ಬಿಜೆಪಿ ಉಸ್ತುವಾರಿಗಳು ದುಡ್ಡು ವಸೂಲಿಗಾಗಿ ರಾಜ್ಯಕ್ಕೆ ಬರುತ್ತಾರೆ ಎನ್ನುವ ಎಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಟೀಕಿಸಿರುವ ರಾಜ್ಯ ಬಿಜೆಪಿ, ಬಿಜೆಪಿ ಆರೋಪದ ಹಿಂದೆ ಕುಮಾರಸ್ವಾಮಿ ಅವರ ಅನುಭವವಿದೆ. ಜೆಡಿಎಸ್ ಪಕ್ಷದವರು ದುಡ್ಡಿಗಾಗಿ ರಾಜಕಾರಣ ಮಾಡುತ್ತಾರೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, BJP ಉಸ್ತುವಾರಿಗಳು ದುಡ್ಡು ವಸೂಲಿಗಾಗಿ ರಾಜ್ಯಕ್ಕೆ ಬರುತ್ತಾರೆ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಹಿಂದೆ ಕುಮಾರಸ್ವಾಮಿ ಅವರ ಅನುಭವವಿದೆ.JDS ಪಕ್ಷದವರು ದುಡ್ಡಿಗಾಗಿ ರಾಜಕಾರಣ ಮಾಡುತ್ತಾರೆ ಎಂದಿದೆ.
ಮುಂದುವರೆದು, ಕುಮಾರಸ್ವಾಮಿ ಅವರದ್ದು ದುಡ್ಡು ವಸೂಲಿಯ ಸಂಸ್ಕೃತಿ, ಇದು ಅವರ ಪಕ್ಷದ ಸಂಸ್ಕೃತಿಯೂ ಹೌದು. ಹಳದಿ ರೋಗವಿದ್ದವರಿಗೆ ನೋಡಿದ್ದೆಲ್ಲಾ ಹಳದಿಯಾಗಿ ಕಾಣುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಜೆಡಿಎಸ್ ಪಕ್ಷದವರಿಗೆ ನಾಲಿಗೆ ಸರಿ ಇದ್ದಿದ್ದರೆ ಇಂದು ಹೀನ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಬುಧವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, “ಕರ್ನಾಟಕ ಹಾಗೂ ಇಲ್ಲಿನ ಸ್ಥಳೀಯ ಪಕ್ಷದ ಬಗ್ಗೆ ಆತನಿಗೆ ಮಾಹಿತಿ ಇಲ್ಲ. ಪಾಪ ಅವರಿಗೆ ಏನ್ ಗೊತ್ತು? ಆತ ಬಂದಿರುವುದು ದುಡ್ಡು ವಸೂಲಿ ಮಾಡುವುದಕ್ಕೆ. ಕಲೆಕ್ಷನ್ ಮಾಡಲು ಬಂದಿರುವ ವ್ಯಕ್ತಿ ಜೆಡಿಎಸ್ ಬಗ್ಗೆ ಮಾತನಾಡಿದ್ದಾರೆ. ನಾವೇನು ಅವರ ಮನೆ ಬಾಗಿಲಿಗೆ ಹೋಗಿದ್ವಾ?,” ಎಂದು ಕೆಂಡಾಮಂಡಲರಾಗಿದ್ದರು.
ಈ ಕುರಿತು ನೆನ್ನೆ ಪ್ರತಿಕ್ರಿಯಿಸಿದ ಅರುಣ್ ಸಿಂಗ್, ತಮಗೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ಆದರೆ ಕುಮಾರಸ್ವಾಮಿ ಹುಚ್ಚುಚ್ಚಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.











