮಾತನಾಡಿದೆ. ಅವರು ಮೊದಲು ಕೇಳಿದ ಪ್ರಶ್ನೆ, ನಿಮ್ಮ ಸಿನಿಮಾದಲ್ಲಿ ನಮ್ಮ ಕುಟುಂಬದ ಕುರಿತಾದ ಯಾವುದೇ ಸನ್ನಿವೇಶಗಳು ಇಲ್ಲ ತಾನೆ ಎಂದರು. ನಾನು ಇಲ್ಲ ಅಂತ ಹೇಳಿದೆ. ನಮ್ಮ ವಕೀಲರು ನಿಮ್ಮ ಚಿತ್ರವನ್ನು ನೋಡಿ ನಮಗೆ ತಿಳಿಸುತ್ತಾರೆ.

Anantnag and PM Modi ವಿವೇಚನೆ ಇಲ್ಲದೆ ಮಾತಾಡಿಬಿಟ್ಟರೇ ಅನಂತ್ ನಾಗ್ ? ಸುಮ್ಮನೆ  ಯುವ ಸಮೂಹದ ವಿರೋಧಿ ಆಗಿಬಿಟ್ರಾ?

ಯಾವುದಾದರೂ ಕುಟುಂಬಕ್ಕೆ ಸಂಬಂಧಿಸಿದ ಸನ್ನಿವೇಶಗಳಿದ್ದರೆ ನೀವು ಅದನ್ನು ತೆಗೆಯಬೇಕಾಗುತ್ತದೆ ಎಂದರು. ನಾನು ಆಗಲಿ ಎಂದೆ. ವಕೀಲರಾದ ಪ್ರಥಮ್ ಅವರು ಚಿತ್ರ ನೋಡಿ,‌ ವಿಜಯಲಕ್ಷ್ಮೀ ದರ್ಶನ್ ಹಾಗೂ ದರ್ಶನ್ ಅವರಿಗೆ ವಿಷಯ ತಿಳಿಸಿದ್ದಾರೆ. ಮೊದಲಿನಿಂದಲೂ ಹೊಸಬರ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಹಾಗೂ ಒಂದು ಚಿತ್ರ ನಿರ್ಮಾಣದ ಹಿಂದೆ ಎಷ್ಟು ಕಷ್ಟಗಳಿದೆ ಎಂದು ಅರಿತಿರುವ ದರ್ಶನ್ ಅವರು ಸುಪ್ರೀಂ ಕೋರ್ಟ್ ಗೆ ಹೋಗುವುದು ಬೇಡ. ಅವರು ಚಿತ್ರ ಬಿಡುಗಡೆ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ.

ವಿಜಯಲಕ್ಷ್ಮಿ ಅವರು ಸಹ ಫೋನ್ ನಲ್ಲಿ ಮಾತನಾಡಿ ಚಿತ್ರ ಬಿಡುಗಡೆ ಮಾಡಿ. ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಈ ಸಮಯದಲ್ಲಿ ದರ್ಶನ್ ದಂಪತಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಇಷ್ಟು ದಿನಗಳ ಅಡೆತಡೆಗಳೆಲ್ಲಾ ಮೀರಿ ನಮ್ಮ ಚಿತ್ರ ಇದೇ ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಲ್ಲರೂ ನೋಡಿ ಪ್ರೋತ್ಸಾಹ ನೀಡಿ ಎಂದು ಚಿತ್ರದ ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ತಿಳಿಸಿದರು.

ನಿರ್ದೇಶಕ ಲವ ಅವರು ಸಹ ಚಿತ್ರದ ಬಿಡುಗಡೆ ಕುರಿತು ಮಾಹಿತಿ ನೀಡಿದರು. ನಾಯಕಿ ಪಾಯಲ್ ಚಂಗಪ್ಪ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಶರತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Previous Post

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ದಾಖಲೆ ಬರೆದ ರಾಮಾಯಣ: ಏನದು?

Next Post

ಬಿಡದಿ ಟೌನ್‌ಶಿಪ್‌ಗೆ ಹೈಕೋರ್ಟ್ ಬ್ರೇಕ್? ಸರ್ಕಾರಕ್ಕೆ ಸೂಚನೆ ಏನು

Related Posts

ವಿದ್ಯಾರ್ಥಿಗಳ ವಿರುದ್ಧ ಪ್ರಭುತ್ವ-ಕಲಿಯಬೇಕಾದ ಪಾಠಗಳು
Top Story

ವಿದ್ಯಾರ್ಥಿಗಳ ವಿರುದ್ಧ ಪ್ರಭುತ್ವ-ಕಲಿಯಬೇಕಾದ ಪಾಠಗಳು

by ಪ್ರತಿಧ್ವನಿ
August 5, 2026
0

ಮೂಲ : ಶಶಾಂಕ್ ಪಾಂಡೆ ಕನ್ನಡಕ್ಕೆ : ನಾ ದಿವಾಕರ (ಮೂಲ ಲೇಖನ : The state against itş students lessons to remember –ಶಶಾಂಕ್...

Read moreDetails
ಕೆಂಪು ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ!

ಕೆಂಪು ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ದಾಳಿ!

August 5, 2026
ಒಂದು ಸಚಿವ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ: ಮಹಿಳಾ ನಾಯಕಿಯರ ನಡುವೆ ಹೆಚ್ಚಿದ ಪೈಪೋಟಿ

ಒಂದು ಸಚಿವ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಭಾರೀ ಪೈಪೋಟಿ: ಮಹಿಳಾ ನಾಯಕಿಯರ ನಡುವೆ ಹೆಚ್ಚಿದ ಪೈಪೋಟಿ

August 4, 2026
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ದಾಖಲೆ ಬರೆದ ರಾಮಾಯಣ: ಏನದು?

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ದಾಖಲೆ ಬರೆದ ರಾಮಾಯಣ: ಏನದು?

August 4, 2026
ರಾಜೀನಾಮೆ ನೀಡುವಂತೆ ಸರ್ಕಾರದ ದಿಢೀರ್‌ ಸೂಚನೆ: ಬಸವರಾಜ್ ಹೊರಟ್ಟಿ ಹೇಳಿದ್ದೇನು..?

ರಾಜೀನಾಮೆ ನೀಡುವಂತೆ ಸರ್ಕಾರದ ದಿಢೀರ್‌ ಸೂಚನೆ: ಬಸವರಾಜ್ ಹೊರಟ್ಟಿ ಹೇಳಿದ್ದೇನು..?

August 4, 2026
Next Post
ಬಿಡದಿ ಟೌನ್‌ಶಿಪ್‌ಗೆ ಹೈಕೋರ್ಟ್ ಬ್ರೇಕ್? ಸರ್ಕಾರಕ್ಕೆ ಸೂಚನೆ ಏನು

ಬಿಡದಿ ಟೌನ್‌ಶಿಪ್‌ಗೆ ಹೈಕೋರ್ಟ್ ಬ್ರೇಕ್? ಸರ್ಕಾರಕ್ಕೆ ಸೂಚನೆ ಏನು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada