ಎರಡು ದಿನದ ಉತ್ತರ ಪ್ರದೇಶ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ.ಪಿ.ನಡ್ಡಾರವರು 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಹಳ್ಳಿಗಳು ಮತ್ತು ದಲಿತ ಕಲೋನಿಗಳನ್ನು ತಲುಪಲು ಪಕ್ಷದ ನಾಯಕರಿಗೆ ಸೂಚಿಸಿದರು. ಅವರು ತಮ್ಮ ಜಿಲ್ಲಾ ವಾಸ್ತವ್ಯದ ಸಮಯದಲ್ಲಿ ಸ್ಥಳೀಯ ದೇವಸ್ಥಾನಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಮಂತ್ರಿಗಳು, ಮಾಜಿ ಸಂಸದರು ಮತ್ತು ಪಕ್ಷದ ಕೋರ್ ಕಮಿಟಿ ಸದಸ್ಯರೊಂದಿಗಿನ ಸಭೆಯ ಮುಖ್ಯ ಉದ್ದೇಶವೇನೆಂದರೆ ಮುಂಬರುವ ರಾಜ್ಯ ಚುನಾವಣೆಗೆ ಪಕ್ಷದ ಸಿದ್ಧತೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.
ಈ ವೇಳೆ ನಡ್ಡಾ ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾದ ಜಿಲ್ಲಾ ಪಂಚಾಯತ್ ಮತ್ತು ಕ್ಷೇತ್ರ ಪಂಚಾಯತ್ ಅಧ್ಯಕ್ಷರನ್ನು ಭೇಟಿ ಮಾಡಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಸಾಧನೆಗಳ ಬಗ್ಗೆ ಜಾಗೃತಿ ಅಭಿಯಾನವನ್ನು ಪ್ರಾರಂಭಿಸುವ ಕೆಲಸವನ್ನು ಅವರಿಗೆ ವಹಿಸಲಾಯಿತು ಈ ಸಭೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದ್ದರು.
ನಡ್ಡಾ ರಾಜ್ಯ ಪ್ರವಾಸದ ಸಮಯದಲ್ಲಿ ಸಂಭವನೀಯ ಸಚಿವ ಸಂಪುಟ ಪುನಾರಚನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಊಹಾಪೋಹಗಳು ಇದ್ದವು ಆದರೆ ಪಕ್ಷದ ಮೂಲಗಳ ಪ್ರಕಾರ, ಅಂತಹ ಯಾವುದೇ ಚರ್ಚೆ ಇನ್ನೂ ನಡೆದಿಲ್ಲ ಖಾಲಿ ಇರುವ ನಾಲ್ಕು ವಿಧಾನಪರಿಷತ್ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಇನ್ನೂ ಚರ್ಚೆ ನಡೆಯಬೇಕಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ಹೇಳಿದೆ.
ನಡ್ಡಾರವರ ಪ್ರಸ್ತುತ ಭೇಟಿಯ ಸಮಯದಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ ಚರ್ಚಿಸಬೇಕೆಂದರೆ, ಸಿಎಂ ಜೊತೆಗಿನ ಪ್ರತ್ಯೇಕ ಸಭೆಯಲ್ಲಿ ಇದು ಸಂಭವಿಸುವ ಸಾಧ್ಯತೆಯಿದೆ ಆದಾಗ್ಯೂ, ರಾಜ್ಯದಲ್ಲಿ ಮುಂಬರುವ ಚುನಾವಣೆಗಳಿಂದಾಗಿ ಸಂಪುಟ ಪುನಾರಚನೆಯನ್ನು ಮುಂದೂಡಬಹುದು ಎಂದು ಪಕ್ಷದ ಮೂಲಗಳು ಸುಳಿವು ನೀಡಿವೆ.
ಸಿಎಂ ಜೊತೆಗಿನ ಭೇಟಿಯ ನಂತರ, ನಡ್ಡಾ ಆಗ್ರಾಕ್ಕೆ ತೆರಳಿದ್ದಾರೆ, ಅಲ್ಲಿ ಅವರು ಪಕ್ಷದ ಪದಾಧಿಕಾರಿಗಳು ಮತ್ತು “ಬ್ರಾಜ್ ಪ್ರದೇಶ” ದ ಶಾಸಕ ಮತ್ತು ವಿಧಾನಪರಿಷತ್ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಕ್ಷದ ಕಾರ್ಯದರ್ಶಿಯೊಬ್ಬರ ಪ್ರಕಾರ, ಆಗ್ರಾದಲ್ಲಿ, ಕೋವಿಡ್ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿದ್ದ ವೈದ್ಯರ ಸಭೆಯನ್ನು ಕೂಡ ನಡ್ಡಾ ಉದ್ದೇಶಿಸಿ ಮಾತನಾಡಲಿದ್ದಾರೆ.
ಸ್ಥಳೀಯರೊಂದಿಗೆ ಸಂಪರ್ಕ : ನಡ್ಡಾರೊಂದಿಗೆ ಆರ್.ಎಸ್.ಎಸ್ ನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಉತ್ತರ ಪ್ರದೇಶ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಸಿಂಗ್, ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಪಕ್ಷದ ರಾಜ್ಯ ಘಟಕ ಸಂಘಟನೆಯ ಯೋಜನೆಗಳನ್ನು ಶನಿವಾರ ರೂಪಿಸಿದರು. ಪಕ್ಷವು ತನ್ನ ಹಳೆಯ ಸೂತ್ರವಾದ ‘ಬೂತ್ ವಿಜಯ್ ಅಭಿಯಾನವನ್ನುʼ ಕೇಂದ್ರೀಕರಿಸುವುದಕ್ಕೆ ನಿರ್ಧರಿಸಲಾಗಿದೆ, ಅಲ್ಲಿ ಬೂತ್-ನಿರ್ವಹಣೆಯ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದು ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದರು.

ನಡ್ಡಾ ಮುಖ್ಯವಾಗಿ ಜನರಿಗೆ ” ತಲುಪುವ “ಯೋಜನೆಗಳ ಮೇಲೆ ಕೇಂದ್ರೀಕರಿಸಿದ್ದಾರೆ ಅವರು ಪಕ್ಷದ ಮುಖಂಡರಿಗೆ “ಗ್ರಾಮಗಳು ಮತ್ತು ದಲಿತ ಬಸ್ತಿಗಳಿಗೆ” ನಿಯಮಿತವಾಗಿ ಭೇಟಿ ನೀಡುವಂತೆ ಮತ್ತು ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವುದರಲ್ಲಿ ತೃಪ್ತಿ ಹೊಂದಿಲ್ಲದ ಮತ್ತು ಅತೃಪ್ತರಾಗಿರುವ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಕೇಂದ್ರೀಕರಿಸುವಂತೆ ಸೂಚಿಸಿದ್ದಾರೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು.
ಪಕ್ಷದ ಅಧ್ಯಕ್ಷರು ರಾಜ್ಯ ಹೈಕಮಾಂಡ್‌ಗೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಜವಾಬ್ದಾರಿಗಳನ್ನು ವಿತರಿಸುವಂತೆ ಸೂಚಿಸಿದರು ಆದ್ದರಿಂದ ಅವರು ಸುಮ್ಮನೆ ಕೂರುವುದಿಲ್ಲ ಮತ್ತು ಮುಂಬರುವ ಚುನಾವಣೆ ಸಿದ್ಧತೆಗಳು ವೇಗ ಪಡೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಪಕ್ಷದ ನಾಯಕರು ಮತ್ತು ಮಂತ್ರಿಗಳು ತಮ್ಮ ರಾಜ್ಯ ಪ್ರವಾಸ ದ ಸಮಯದಲ್ಲಿ ತಾವುಪ್ರವಾಸ ಕೈಗೊಳ್ಳುವ ಪ್ರದೇಶದ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಬೇಕೆಂದು ಸಭೆಯಲ್ಲಿ ಸೂಚಿಸಲಾಯಿತು “ಇದು ಸಾರ್ವಾಜನನಿಕರು ಮತ್ತು) ನಮ್ಮ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಪಕ್ಷದ ಬೆಂಬಲಿಗರಿಗೆ ಸಂದೇಶವನ್ನು ನೀಡಿದಂತಾಗುತ್ತದೆ” ಎಂದು ನಡ್ಡಾ ಸಭೆಯಲ್ಲಿ ಹೇಳಿದ್ದಾರೆ.
ರೈತರ ಅಸಮಾಧಾನ ಮತ್ತು ಸೀಟು ಹಂಚಿಕೆ : ಪಕ್ಷದ ಮೂಲಗಳ ಪ್ರಕಾರ, ನಡ್ಡಾ ಜೊತೆಗಿನ ಸಭೆಯಲ್ಲಿ ಭಾಗವಹಿಸಿದ ಹಿರಿಯ ಬಿಜೆಪಿ ನಾಯಕರೊಬ್ಬರು ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಪಶ್ಚಿಮ ಯುಪಿ ರೈತರಲ್ಲಿ ಹೆಚ್ಚುತ್ತಿರುವ ಅಸಮಾಧಾನದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಸಮಸ್ಯಗೆ ಶೀಘ್ರವೇ ಪರಿಹಾರ ಕಂಡುಕೊಳ್ಳುವಂತೆ ಅವರು ನಡ್ಡಾ ಮತ್ತು ಹಿರಿಯ ನಾಯಕರಲ್ಲಿ ವಿನಂತಿಸಿದರು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪಕ್ಷವು “ಜಟ್ಲ್ಯಾಂಡ್” ಪ್ರದೇಶದ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಲ್ಲಾ 403 ಸ್ಥಾನಗಳಿಗೆ ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳ ಹೆಸರುಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಭೆಯಲ್ಲಿ ಬಿಎಲ್ ಸಂತೋಷ್ ಹೇಳಿದರು. ಪ್ರಭಾರಿಗಳಾಗಿ ನೇಮಕಗೊಳ್ಳುವ ನಾಯಕರಿಗೆ ಟಿಕೆಟ್ ಸಿಗುವುದಿಲ್ಲ ಎಂದು ನಡ್ಡಾ ಹೇಳಿದರು ಯಾರಿಗಾದರೂ ಆಕ್ಷೇಪವಿದ್ದರೆ ಅವರು ಆರ್.ಎಸ್.ಎಸ್ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಮಾತನಾಡಬಹುದು ಎಂದು ಹೇಳಿದರು.
ಸೆಪ್ಟೆಂಬರ್ ತಿಂಗಳಲ್ಲಿ ಉತ್ತರ ಪದ್ರೇಶ ಬಿಜೆಪಿ ಘಟಕವು ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಲು ತೀರ್ಮಾನಿಸಿದೆ ಅಲ್ಲಿ ನಡ್ಡಾ ಅವರು ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಕಾರ್ಯಕ್ರಮವು ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.