• Home
  • About Us
  • ಕರ್ನಾಟಕ
Tuesday, July 15, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕೃತ್ಯವನ್ನು ಸಮರ್ಥಿಸಿ, ಪೊಲೀಸರಿಗೆ ಶರಣಾದ ಕೇರಳ ಸರಣಿ ಬಾಂಬ್‌ ಸ್ಪೋಟ ಪ್ರಕರಣದ ಆರೋಪಿ

ಪ್ರತಿಧ್ವನಿ by ಪ್ರತಿಧ್ವನಿ
October 29, 2023
in Top Story, ದೇಶ
0
ಕೃತ್ಯವನ್ನು ಸಮರ್ಥಿಸಿ, ಪೊಲೀಸರಿಗೆ ಶರಣಾದ ಕೇರಳ ಸರಣಿ ಬಾಂಬ್‌ ಸ್ಪೋಟ ಪ್ರಕರಣದ ಆರೋಪಿ
Share on WhatsAppShare on FacebookShare on Telegram

ಕೇರಳದ ಕೊಚ್ಚಿಯ ಕಲಮಶೇರಿಯಲ್ಲಿ ನಡೆದ ಬಾಂಬ್‌ ಸ್ಪೋಟಕ್ಕೆ ರೋಚಕ ತಿರುವು ಸಿಕ್ಕಿದ್ದು, ಸ್ಪೋಟ ನಡೆಸಿದ್ದು ನಾನೇ ಎಂದು ಡೊಮಿನಿಕ್‌ ಮಾರ್ಟಿನ್‌ ಎಂಬಾತ ಪೊಲೀಸರ ಮುಂದೆ ಶರಣಾಗಿದ್ದಾನೆ.

ADVERTISEMENT

ಪೊಲೀಸರಿಗೆ ಶರಣಾರಾಗುವ ಮುನ್ನ ಫೇಸ್‌ಬುಕ್‌ ಲೈವ್‌ ಬಂದ ಡೊಮಿನಿಕ್ ಮಾರ್ಟಿನ್‌ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು, ಯಾಕಾಗಿ ಸ್ಪೋಟ ನಡೆಸಿದ್ದಾನೆ ಎಂದು ಘೋಷಿಸಿದ್ದಾನೆ.

ʼಯೆಹೋವನ ಸಾಕ್ಷಿಗಳುʼ 19 ನೇ ಶತಮಾನದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಹುಟ್ಟಿಕೊಂಡ ಕ್ರಿಶ್ಚಿಯನ್ ಧಾರ್ಮಿಕ ಗುಂಪಾಗಿದ್ದು, ಇವರು ಯೇಸುವನ್ನು ದೇವರು ಎಂದು ನಂಬುವುದಿಲ್ಲ. ಬದಲಾಗಿ ಬಹುಸಂಖ್ಯಾತ ರೋಮನ್‌ ಕ್ಯಾಥೊಲಿಕ್‌ರಿಗಿಂತ ಭಿನ್ನವಾಗಿ, ಯಹೋವನಲ್ಲಿ ವಿಶ್ವಾಸ ಇಡುವ ಗುಂಪಾಗಿದ್ದು, ಪವಿತ್ರ ʼಟ್ರಿನಿಟಿʼ ಯನ್ನು ನಂಬುವುದಿಲ್ಲ.

 ಈ ಪಂಗಡದ ಸಮಾವೇಶ ನಡೆಯುತ್ತಿರುವ ವೇಳೆ ನಡೆದ ಬಾಂಬ್‌ ಸ್ಪೋಟದಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿದ್ದರು

 ʼಯಹೋವನ ಸಾಕ್ಷಿಗಳುʼ ಎಂಬ ಕ್ರಿಶ್ಚಿಯನ್‌ ಪಂಗಡವು ರಾಷ್ಟ್ರ ವಿರೋಧಿ ಕಾರ್ಯದಲ್ಲಿ ತೊಡಗಿದೆ. ನಾನು ಕೂಡಾ ಆ ಪಂಗಡದ ಸದಸ್ಯನಾಗಿದ್ದೆ, ಪಂಗಡದ ರಾಷ್ಟ್ರದ್ರೋಹಿ ನಿಲುವಿನಿಂದ ಬೇಸತ್ತು ಅದರ ಸಮಾವೇಶದಲ್ಲಿ ಬಾಂಬ್‌ ಸ್ಪೋಟಿಸಿದೆ ಎಂದು ಎರ್ನಾಕುಲಂ ಮೂಲದ ಡೊಮಿನಿಕ್‌ ಮಾರ್ಟಿನ್‌ ಹೇಳಿದ್ದಾನೆ.

 ಯಹೋವನ ಸಾಕ್ಷಿಗಳು ನಡೆಸುತ್ತಿದ್ದ ಕಾರ್ಯಕ್ರಮದಲ್ಲಿ ಬಾಂಬ್‌ ಸ್ಪೋಟಕ್ಕೆ ನಾನೇ ಕಾರಣ. 16 ವರ್ಷಗಳ ಕಾಲ ಈ ಸಂಘಟನೆಯೊಂದಿಗೆ ನಾನು ಗುರುತಿಸಿಕೊಂಡಿದ್ದೆ. ಆದರೆ, ಆರು ವರ್ಷಗಳ ಹಿಂದೆ ನನಗೆ ಈ ಸಂಘಟನೆಯ ಆಶಯಗಳು ತಪ್ಪು ಎಂದು ಮನವರಿಕೆ ಆಗ ತೊಡಗಿತು ಎಂದು ಆತ ಹೇಳಿಕೊಂಡಿದ್ದಾನೆ.

ತಾವು ಮಾತ್ರ ಶ್ರೇಷ್ಠ ಎಂದು ಪ್ರತಿಪಾದಿಸುವ ʼಯಹೋವನ ಸಾಕ್ಷಿಗಳುʼ ದೇಶದ ಉಳಿದವರೊಂದಿಗೆ ಸೇರಬಾರದು, ಅವರು ಕೊಡುವ ಆಹಾರ ಸೇವಿಸಬಾರದು ಎಂದು ಮಕ್ಕಳಿಗೆ ಕಲಿಸುತ್ತಿದ್ದಾರೆ. ಸಣ್ಣ ಮಕ್ಕಳ ಮೆದುಳಿಗೆ ವಿಷ ಉಣ್ಣಿಸುತ್ತಿದ್ದಾರೆ. ರಾಷ್ಟ್ರಗೀತೆ ಹಾಡಬಾರದು, ಸರ್ಕಾರಿ ಕೆಲಸಗಳು ಮಾಡಬಾರದು ಎಂದು ಮಕ್ಕಳಿಗೆ ಕಲಿಸುತ್ತಿದ್ದಾರೆ, ಅದೆಲ್ಲಾ ನಶಿಸಲ್ಪಟ್ಟ ಜನಾಂಗದ ಕೆಲಸ, ನಾವು ಮಾಡಬಾರದು ಎಂದು ಕಲಿಸುತ್ತಾರೆ. ನಮ್ಮನ್ನು ಬಿಟ್ಟು ಉಳಿದವರೆಲ್ಲರೂ ನಾಶವಾಗುತ್ತಾರೆ ಎಂದು ಇವರು ಮಕ್ಕಳಿಗೆ ಕಲಿಸುತ್ತಿದ್ದಾರೆ. ಕೋಟ್ಯಾಂತರ ಜನರ ನಾಶ ಬಯಸುವ ಇವರನ್ನು ಏನು ಮಾಡಬೇಕು? ಈ ಸಂಘಟನೆ ರಾಷ್ಟ್ರಕ್ಕೆ ಅಪಾಯಕಾರಿ ಎಂದು ನಾನು ಅರ್ಥ ಮಾಡಿಕೊಂಡ ಕಾರಣ ಈ ತೀರ್ಮಾನ ತೆಗೆದುಕೊಳ್ಳಬೇಕಾಯಿತು ಎಂದು ಆತ ಹೇಳಿಕೊಂಡಿದ್ದಾನೆ.

ಧರ್ಮದ ಬಗ್ಗೆ ಭಯ ಇರುವುದರಿಂದ ಇವರ ಬಗ್ಗೆ ಗೊತ್ತಿದ್ದೂ ರಾಜಕಾರಣಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.   ನಮಗೆ ಅನ್ನ ಕೊಡುವ ಈ ದೇಶದ ಜನರನ್ನು ವೇಶ್ಯಾ ಸಮೂಹ ಎಂದೂ, ನಾಶವಾಗಲಿ ಎಂದೂ ಬಯಸುವುದು ಹಾಗೂ ನಾವು ಮಾತ್ರ ಉತ್ತಮರು ಎನ್ನುವ ನಂಬಿಕೆಯನ್ನು ನಾನು ವಿರೋಧಿಸುತ್ತೇನೆ. ಈ ಸಂಘಟನೆ ಇಲ್ಲಿ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾನೆ.

ಅಲ್ಲದೆ, ನಾನು ಪೊಲೀಸ್‌ ಠಾಣೆಗೆ ಹೋಗಿ ಶರಣಾಗುತ್ತೇನೆ. ನನ್ನನ್ನು ಹುಡುಕಿ ಬರಬೇಕಾಗಿಲ್ಲ. ಈ ಬಾಂಬ್‌ ಸ್ಪೋಟ ಹೇಗೆ ನಡೆಸಿದೆ ಎಂಬುದನ್ನು ಟೆಲಿಕಾಸ್ಟ್‌ ಮಾಡಬಾರದು. ಅದು ಬಹಳ ಅಪಾಯಕಾರಿ, ಯಾವುದೇ ಟಿವಿ ಚಾನೆಲ್‌ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಬಾರದು. ಸಾಮಾನ್ಯ ಜನರಿಗೆ ಆ ಮಾಹಿತಿ ಅಗತ್ಯವಿಲ್ಲ ಎಂದು ಆತ ಮನವಿ ಮಾಡಿದ್ದಾನೆ.

Kerala ADGP MR Ajith Kumar, says "One person has surrendered in Kodakra Police Station, in Thrissur Rural, claiming that he has done it. His name is Dominic Martin and he claims that he belonged to the same group of sabha. We are verifying it. We are looking into all aspects of… pic.twitter.com/Cm0mcfDLFV

— Mohammed Zubair (@zoo_bear) October 29, 2023
Tags: BlastsDominic MartinJehovah's WitnessesKalamasseryPrayer Meet
Previous Post

ಕಿತ್ತೂರು ರಾಣಿ ಚನ್ನಮ್ಮ ನನ್ನ ಆದರ್ಶ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Next Post

ಇಸ್ರೇಲ್​ – ಹಮಾಸ್​ ಯುದ್ಧ; ಕೇರಳದಲ್ಲಿ ಬಾಂಬ್ ಸ್ಫೋಟಕ್ಕೆ ಲಿಂಕ್​ ಇದ್ಯಾ..?

Related Posts

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ
Top Story

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ

by ಪ್ರತಿಧ್ವನಿ
July 14, 2025
0

ಸರ್ಕಾರಿ ಸಹಾಯಧನ, ಪರಿಹಾರ ಧನ, ಆರ್ಥಿಕ ಸೌಲಭ್ಯಗಳನ್ನು ಸಾಲಕ್ಕೆ ಹೊಂದಾಣಿಕೆ ಮಾಡಿದರೆ, ಬ್ಯಾಂಕ್ ಮೇಲೆ ಕ್ರಮ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕರ್ಸ್‍ಗಳೊಂದಿಗೆ ಸಚಿವ ಸಂತೋಷ ಲಾಡ್ ಸಭೆ...

Read moreDetails

Santhosh Lad: ಟ್ರಂಪ್‌ ಯಾರ ಫ್ರೆಂಡ್‌ : ಸಚಿವ ಸಂತೋಷ್‌ ಲಾಡ್‌ ಲೇವಡಿ

July 14, 2025
B Sarojadevi: ಪದ್ಮಭೂಷಣ ಬಿ.ಸರೋಜಾದೇವಿ ಅವರ ನಿಧನಕ್ಕೆ ಡಿಸಿಎಂ ಸಂತಾಪ..!!

B Saroja Devi: ಮಲ್ಲಮ್ಮನ ಪವಾಡ ನಿಲ್ಲಿಸಿದ ಕಲಾ ಸರಸ್ವತಿ..

July 14, 2025

B Saroja Devi: ಡಾ‌ ರಾಜ್‌, ಎಂಜಿಆರ್, ಎನ್‌ಟಿ ಆರ್‌ ಜೊತೆ ನಟಿಸಿದ ಬಹುಭಾಷಾ ನಟಿಅಭಿನಯ ಸರಸ್ವತಿ ಬಿ. ಸರೋಜಾ ದೇವಿ ಇನ್ನಿಲ್ಲ..!

July 14, 2025

DK Shivakumar: ಶಕ್ತಿ ಯೋಜನೆ ದೇಶಕ್ಕೆ ಮಾದರಿ; ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ..

July 14, 2025
Next Post
ಇಸ್ರೇಲ್​ – ಹಮಾಸ್​ ಯುದ್ಧ; ಕೇರಳದಲ್ಲಿ ಬಾಂಬ್ ಸ್ಫೋಟಕ್ಕೆ ಲಿಂಕ್​ ಇದ್ಯಾ..?

ಇಸ್ರೇಲ್​ - ಹಮಾಸ್​ ಯುದ್ಧ; ಕೇರಳದಲ್ಲಿ ಬಾಂಬ್ ಸ್ಫೋಟಕ್ಕೆ ಲಿಂಕ್​ ಇದ್ಯಾ..?

Please login to join discussion

Recent News

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ
Top Story

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ

by ಪ್ರತಿಧ್ವನಿ
July 14, 2025
Top Story

Santhosh Lad: ಟ್ರಂಪ್‌ ಯಾರ ಫ್ರೆಂಡ್‌ : ಸಚಿವ ಸಂತೋಷ್‌ ಲಾಡ್‌ ಲೇವಡಿ

by ಪ್ರತಿಧ್ವನಿ
July 14, 2025
B Sarojadevi: ಪದ್ಮಭೂಷಣ ಬಿ.ಸರೋಜಾದೇವಿ ಅವರ ನಿಧನಕ್ಕೆ ಡಿಸಿಎಂ ಸಂತಾಪ..!!
Top Story

B Saroja Devi: ಮಲ್ಲಮ್ಮನ ಪವಾಡ ನಿಲ್ಲಿಸಿದ ಕಲಾ ಸರಸ್ವತಿ..

by ಪ್ರತಿಧ್ವನಿ
July 14, 2025
Top Story

B Saroja Devi: ಡಾ‌ ರಾಜ್‌, ಎಂಜಿಆರ್, ಎನ್‌ಟಿ ಆರ್‌ ಜೊತೆ ನಟಿಸಿದ ಬಹುಭಾಷಾ ನಟಿಅಭಿನಯ ಸರಸ್ವತಿ ಬಿ. ಸರೋಜಾ ದೇವಿ ಇನ್ನಿಲ್ಲ..!

by ಪ್ರತಿಧ್ವನಿ
July 14, 2025
Top Story

DK Shivakumar: ಶಕ್ತಿ ಯೋಜನೆ ದೇಶಕ್ಕೆ ಮಾದರಿ; ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ..

by ಪ್ರತಿಧ್ವನಿ
July 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ

ಸಾಲ ವಸೂಲಿಗಿಂತ ಜನರ ಜೀವ ಮುಖ್ಯ, ಸಾಲ ವಸೂಲಾತಿಯಲ್ಲಿ ಮಾನವೀಯತೆ ಇರಲಿ

July 14, 2025

Santhosh Lad: ಟ್ರಂಪ್‌ ಯಾರ ಫ್ರೆಂಡ್‌ : ಸಚಿವ ಸಂತೋಷ್‌ ಲಾಡ್‌ ಲೇವಡಿ

July 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada