ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ ವಿಚಾರವಾಗಿ, ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ʻಬಿಜೆಪಿಯ ಚುನಾವಣಾ ಪ್ರಣಾಳಿಕೆ ಎಲ್ಲಾ ಚುನಾವಣಾ ಗಿಮಿಕ್ ಮೂರುವರೆ ವರ್ಷ ಆಡಳಿತ ಮಾಡಿದ್ದಾರೆ. ಈ ಎಲ್ಲಾ ಕಾರ್ಯಕ್ರಮ ತರೋಕೆ ಅವಕಾಶ ಇತ್ತಲ್ವಾ ಅವಾಗ ಯಾಕೆ ತರಲಿಲ್ಲ? ಹಾಲು ಕೊಡೋದು ಆಗ್ಲೇ ಮಾಡಬಹುದಿತ್ತಲ್ವಾ? ಉಚಿತ ಘೋಷಣೆಗಳ ಬಗ್ಗೆ ಪ್ರಧಾನಿ ಮೋದಿ ಅವರು ದಿನಾ ಜಾಗಟೆ ಹೊಡೆಯುತ್ತಿದ್ರು. ಫ್ರೀ ಫ್ರೀ ಕೊಡಬಾರದು ಅಂತ ಮೋದಿನೇ ಹೇಳ್ತಾಯಿದ್ರು.. ಈಗ ಯಾರು ಇವರಿಗೆ ಅನುಮತಿ ಕೊಟ್ರು ಘೋಷಣೆ ಮಾಡೋಕೆ? ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಡೂಪ್ಲಿಕೇಟ್ ಅಂತ ಚರ್ಚೆ ಮಾಡ್ತಾಯಿದ್ರು ಇವರದ್ದು ಏನು ಹಾಗಾದ್ರೆ? ಮೂರುವರೆ ವರ್ಷ ಅಧಿಕಾರದಲ್ಲಿದ್ರೂ ಗ್ಯಾಸ್ ಬೆಲೆ ಹೆಚ್ಚಾಗಿದೆ ಅವಾಗ ಯಾಕೆ ಕಮ್ಮಿ ಮಾಡಿಲ್ಲ? ಮೂರುವರೆ ವರ್ಷದಲ್ಲಿ ಹಣ ಲೂಟಿ ಮಾಡೋದು ಬಿಟ್ಟು ಜನಸಾಮಾನ್ಯರ ಬಗ್ಗೆ ನೋಡಿಲಿಲ್ಲ ಜನರ ಜೊತೆ ಚೆಲ್ಲಾಟವಾಡಿದ್ರು.. ಈಗ ಎರಡು ರಾಷ್ಟ್ರೀಯ ಪಕ್ಷಗಳ ಘೋಷಣೆಗಳ ಬಗ್ಗೆ ಜನರಲ್ಲಿ ಭ್ರಮನಿರಸನವಿದೆʼ ಅಂತ ಬಿಜೆಪಿ ಹಾಗೂ ಕಾಂಗೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ರು.
ಬಳಿಕ ದೇಶದ ವಿರುದ್ಧ ಹಾಗೂ ಹಿಂದೂಗಳ ವಿರುದ್ಧ ಮಾತಾಡಿದ್ರೆ ಮುಂದೆ ಎನ್‌ಕೌಂಟರ್ ಮಾಡಲಾಗುತ್ತೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತ್ನಾಡಿದ ಹೆಚ್.ಡಿ.ಕುಮಾರಸ್ವಾಮಿ, ʻಆ ತರಹ ಆದ್ರೆ ಮೊದಲು ಯತ್ನಾಳ್ ಅವರಿಗೆ ಎನ್‌ಕೌಂಟರ್ ಮಾಡಬೇಕಲ್ವಾ..? ಅವರ ಪಕ್ಷದಲ್ಲಿ ಯಾರ್ ಯಾರು ಏನೇನು ಮಾತಾಡಿಕೊಂಡಿದ್ದಾರೆ. ನಿರಾಣಿ ಬಗ್ಗೆ ಯತ್ನಾಳ್, ಯತ್ನಾಳ್ ಬಗ್ಗೆ ನಿರಾಣಿ ಏನೇನೋ ಮಾತಾಡಿಕೊಂಡಿರಲ್ವಾ.. ಮೊದಲು ಇವೆಲ್ಲ ಅವರ ಮೇಲೆ ಮಾಡಬೇಕಲ್ವಾ? ನಾನು ಆ ತರಹದ ಪದಗಳನ್ನ ಬಳಕೆ ಮಾಡಲ್ಲ ಅಂತ ಕುಮಾರಸ್ವಾಮಿ ಹೇಳಿದ್ರು. ಇವತ್ತು ಸಮಾಜ ಒಡೆಯುವಂತ ಕೆಲಸ ಮಾಡ್ತಾ ಇರೋದು ಅವರು. ಹಿಂದೂ ಅಂದರೆ ಅರ್ಥ ಏನು ಅಂತ ಯತ್ನಾಳ್ ಅವರು ಹೇಳಬೇಕಲ್ಲಾ? ಬಿಜೆಪಿಯ ಹಿಂದುತ್ವವಾದಕ್ಕೂ ನಮ್ಮ ದೇಶದ ಸಂಸ್ಕೃತಿ ಹಿಂದುತ್ವವಾದಕ್ಕೂ ವ್ಯತ್ಯಾಸವಿದೆ. ಎಲ್ಲರೂ ನೆಮ್ಮದಿಯಿಂದ ಬದುಕಬೇಕು ಎನ್ನುವ ಸಂದೇಶ ಕೋಡೋದು ಹಿಂದೂ ಧರ್ಮ.
ಸಮಾಜ ಹಾಳು ಮಾಡು ಅಂತ ಹೇಳಿಕೊಡುವ ಧರ್ಮ ಅಲ್ಲ ಇದು. ಹಿಂದೂ ಧರ್ಮದ ಹೆಸರಲ್ಲಿ ಅಶಾಂತಿ ಉಂಟು ಮಾಡಿ ಅಮಾಯಕ ಯುವಕರನ್ನ ಬಲಿ ತೆಗೆದುಕೊಳ್ಳೋದ್ದಕ್ಕೆ ಹಿಂದೂ ಧರ್ಮ ಹೇಳಿಲ್ಲ. ಅಧಿಕಾರ ಹಿಡಿಯೋದ್ದಕ್ಕೆ ಇವರು ಈ ರೀತಿ ಮಾಡುತ್ತಿದ್ದಾರೆ. ಅದ್ದಕ್ಕಾಗಿ ನಾನು ಈ ವಿಷಯಗಳ ಬಗ್ಗೆ ಹೆಚ್ಚಿನ ಪ್ರಾತಿನಿಧ್ಯ ಕೊಟ್ಟಿಲ್ಲ. ನಾಡಿನ ಜನತೆ ನೆಮ್ಮದಿಯಿಂದ ಬದುಕಲು ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರಲು ಐದು ವರ್ಷ ಅಧಿಕಾರ ಯಾಕೆ ಕೋಡಿ ಎಂದು ಕೇಳುತ್ತಿದ್ದೆನೆ ಎಂದ್ರೆ ಸಮಾಜದಲ್ಲಿ ಅಶಾಂತಿ ವಾತವರಣ ಬರದೆ ಜನ ನೆಮ್ಮದಿಯಿಂದ ಬದುಕಬೇಕೆನ್ನೊದು ನಮ್ಮ ಕಾರ್ಯಕ್ರಮ. ಮೋದಿ ಹೇಳ್ತಾರೆ ಜೆಡಿಎಸ್‌ಗೆ ವೋಟ್ ಹಾಕಿದ್ರೆ ಕಾಂಗ್ರೆಸ್‌ಗೆ ಹಾಕಿದ ಹಾಗೆ ಅಂತ. ಇತ್ತ ಸಿದ್ದರಾಮಯ್ಯನವರು ಜೆಡಿಎಸ್‌ಗೆ ವೋಟ್ ಹಾಕಿದ್ರೆ ವೇಸ್ಟ್ ಆಗುತ್ತೆ ಅಂತ. ಹೇಳ್ತಾರೆ. ನಾನು ಹೇಳ್ತೆನೆ ಜೆಡಿಎಸ್‌ಗೆ ನೀಡುವ ಮತ ಕನ್ನಡ ನಾಡಿಗೆ ಹಿತ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ರು.
ಇದೇ ವೇಳೆ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ʻಸುಮಲತಾ ಅವರು ದೊಡ್ಡವರು ಅವರ ಬಗ್ಗೆ ಮಾತಾಡಲ್ಲ. ನಾನು ಹೆಲಿಕಾಪ್ಟರ್ ನಲ್ಲೂ ಹೋಗೋನು, ಎತ್ತಿನ ಗಾಡಿಯಲ್ಲೂ ಹೋಗೋನು, ಕಾಲ್ನಡಿಗೆಯಲ್ಲೂ ಹೋಗೋನು, ಕೊನೆಗೆ ಜಟ್ಕಾ ಗಾಡಿಯಲ್ಲಿ ಹೋಗೋನು. ಒಟ್ನಲ್ಲಿ ಜೆಡಿಎಸ್ 120 ಸೀಟ್ ಗೆಲ್ಲುತ್ತೆ ಅಂತ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ರು. ಇನ್ನು ಪ್ರಧಾನಿ ಮೋದಿ ಬಗ್ಗೆ ಪ್ರಿಯಾಂಕ್ ಖರ್ಗೆ ಅವಹೇಳನಕಾರಿ ಮಾತಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ʻಅವರಷ್ಟು ದೊಡ್ಡವನು ಅಲ್ಲ ಅವರಷ್ಟು ಬುದ್ಧಿವಂತನೂ ಅಲ್ಲ ನಾನು. ನಾನು ಹಳ್ಳಿ ರೈತರ ಮಕ್ಕಳು ದೊಡ್ಡವರ ಬಗ್ಗೆ ಮಾತಾಡೋಕೆ ಆಗುತ್ತಾ? ನಮ್ದೊಂದು ಸಣ್ಣ ಪಕ್ಷ ಅಂತ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ರು.