ಬ್ಲಾಕ್ ಹೆಡ್ಸ್ Black headsಪ್ರತಿಯೊಬ್ಬರಲ್ಲೂ ನೀವು ನೋಡ್ತೀರಾ.. ಕೆಲವರು ಬ್ಲಾಕ್ ಹೆಡ್ಸ್ Black heads- ಅನ್ನ ಮೊಡವೆ ಅಂತಾನೂ ಹೇಳ್ತಾರೆ.. ಆದ್ರೆ ಮೊಡವೆಗು ಹಾಗೂ ಬ್ಲಾಕ್ ಹೆಡ್ಸ್ ಗೆ ತುಂಬಾನೇ ವ್ಯತ್ಯಾಸ ಇರುತ್ತೆ . ಇದು ನಮ್ಮ ಚರ್ಮದ ಮೇಲಾಗುವ ಒಂದು ರೀತಿಯ ಗುಳ್ಳೆ.. ಅದು ಎಣ್ಣೆ ಹಾಗೂ ಡೆಡ್ ಸ್ಕಿನ್ ನ ಹೊಂದಿರುತ್ತೆ.. ಬ್ಲಾಕ್ ಹೆಡ್ಸ್ ಆದಾಗ ಮೂಗು ಅಥವ ಬ್ಲಾಕ್ ಹೆಡ್ಸ್ ಆದ ಜಾಗದಲ್ಲಿ ಕಪ್ಪು ಹೆಚ್ಚಾಗಿ ಕಾಣಿಸುತ್ತೆ..ಏನೇ ಮೇಕಪ್ (makeup)ಮಾಡಿದ್ರು ನಮ್ಮ ಮುಖದಲ್ಲಿ ಆ ಒಂದು ಕಳೆ ಇರುವುದಿಲ್ಲ.. ಹಾಗಾಗಿ ಬ್ಲಾಕ್ಹೆಡ್ಸ್ ಅನ್ನು 15 ದಿನಕ್ಕೆ ಒಂದು ಸಲ ಅಥವಾ ತಿಂಗಳಿಗೊಂದು ಸಲ ರಿಮೂವ್ ಮಾಡ್ಲೇಬೇಕು..
ಬ್ಲಾಕೆಡ್ಸ್ ಅನ್ನಾ ರಿಮೂವ್ (remove)ಮಾಡಿಸುವುದಕ್ಕೆ ಕೆಲವರು ಸಲೂನ್ ಗೆ ಹೋಗಿ ಕ್ಲೀನ್ ಅಪ್ ಮಾಡಿಸ್ತಾರೆ ..ಸನ್ಸಿಟಿವ್ ಸ್ಕಿನ್ ಇದ್ರೆ ಕ್ಲೀನ್ ಅಪ್ ಮಾಡಿಸುವುದು ಕೂಡ ಒಂದು ರೀತಿಯ ಅಪಾಯ ಯಾಕೆ ಅಂತ ಹೇಳಿದ್ರೆ ಮೊಡವೆ ಆಗುವಂತ ಚಾನ್ಸಸ್ ಇರುತ್ತೆ ..
ಹೀಗಾಗಿ ಮನೆಯಲ್ಲೇ ಸಿಂಪಲ್ ಆಗಿ ಹೇಗೆ ಬ್ಲಾಕ್ ಹೆಡ್ಸ್ ನ ಹೇಗೆ ರಿಮೂವ್ ಮಾಡ್ಬೋದು ಅನ್ನೋದ್ರ ಡೀಟೇಲ್ಸ್ ಈ ಕೆಳಕಂಡಂತಿದೆ
ಗಂಧ ಮತ್ತು ಅರಿಶಿಣ
ಒಂದು ಟೇಬಲ್ ಸ್ಪೂನ್ ಅಷ್ಟು ಗಂಧದ ಪುಡಿಗೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಅರಿಶಿನವನ್ನು ಹಾಕಿ ಅದಕ್ಕೆ ಸ್ವಲ್ಪ ನಿಂಬೆರಸ ಅಥವಾ ಮೊಸರನ್ನ ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿ ಆ ಮಿಶ್ರಣವನ್ನು ಬ್ಲಾಕ್ಹೆಡ್ಸ್ ಆಗಿರುವಂತ ಜಾಗಕ್ಕೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಸ್ಕ್ರಬ್ ಮಾಡಿ ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡುವುದರಿಂದ ಬ್ಲಾಕ್ ಹೆಡ್ಸ್ ಕಡಿಮೆಯಾಗುತ್ತೆ..
ಉಪ್ಪು ಮತ್ತು ಸಕ್ಕರೆ
ಪ್ರತಿಯೊಬ್ಬರೂ ಕೂಡ ಈಗ ಕೊರಿಯನ್ ಟ್ರೆಂಡನ್ನು ಫಾಲೋ ಮಾಡ್ತಾ ಇದಾರೆ. ಸೊ ಕೊರಿಯದಲ್ಲಿ ಬ್ಲಾಕ್ ಹೆಡ್ಸ್ ಅನ್ನ ರಿಮೂವ್ ಮಾಡೋದಕ್ಕೆ ಈ ಒಂದು ಹ್ಯಾಕ್ ಮಾಡ್ತಾರೆ.. ಅರ್ಧ ಟೇಬಲ್ ಸ್ಪೂನ್ ಅಷ್ಟು ಸಕ್ಕರೆಗೆ ಅರ್ಧ ಟೇಬಲ್ ಸ್ಪೂನ್ ಅಷ್ಟು ಉಪ್ಪನ್ನು ಬೆರೆಸಿ ಸ್ವಲ್ಪ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿ ಮುಖಕ್ಕೆ ಆ ಪೇಸ್ಟ್ ಅನ್ನ ಹಚ್ಚುತ್ತಾರೆ ನಂತರ ಅದನ್ನು ಸರ್ಕ್ಯುಲರ್ ಮೋಶನ್ ಅಥವಾ ರೌಂಡ್ ಮೋಷನ್ ಅಲ್ಲಿ ಒಂದು ನಿಮಿಷಗಳ ಕಾಲ ಮಸಾಜ್ ಹಾಗೂ ಸ್ಕ್ರಬ್ ಮಾಡಿ ವಾಶ್ ಮಾಡೋದ್ರಿಂದ ಬ್ಲಾಕ್ಹೆಡ್ಸ್ ಕಡಿಮೆ ಆಗುತ್ತದೆ. ಆದರೆ ಮುಖದಲ್ಲಿ ಮೊಡವೆ ಇದ್ದವರು ಈ ಒಂದು ಮಾತನ್ನು ಪ್ರಯೋಗ ಮಾಡುವುದಕ್ಕೆ ಹೋಗಬೇಡಿ..
ಅಕ್ಕಿ ಹಿಟ್ಟು ಮತ್ತು ಮೊಸರು
ಎರಡು ಟೇಬಲ್ ಸ್ಪೂನ್ ಅಷ್ಟು ಅಕ್ಕಿ ಹಿಟ್ಟಿಗೆ ಒಂದು ಟೇಬಲ್ ಸ್ಪೂನ್ ಅಷ್ಟು ಮೊಸರನ್ನ ಮಿಕ್ಸ್ (mix)ಮಾಡಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ಸ್ಕ್ರಬ್ ಮಾಡಿ ವಾಶ್ ಮಾಡಿ ಹೀಗೆ ಮಾಡುವುದರಿಂದ ನಿಮ್ಮ ಬ್ಲಾಕೆಡ್ ಬೇಗನೆ ನಿವಾರಣೆ ಆಗುತ್ತೆ ಇದರ ಜೊತೆಗೆ ಅಕ್ಕಿ ಹಿಟ್ಟು ನಿಮ್ಮ ಮುಖದ ಹೊಳಪನ್ನು ಹೆಚ್ಚು ಮಾಡುತ್ತೆ ಹಾಗೂ ಪಿಂಪಲ್ ಮಾರ್ಕ್ಸ್ ಅಥವಾ ಏನೇ ಒಂದು ಡಾರ್ಕ್ ಸ್ಪಾಟ್ಸ್ (dark spots)ಇದ್ದರೂ ಕೂಡ ತೆಗೆದು ಹಾಕುವುದಕ್ಕೆ ಸಹಾಯ ಮಾಡುತ್ತೆ..
ಒಟ್ಟಿನಲ್ಲಿ ಬ್ಲಾಕೆಡ್ಸ್ ಇದ್ರೆ ಅದನ್ನ ತಕ್ಷಣವೇ ತೆಗೆದು ಹಾಕುವುದು ಉತ್ತಮ.. ಇಲ್ಲ ಅಂದ್ರೆ ಕೆಲವೊಂದು ಸಲ ಬ್ಲಾಕೆಡ್ಸ್ ಮೇಲೆ ಕೂದಲು ಬೆಳೆದಾಗ ಬ್ಲಾಕ್ ಹೆಡ್ಸ್ ಶಮನ ಮಾಡೋದಕ್ಕೆ ಕಷ್ಟ..