• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಿಎಂಎಸ್​ ಟ್ರಸ್ಟ್​ ಖಾಸಗಿ ಪಾಲು.. HDK ಆರೋಪ ಸತ್ಯ.. ಸದನದಲ್ಲಿ ಬಿಲ್​ ಪಾಸ್​

ಕೃಷ್ಣ ಮಣಿ by ಕೃಷ್ಣ ಮಣಿ
February 25, 2023
in ಕರ್ನಾಟಕ
0
ಬಿಎಂಎಸ್​ ಟ್ರಸ್ಟ್​ ಖಾಸಗಿ ಪಾಲು.. HDK ಆರೋಪ ಸತ್ಯ.. ಸದನದಲ್ಲಿ ಬಿಲ್​ ಪಾಸ್​
Share on WhatsAppShare on FacebookShare on Telegram

ಮಾಜಿ ಸಿಎಂ ಕುಮಾರಸ್ವಾಮಿ ಕಳೆದ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಉನ್ನತ ಶಿಕ್ಷಣ ಸಚಿವರೇ ನೇರವಾಗಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಬೆಂಗಳೂರಿನ BMS ಟ್ರಸ್ಟ್​ ಸಾರ್ವಜನಿಕರ ಸ್ವತ್ತಾಗಿದ್ದು, ಇದನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗ್ತಿದೆ. ಇದು ಅಕ್ಷಮ್ಯ ಅಪರಾಧ. ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಈ ಬಗ್ಗೆ ಪ್ರಸ್ತಾವನೆ ಬಂದಿತ್ತು. ಆದರೆ ನಾನು ಸಾರ್ವಜನಿಕರ ಹಿತದೃಷ್ಟಿಯಿಂದ ಅರ್ಜಿಯನ್ನು ತಿರಸ್ಕಾರ ಮಾಡಿದ್ದೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, 1957 ಶ್ರೀನಿವಾಸಯ್ಯ, ನಾರಾಯಣ್ ಎಂಬುವರು ನೋಂದಾಯಿಸಿದ್ದ ಟ್ರಸ್ಟ್ ಅನ್ನು ಖಾಸಗಿಯವರ ಪಾಲಾಗುವಂತೆ ಮಾಡಿದ್ದಾರೆ. ಇದರಲ್ಲಿ ಅಶ್ವತ್ಥ ನಾರಾಯಣ ಕಿಕ್​ಬ್ಯಾಕ್​ ಕೂಡ ಪಡೆದಿದ್ದಾರೆ. ನನಗೂ ಹಣದ ಆಮೀಷ ಒಡ್ಡಲಾಗಿತ್ತು. ನಾನು ಖಡಾಖಂಡಿತವಾಗಿ ನಿರಾಕರಿಸಿದ್ದೆ. ಅಶ್ವತ್ಥನಾರಾಯಣ್​ ಅವರಿಗೆ ಎಷ್ಟು ಬಂದಿದೆ ಅಂತಾನೂ ನಾನು ಹೇಳಬಲ್ಲೆ ಎಂದಿದ್ದರು. ಆ ಬಳಿಕ ಅಶ್ವತ್ಥ ನಾರಾಯಣ ಜೆಡಿಎಸ್​ ಬಗ್ಗೆ ಟೀಕೆ ಮಾಡಿದ್ರು ಅನ್ನೋ ಕಾರಣಕ್ಕೆ ಬಿಎಂಎಸ್​ ಟ್ರಸ್ಟ್​ನ ಟ್ರಸ್ಟಿ ನಿವಾಸದಲ್ಲಿ ಬೆಳ್ಳಿ ತಟ್ಟೆಯಲ್ಲಿ ಕುಟುಂಬ ಸಮೇತ ಊಟ ಮಾಡುವ ಫೋಟೋ ಬಿಡುಗಡೆ ಮಾಡಿದ್ದರು. ಇದೀಗ ಪ್ರಧಾನಿಗೇ ಪತ್ರ ಪರೆದಿದ್ದಾರೆ. 

ADVERTISEMENT

ದಾಖಲೆ ಸಮೇತ ಪ್ರಧಾನಿಗೆ ಕುಮಾರಸ್ವಾಮಿ ಪತ್ರ..!

ಬಿಎಂಎಸ್​ ಶಿಕ್ಷಣ ಸಂಸ್ಥೆಯನ್ನು ಅಕ್ರಮವಾಗಿ ಖಾಸಗಿಯವರ ಪಾಲಾಗುವಂತೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ದಾಖಲೆ ಸಮೇತ 7 ಪುಟಗಳ ಪತ್ರ ಬರೆದಿದ್ದಾರೆ. ಜನರಿಗೋಸ್ಕರ BMS ಟ್ರಸ್ಟ್​ ಹೆಸರಲ್ಲಿ ಕಾಲೇಜುಗಳ ಸ್ಥಾಪನೆ ಮಾಡಲಾಗಿತ್ತು. ಇದು ಸ್ವಂತ ಲಾಭಕ್ಕಾಗಿ ಅಥವಾ ಕುಟುಂಬದ ಹಿತಕ್ಕಾಗಿ ಟ್ರಸ್ಟ್​​ ಮಾಡಿಲ್ಲ. 1968ರಿಂದ ಸರ್ಕಾರಗಳು ಟ್ರಸ್ಟ್​ಗೆ ₹100 ಕೋಟಿ ಅನುದಾನ ಕೊಟ್ಟಿವೆ. ಈಗ BMS ಟ್ರಸ್ಟ್​ನ ಒಟ್ಟು ಆಸ್ತಿ ಬೆಲೆ 10 ಸಾವಿರ ಕೋಟಿಯಷ್ಟಿದೆ. ವಂಶಸ್ಥರು ನಡೆಸಬೇಕು, ಇಲ್ಲದಿದ್ರೆ ಸರ್ಕಾರಕ್ಕೆ ಸೇರಬೇಕು. ಆದರೆ ಟ್ರಸ್ಟ್​ ಡೀಡ್​​ ತಿದ್ದುಪಡಿಗೆ BMS ಟ್ರಸ್ಟ್​ನವರು ನನ್ನ ಬಳಿಗೆ ಬಂದಿದ್ರು. 2018ರಲ್ಲಿ ನಾನು ಸಿಎಂ ಆಗಿದ್ದಾಗ  ತಿರಸ್ಕರಿಸಿದ್ದೆ. ಆದರೆ ದಯಾನಂದ ಪೈ ಕುಟುಂಬಕ್ಕೆ 2021ರಲ್ಲಿ ಖಾತೆ ಮಾಡಿಕೊಡಲಾಗಿದೆ. ಕಾನೂನು ಬಾಹಿರವಾಗಿ ತಿದ್ದುಪಡಿ ಮಾಡಿ ಅನುಮೋದನೆ ಕೊಟ್ಟಿದ್ದು, ಸಚಿವ ಡಾ.ಅಶ್ವತ್ಥ ನಾರಾಯಣ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇರವಾಗಿ ಭಾಗಿಯಾಗಿದ್ದಾರೆ. ಸಾರ್ವಜನಿಕ ಸ್ವತ್ತು ಖಾಸಗಿ ಪಾಲಾಗುವುದನ್ನು ನೀವು ತಪ್ಪಿಸಬೇಕು. ಭ್ರಷ್ಟಾಚಾರ ನಿರ್ಮೂಲನೆಯ ನಿಮ್ಮ ಬದ್ಧತೆ ಪ್ರದರ್ಶಿಸುತ್ತೀರಿ ಎಂದು ನಂಬಿದ್ದೇನೆ ಎಂದು ಪತ್ರ ಬರೆದಿದ್ದಾರೆ. 

ಟ್ರಸ್ಟ್​ ಖಾಸಗಿ ಪಾಲಾಗುವ ಹಿಂದೆ ಬಿ.ಎಲ್​ ಸಂತೋಷ್..!

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕುಮಾರಸ್ವಾಮಿ ಟ್ವಿಟ್ಟರ್​ನಲ್ಲಿ BMS ಸಂಸ್ಥೆಯವರ ಜೊತೆ ಸಚಿವ ಅಶ್ವತ್ಥ ನಾರಾಯಣ, ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಲ್​ ಸಂತೋಷ್​ ಸೇರಿದಂತೆ ಪ್ರಮುಖ ನಾಯಕರು ಉಭಯ ಕುಶಲೋಪರಿ ವಿಚಾರ ಮಾಡುತ್ತಿರುವ ಫೋಟೋಗಳನ್ನೂ ಹಾಕಿ ನ್ಯಾಯಾಂಗ ತನಿಖೆಗೆ ಆಗ್ರಹ ಮಾಡಿದ್ದರು. ಕುಮಾರಸ್ವಾಮಿ ಆರೋಪಕ್ಕೆ ಟ್ವಿಟ್ಟರ್​ನಲ್ಲೇ ಉತ್ತರಿಸಿದ ಬಿಜೆಪಿ ವಿಕ್ಸ್ ಹಚ್ಚಿಕೊಂಡು ಕಣ್ಣೀರು ಸುರಿಸುವ ಕುಮಾರಸ್ವಾಮಿಗೆ ಫೋಟೋ ಇಟ್ಟುಕೊಂಡು ಕಥೆ ಕಟ್ಟುವುದು ದೊಡ್ಡ ಕೆಲಸವಲ್ಲ. ಈ ಕಥೆಯಲ್ಲಿ ಕುಮಾರಸ್ವಾಮಿ ಫೋಟೋ ಮಿಸ್​​ ಆಗಿದ್ದು ಹೇಗೆ ಅಂತ ಹಳೇ ಫೋಟೋ ಹಾಕಿ ಪ್ರಶ್ನೆ ಎತ್ತಿದೆ. ಕುಮಾರಸ್ವಾಮಿ ಮಾತ್ರವಲ್ಲದೆ ದೇವೇಗೌಡರನ್ನು ಭೇಟಿ ಮಾಡಿರುವ ಫೋಟೋ ಕೂಡ ಬಿಡುಗಡೆ ಮಾಡಲಾಗಿದೆ. ಇಷ್ಟೆಲ್ಲಾ ರಂಪಾಟದ ನಡುವೆ ವಿಧಾನಸಭಾ ಕಲಾಪದಲ್ಲಿ ಬಿಎಂಎಸ್​ ವಿಧೇಯಕ ಮಂಡನೆಯಾಗಿದೆ. 

ವಿಧಾನಸಭೆಯಲ್ಲಿ ಬಿಎಂಎಸ್​ ವಿವಿ ವಿಧೇಯಕ ಪಾಸ್​..!

ಬಿಎಂಎಸ್ ಖಾಸಗಿ ವಿವಿ ವಿಧೇಯಕ ಬಿಲ್ ಮಂಡಿಸಿದ್ದಾರೆ  ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್. ವಿಧೇಯಕ ಅಂಗೀಕಾರಕ್ಕೂ ಮನವಿ ಮಾಡಿದ್ದಾರೆ. ಆದರೆ ಈ ವಿಧೇಯಕ ಅಂಗೀಕಾರ ಮಾಡದಂತೆ ಜೆಡಿಎಸ್ ಉಪನಾಯಕ ಬಂಡೆಪ್ಪ ಖಾಶೆಂಪುರ್ ಮನವಿ ಮಾಡಿದ್ದಾರೆ. ಈ ಟ್ರಸ್ಟ್ ಬಗ್ಗೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಇದು ಬೇನಾಮಿ ಮತ್ತು ಅಕ್ರಮ ಟ್ರಸ್ಟ್ ಆಗಿದೆ. ಹಾಗಾಗಿ ಇದನ್ನ ಜಾರಿಗೆ ತರಲು ಬಿಡಬೇಡಿ ಅಂತ ಮನವಿ ಮಾಡಿದ್ದಾರೆ ಜೆಡಿಎಸ್ ಶಾಸಕರು. ಈ ವೇಳೆ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ನಾನು ಇಲ್ಲಿ ಪರ ವಿರೋಧ ಇಲ್ಲ. ಟ್ರಸ್ಟ್ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಇದೆ. ಟ್ರಸ್ಟ್ ಯಾರದ್ದು ಅಂತ ನಿರ್ಧಾರ ಆದ ಮೇಲೆ ವಿವಿ ಯಾರಿಗೆ ಸೇರಬೇಕು ಅನ್ನೋದು ನಿರ್ಧಾರ ಆಗಲಿದೆ. ಆ ವಿವಾದಕ್ಕೂ, ಇದಕ್ಕೂ ಸಂಬಂಧ ಇಲ್ಲ. 20 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಯೂನಿವರ್ಸಿಟಿ ಆಗಿ ಮಾನ್ಯತೆ ಕೊಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರು. ಈ ಟ್ರಸ್ಟ್ ವಿವಾಧದಲ್ಲಿದೆ ಇದಕ್ಕೆ ಅವಕಾಶ ನೀಡಬಾರದು ಅಂತ ಜೆಡಿಎಸ್ ಶಾಸಕರ ಆಗ್ರಹ ಮಾಡಿದ್ರು. ಜೆಡಿಎಸ್ ವಿರೋಧದ ನಡುವೆಯೂ ಬಿಎಂಎಸ್ ವಿವಿ ಬಿಲ್ ಅಂಗೀಕಾರ ಪಡೆದಿದೆ. ಸಭಾತ್ಯಾಗ ಮಾಡಿ ಜೆಡಿಎಸ್ ಶಾಸಕರು ಹೊರ ನಡೆದಿದ್ದಾರೆ. ಇದೀಗ ಪ್ರಧಾನಿ ಅಂಗಳಕ್ಕೆ ತಲುಪಿರುವ ಟ್ರಸ್ಟ್​ ಖಾಸಗೀಕರಣ ಏನಾದ್ರು ಟ್ವಿಸ್ಟ್​ ಪಡೆಯುತ್ತಾ ಕಾದು ನೋಡ್ಬೇಕು. 

Previous Post

ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದು ಯಾಕೆ ಸಿ.ಟಿ ರವಿ..! ಸಿದ್ದರಾಮಯ್ಯ ನಡೆ ಮೆಚ್ಚಲಾರ್ಹ..

Next Post

ಗಾಯದ ಮೇಲೆ ಬರೆ ಎಳೆದ ರಾಜ್ಯ ಸರ್ಕಾರ..! IAS, IPS ವಿಲವಿಲ..!

Related Posts

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ
Top Story

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

by ಪ್ರತಿಧ್ವನಿ
May 15, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಸ್ಥಿತಿ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದೆ, ಇದರ ಮುನ್ನೇಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ...

Read moreDetails
ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

May 15, 2026
ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

ಹೋಂಗಾರ್ಡ್ಸ್, ರಿಸರ್ವ್ ಪೊಲೀಸರು ವಾಹನ ತಪಾಸಣಾ ಮಾಡಿದ್ರೆ ಕಠಿಣ ಕ್ರಮ : ಮೋಹನ್‌ ಕುಮಾರ್‌ ದಾನಪ್ಪ ಮನವಿಗೆ ಡಿಜಿಪಿ ಸ್ಪಂದನೆ

May 14, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

May 14, 2026
Next Post
ಗಾಯದ ಮೇಲೆ ಬರೆ ಎಳೆದ ರಾಜ್ಯ ಸರ್ಕಾರ..! IAS, IPS ವಿಲವಿಲ..!

ಗಾಯದ ಮೇಲೆ ಬರೆ ಎಳೆದ ರಾಜ್ಯ ಸರ್ಕಾರ..! IAS, IPS ವಿಲವಿಲ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada