ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರಿಂದ ರಾಜ್ಯದಲ್ಲಿ 15ನೇ ಬಜೆಟ್(Budget) ಮಂಡನೆ ಬೆನ್ನಲ್ಲೇ ಲೋಕಸಭಾ(Loka Saba) ಚುನಾವಣೆಯ(Election) ಹೊಸ್ತಿಲಿನಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ನಾಯಕರು ಮಾಸ್ಟರ್ ಪ್ಲಾನ್(Master Plan) ಮಾಡಿಕೊಂಡಿದ್ದಾರೆ. ಸಿಎಂ ಸಿದ್ಧರಾಮಯ್ಯ(Siddaramaiah)ರ 15ನೇ ದಾಖಲೆಯ ಬಜೆಟ್ ಮುಂದಿಟ್ಟುಕೊಂಡು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ನಾಯಕರ(BJP Leaders) ಮಾಸ್ಟರ್ಪ್ಲಾನ್ ಮಾಡಿದ್ದಾರೆ.
ಏನಿದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಿಜೆಪಿ ನಾಯಕರ ಮಾಸ್ಟರ್ಪ್ಲಾನ್? ಎಂಬುದನ್ನು ʻಪ್ರತಿಧ್ವನಿʼ ಬಯಲು ಮಾಡುತ್ತಿದೆ.
ಸರ್ಕಾರದ ವಿರುದ್ಧ ಬಜೆಟ್ ಅಸ್ತ್ರವನ್ನು ಬಿಟ್ಟು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ನಾಯಕರು ಹೆಣೆದಿರುವ ತಂತ್ರ ಇದಾಗಿದ್ದು, ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಅನುದಾನದಂತೆ ಬಹುಸಂಖ್ಯಾತರ ವಿಚಾರ ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಸ್ಟರ್ಪ್ಲಾನ್ ಮಾಡಿರುವ ಬಿಜೆಪಿ ನಾಯಕರು. ನಿನ್ನೆಯಷ್ಟೇ ದಾಖಲೆಯ 15 ನೇ ಬಜೆಟ್ ಮಂಡಿಸಿರುವ ಸಿಎಂ ಸಿದ್ಧರಾಮಯ್ಯ, ಬಜೆಟ್ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಅಭಿವೃದ್ಧಿ ಕೋಟಿ ಕೋಟಿ ಅನುದಾನ ಮೀಸಲಿಟ್ಟಿರುವ ಸಿಎಂ ಸಿದ್ಧರಾಮಯ್ಯರ ಸರ್ಕಾರ. ಬಜೆಟ್ ಅಲ್ಪಸಂಖ್ಯಾತರು ಎಂದು ಉಲ್ಲೇಖಿಸಿ, ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವ ಸಿದ್ಧರಾಮಯ್ಯರ ಸರ್ಕಾರ. ಈಗ ಅಲ್ಪಸಂಖ್ಯಾತರ ಕಲ್ಯಾಣ, ಅಭಿವೃದ್ಧಿಯೇನೋ ಸರಿ. ಸರ್ಕಾರದ ಪ್ರಕಾರ ಬಹುಸಂಖ್ಯಾತರು ಅಂದರೆ ಯಾರು? ಎಂದು ಪ್ರಶ್ನಿಸಲು ವೇದಿಕೆ ಸಿದ್ಧಪಡಿಸಿಕೊಂಡ ಬಿಜೆಪಿ ನಾಯಕರು. ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡು ಸದನಗಳಲ್ಲಿ ನಿಯಮ 330 ರ ಅಡಿಯಲ್ಲಿ ಇದೇ ವಿಚಾರವನ್ನು ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ಹೆಣೆದಿರುವ ಬಿಜೆಪಿ ನಾಯಕರು.
ರಾಜ್ಯದಲ್ಲಿ ಬಹುಸಂಖ್ಯಾತರು ಅಂದರೆ ಯಾರು? ಯಾವ ಆಧಾರದಲ್ಲಿ ಬಹುಸಂಖ್ಯಾತರು ಎಂದು ಗುರುತಿಸಲಾಗಿದೆ? ಬಹುಸಂಖ್ಯಾತರು ಎಂದು ಪರಿಗಣಿಸಲು ಇರುವ ಮಾನದಂಡಗಳೇನು? ಯಾವ ಮತ, ಪಂಥ, ಪಂಗಡ, ಜಾತಿಯವರನ್ನು ಬಹುಸಂಖ್ಯಾತರು ಎಂದು ಪರಿಗಣಿಸಲಾಗುತ್ತದೆ? ಬಹುಸಂಖ್ಯಾತರಿಗೆ ಸದರಿ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳೇನು? ಕಳೆದರಡು ವರ್ಷಗಳಲ್ಲಿ ಬಹುಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಎಷ್ಟು ಮೊತ್ತವನ್ನು ವೆಚ್ಚ ಮಾಡಿದೆ? ಬಹುಸಂಖ್ಯಾತರಿಗಾಗಿ ಯಾವ್ಯಾವ ಯೋಜನೆಗಳನ್ನು ಜಾರಿಗೆ ತಂದಿದೆ? ಸದರಿ ಯೋಜನೆಗಳಿಗೆ ನಿಗದಿಪಡಿಸಿದ ಅನುದಾನ ಹಾಗೂ ರಾಜ್ಯದಲ್ಲಿ ಬಹುಸಂಖ್ಯಾತರ ಸ್ಥಾನಮಾನ, ಅವರ ಜನಸಂಖ್ಯೆ ಎಷ್ಟು? ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಬಹುಸಂಖ್ಯಾತರು ಇದ್ದಾರೆ? ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ, ಈ ಬಹುಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಚರ್ಚೆಯಾಗಬೇಕಿದೆ. ಈ ನಿಟ್ಟಿನಲ್ಲಿ ನಿಯಮ 330ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಕೋರಲು ಬಿಜೆಪಿ ನಾಯಕರು ತಯಾರಿ ಮಾಡಿಕೊಂಡಿದ್ದು, ಬಿಜೆಪಿ ನಾಯಕರ ಪ್ರಸ್ತಾಪದ ಪ್ರತಿ ಕೂಡ ಪ್ರತಿಧ್ವನಿಗೆ ಲಭ್ಯವಾಗಿದೆ.
#Congress #Siddaramaiah #BJPKarnataka #StateBudget #KarnatakaGovernment