• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶೀಘ್ರವೇ BMTC ಕಂಡೆಕ್ಟರ್ ಲೆಸ್ ಸೇವೆ : ಹೇಗಿರಲಿದೆ ಕಂಡೆಕ್ಟರ್ ಇಲ್ಲದ ಬಸ್ ಪ್ರಯಾಣ?

Any Mind by Any Mind
July 4, 2022
in ಕರ್ನಾಟಕ
0
ಶೀಘ್ರವೇ BMTC ಕಂಡೆಕ್ಟರ್ ಲೆಸ್ ಸೇವೆ : ಹೇಗಿರಲಿದೆ ಕಂಡೆಕ್ಟರ್ ಇಲ್ಲದ ಬಸ್ ಪ್ರಯಾಣ?
Share on WhatsAppShare on FacebookShare on Telegram

BMTC ಸದ್ಯ ಮುಳುಗುವ ಹಡಗು. ಇರುವ ಉದ್ಯೋಗಿಗಳಿಗೇ ಸಂಬಳ ಕೊಡಲಾಗದೇ ನಿಗಮ ಹೆಣಗಾಡ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಬಿಎಂಟಿಸಿಯನ್ನ ಮೇಲೆತ್ತಲು ಮಾಸ್ಟರ್ ಪ್ಲಾನ್ ಒಂದು ರೆಡಿಯಾಗಿದೆ. ಹೊಸ ಪ್ಲಾನ್ ಪ್ರಕಾರ ಬಸ್ ಓಡುತ್ತೆ, ಡ್ರೈವರ್ ಇರ್ತಾರೆ. ಆದ್ರೆ ಕಂಡೆಕ್ಟರ್ ಮಾತ್ರ ಇರೋದಿಲ್ಲ. ಏನಿದು ಹೊಸ ಪ್ಲಾನ್. ಕಂಡಕ್ಟರ್ ಇಲ್ಲದೇ ಟಿಕೆಟ್ ಕಲೆಕ್ಷನ್ ಹೇಗೆ..?

ADVERTISEMENT

ಕಂಡೆಕ್ಟರ್ ರಹಿತ ಸೇವೆ ನೀಡಲು ನಿರ್ಧರಿಸಿರುವ BMTC!

ಸದ್ಯ ಬಿಎಂಟಿಸಿ ಬಸ್ ಹತ್ತುತ್ತಿದ್ದಂತೆ ನಿಮ್ಮನ್ನ ಸ್ವಾಗತಿಸೋದೇ ಕಂಡೆಕ್ಟರ್. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಈ ಕಂಡೆಕ್ಟರ್ಸ್ ಕಾಣೋದು ಡೌಟ್. ಇದನ್ನ ಕೇಳೋಕೆ ನಿಮ್ಗೆ ಆಶ್ಚರ್ಯ ಆಗ್ಬಹುದು. ಕಂಡೆಕ್ಟರ್ ಇಲ್ಲದೇ ಟಿಕೆಟ್ ಕಲೆಕ್ಷನ್ ಆದ್ರೂ ಹೇಗೆ ಅಂತ. ಆದರೆ ಬಿಎಂಟಿಸಿ ಇಂಥಹದೊಂದು ಪ್ಲಾನ್ ಮಾಡಿಕೊಂಡಿದೆ. ಸದ್ಯ ನಿಗಮ ಆರ್ಥಿಕ ಹೊರೆ ಎದುರಿಸುತ್ತಿದೆ. ಜೊತೆಗೆ ಡ್ರೈವರ್ ಕೊರತೆಯೂ ಕಾಡ್ತಿದೆ. ಹೊಸ ನೇಮಕಾತಿಗೂ ಸರ್ಕಾರ ಒಪ್ಪಿಗೆ ಸೂಚಿಸ್ತಿಲ್ಲ. ಹೀಗಾಗಿ ಕಂಡೆಕ್ಟರ್ ಪೋಸ್ಟ್ ಗಳನ್ನೇ ಎತ್ತಂಗಡಿ ಮಾಡೋಕೆ ನಿಗಮ ಪ್ಲಾನ್ ಮಾಡಿದೆ.

ಟಿಕೆಟ್ ಹಣ ಪಾವತಿಯನ್ನು ಡಿಜಟಲೈಸ್ ಮಾಡಲಿರುವ BMTC!

ಸದ್ಯ ಬಿಎಂಟಿಸಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸೋಕೆ ಪ್ರಯತ್ನ ಆರಂಭವಾಗಿದೆ. ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿ ಹಲವು ಡಿಜಿಟಲ್ ಫೆಸಿಲಿಟಿನ ಜಾರಿಗೆ ತಂದು ಟಿಕೆಟ್ ಕಲೆಕ್ಷನನ್ನು ಸಂಪೂರ್ಣ ಡಿಜಿಟಲೈಸ್ ಮಾಡಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕವಾಗಿ ನಿಗಮದಲ್ಲಿರೋ ಎಲ್ಲಾ ಕಂಡೆಕ್ಟರ್ಗಳು ಕೆಲಸದಿಂದ ಮುಕ್ತರಾಗಲಿದ್ದಾರೆ. ಸದ್ಯ ಇರೋ ಪ್ರತಿಯೊಬ್ಬ ಕಂಡೆಕ್ಟರ್ಗಳೂ ಕಂಡೆಕ್ಟರ್ ಕಂ ಡ್ರೈವರ್ ಆದವರೇ. ಹೀಗಾಗಿ ಈ ಎಲ್ಲಾ ಕಂಡೆಕ್ಟರ್ಗಳನ್ನ ಡ್ರೈವಿಂಗ್‌ಗೆ ನಿಯೋಜಿಸಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕ ಹೊಸ ನೇಮಕಾತಿ ಇಲ್ಲದೇ ಹೆಚ್ಚುವರಿ ಬಸ್ಗಳನ್ನ ರಸೆಗಿಳಿಸಲು ಬಿಎಂಟಿಸಿ ಪ್ಲಾನ್ ಮಾಡಿದೆ. ಆದರೆ ಇದು ಮತ್ತೊಂದಿಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ. ಅಲ್ಲದೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತೆ ಅಂತ ಸಾರಿಗೆ ಮುಖಂಡ ಅನಂತುಸುಬ್ಬರಾವ್ ದೂರಿದ್ದಾರೆ.

2 ವರ್ಷದಲ್ಲಿ ಎಲ್ಲಾ ಬಸ್ ಗಳೂ ಕಂಡೆಕ್ಟರ್ ಲೆಸ್ ಆಗಲಿವೆ : BMTC

ಸದ್ಯದ ಪರಿಸ್ಥಿತಿಯಲ್ಲಿ ಕಂಡೆಕ್ಟರ್ ಇಲ್ಲದೇ ಬಸ್ ಊಹಿಸೋದು ಅಸಾಧ್ಯ, ಹೆಚ್ಚಿನ ಮಂದಿಗೆ ಡಿಜಿಟಲ್ ತಂತ್ರಜ್ಞಾನ ಒಪ್ಪಿಕೊಳ್ಳೋಕೆ ಸಮಯ ಬೇಕಾಗಲಿದೆ. ಆದರೂ ಬಿಎಂಟಿಸಿ ಸಿಬ್ಬಂದಿ ಹೊರೆ ತಪ್ಪಿಸೋ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಮುಂದಾಗಿದೆ. ಮುಂದಿನ ಒಂದೆರಡು ವರ್ಷದಲ್ಲಿ 100 ಶೇಕಡಾದಷ್ಟು ಕಂಡೆಕ್ಟರ್ ಲೆಸ್ ಬಸ್ ರಸ್ತೆಗಿಳಿಯಬೇಕು ಅನ್ನೋದು ಬಿಎಂಟಿಸಿ ಲೆಕ್ಕಾಚಾರ. ಆದರೆ ಇದು ಎಷ್ಟರಮಟ್ಟಿಗೆ ಕೈಗೂಡಲಿದೆ ಅನ್ನೋದನ್ನ ಕಾದುನೋಡ್ಬೇಕಿದೆ.

Tags: BJPBMTCCongress PartyCovid 19ಕಂಡೆಕ್ಟರ್ಕೋವಿಡ್-19ಬಸ್ ಪ್ರಯಾಣಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಡಿಕೆಶಿ ಬೆಳವಣಿಗೆಗೆ ತೋಡಿರುವ ಗುಂಡಿಯೇ ಸಿದ್ದರಾಮೋತ್ಸವ : ಬಿಜೆಪಿ ಸರಣಿ ಟ್ವೀಟ್‌

Next Post

ನಾನು ತುಂಬಾ ಚಿಕ್ಕವಳು ನಾನು ಏನು ಸಾಧನೆ ಮಾಡಿಲ್ಲ.!

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ನಾನು ತುಂಬಾ ಚಿಕ್ಕವಳು ನಾನು ಏನು ಸಾಧನೆ ಮಾಡಿಲ್ಲ.!

ನಾನು ತುಂಬಾ ಚಿಕ್ಕವಳು ನಾನು ಏನು ಸಾಧನೆ ಮಾಡಿಲ್ಲ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada