ಕಾಂಗ್ರೆಸ್ ಪಕ್ಷದ ನಾಯಕರು ರಾಮ ಮಂದಿರ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು “ರಾಜಕೀಯ” ನಿಲವು ಎಂದು ಭಾಜಪ, ಪ್ರಧಾನಿ ಮೋದಿ (Narendra modi) ಮತ್ತಿತರು ಟೀಕಿಸಿದ್ದಾರೆ. ಕಾಂಗ್ರೆಸ್ (Congress)ಪಕ್ಷದ ನಿರ್ಧಾರಕ್ಕೆ ಲೋಕಸಭಾ ಚುನಾವಣೆಯಲ್ಲಿ ಪಶ್ಚಾತಾಪ ಪಡೆಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಪ್ರೋ ಬಿ.ಕೆ.ಚಂದ್ರಶೇಖರ್ (BK Chandrashekar) ಹೇಳಿದ್ದಾರೆ
ಕಾಂಗ್ರೆಸ್ ಪಕ್ಷ ಹೇಳಿದ್ದೇನು
ರಾಮಮಂದಿರಕ್ಕೆ ನಮ್ಮ ವಿರೋಧವಿಲ್ಲ, ಆದರೇ ಮಂದಿರಾ ಕಟ್ಟಡ ಪೂರ್ಣಗೊಳ್ಳುವ 10-12ತಿಂಗಳು ಮುನ್ನ ರಾಮನ ಪ್ರತಿಷ್ಠಾಪನೆ ಹಿಂದೆ ರಾಜಕೀಯ ಉದ್ದೇಶವಿದೆ. ಇದು ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಕಾರ್ಯಕ್ರಮವಾಗಿದ್ದು, ಹೀಗಾಗಿ ಈ ಕಾರ್ಯಕ್ರಮಕ್ಕೆ ಬಂದಿರುವ ಆಹ್ವಾನವನ್ನು ಗೌರವಯುತವಾಗಿ ತಿರಸ್ಕರಿಸುತ್ತೇವೆ ಎಂದು ಕಾಂಗ್ರೆಸ್ ತನ್ನ ತೀರ್ಮಾನ ಪ್ರಕಟಿಸಿದೆ. ಆದರೆ ಬಿಜೆಪಿಯವರು ಕಾಂಗ್ರೆಸ್ ಪಕ್ಷ ರಾಮ ಮಂದಿರವನ್ನು ಬಹಿಷ್ಕರಿಸಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಪ್ರಚಾರ ಪಡೆಯುವ ಹಾಗೂ ರಾಮ ಮಂದಿರವನ್ನು ರಾಜಕೀಯ ಉದ್ದೇಶಕ್ಕೆ ಬಳಸುವ ಉದ್ದೇಶದೊಂದಿಗೆ ಬಿಜೆಪಿ ಈ ಕಾರ್ಯಕ್ರಮ ಮಾಡುತ್ತಿದೆ. ಇಲ್ಲದಿದ್ದರೆ ಪ್ರಧಾನಿ ಹಾಗೂ ಬಿಜೆಪಿ ನಾಯಕರ ಇಷ್ಟು ತರಾತುರಿಯಲ್ಲಿ ರಾಮ ಮಂದಿರ ಉದ್ಘಾಟನೆ ಯಾಕೆ ಮಾಡುತ್ತಿದ್ದರು? ಈ ಪ್ರಶ್ನೆಗೆ ಯಾರು ಕಾರಣ ನೀಡಿಲ್ಲ ಎಂದರು.
ದೇಶದ ನಾಲ್ಕು ಶಂಕರಚಾರ್ಯರು ಹೇಳಿರುವುದೇನು?
“ಮಂದಿರಾ ಪೂರ್ಣಗೊಳ್ಳುವ ಮೊದಲು ಪ್ರತಿಷ್ಠಾಪನೆ ಮಾಡುತ್ತಿರುವುದು ಹಿಂದೂ ಶಾಸ್ತ್ರದ ವಿರುದ್ಧವಾಗಿದೆ. ಹೀಗಾಗಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ” ಎಂದು ದೇಶದ ನಾಲ್ಕೂ ಶಂಕರಾಚಾರ್ಯರು ಹೇಳಿದ್ದಾರೆ.
ಹಗಲು-ರಾತ್ರಿ ಸನಾತನ ಧರ್ಮದ ಬಗ್ಗೆ ಜಪಿಸುವ ಭಾಜಪ, ಪ್ರಧಾನಿ ಮೋದಿ ಮತ್ತಿತರು ಸನಾತನ ಧರ್ಮದ ನಿಯಮಗಳನ್ನು ಮುರಿದಿದ್ದಾರೆ. ಹೀಗಾಗಿ ಈ ಬಗ್ಗೆ ಮೌನವಾಗಿ ಉಳಿಯಲು ಸಾಧ್ಯವಿಲ್ಲ. “ಪ್ರಧಾನಿ ಮೋದಿಯವರು ಗರ್ಭಗುಡಿಯನ್ನು ಪ್ರವೇಶಿಸಿ ರಾಮನ ಮೂರ್ತಿ ಪ್ರತಿಷ್ಠಾಪಿಸಲಿದ್ದಾರೆ. ಹೀಗಾಗಿ ಮಂದಿರ ಉದ್ಘಾಟನೆ ಹಿಂದೆ ರಾಜಕೀಯ ದೃಷ್ಠಿಕೋನವಿದೆ” ಎಂಬ ಕಾರಣ ಕೊಟ್ಟು ನಿಶ್ಚಲಾನಂದಾ ಸರಸ್ವತಿಯವರು ಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಸರಿದಿದ್ದಾರೆ.