ಬೆಲೆ ಏರಿಕೆ ಖಂಡಿಸಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದ ಕಾಂಗ್ರೆಸ್ ನಡೆಯನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಬ್ಲ್ಯಾಕ್ ಮ್ಯಾಜಿಕ್ ಮೂಲಕ ಜನರ ಅನುಕಂಪವನ್ನ ಗಿಟ್ಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹರಿಯಾಣದ ಪಾಣಿಪತ್ನಲ್ಲಿ 900 ಕೋಟಿ ರೂಪಾಯಿ ಮೌಲ್ಯದ ಎಥನಾಲ್ ಸ್ಥಾವರವನ್ನ ಉದ್ಘಾಟಿಸಿ ಮಾತನಾಡಿದ ಮೋದಿ ಕಾಂಗ್ರೆಸ್ ಹೆಸರೇಳದೆ ಕಾಂಗ್ರೆಸ್ ನಾಯಕರ ವಿರುದ್ದ ಆಗಸ್ಟ್ 5ರ ಪ್ರತಿಭಟನೆಗೆ ಚಾಟಿ ಬೀಸಿದ್ದಾರೆ.

ನಾವು ಆಗಸ್ಟ್ 5ರಂದು ಕೆಲವರು ಹೇಗೆ ಕಪ್ಪು ಬಟ್ಟೆ ಧರಿಸಿ ಬ್ಲ್ಯಾಕ್ ಮ್ಯಾಜಿಕ್ ಹರಡಲು ಹೇಗೆ ಪ್ರಯತ್ನಿಸಿದ್ದರು ಎಂದು ನಾವು ನೋಡಿದ್ದೇವೆ. ಈ ಜನರು ಕಪ್ಪು ಬಟ್ಟೆ ಧರಿಸುವ ಮೂಲಕ ತಮ್ಮಲಲ್ಲಿರುವ ಹತ್ತಾಶೇಯನ್ನು ಕೊನೆಗಾಣಿಸಬಹುದು ಎಂದುಕೊಂಡಿದ್ದಾರೆ.
ಆಧರೆ, ವಾಮಾಚಾರ ಮಾಟಮಂತ್ರ, ಮೂಢನಂಬಿಕೆಗಳಲ್ಲಿ ತೊಡಗುವುದರಿಂದ ಮತ್ತೊಮ್ಮೆ ಜನರ ವಿಶ್ವಾಸವನ್ನ ಗಳಿಸಲು ಸಾಧ್ಯವಿಲ್ಲ ಎಂದು ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ ನಾಯಕರ ಪ್ರತಿಭಟನೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.