ಬಾಲಿವುಡ್ನ ಪ್ರಸಿದ್ದ ಗಾಯಕ ಕೆಕೆ ಎಂದೇ ಪ್ರಸಿದ್ದಿ ಪಡೆದಿದ್ದ ಕೃಷ್ಣಕುಮಾರ್ ಕುನ್ನತ್(53) ಸಾವು ಇದೀಗ ಪಶ್ಷಿಮ ಬಂಗಾಳದಲ್ಲಿ ಬಿಜೆಪಿ ಹಾಗು ಟಿಎಂಸಿ ನಡುವಿನ ರಾಜಕೀಯ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.
ಕೆಕೆ ಸಾವಿಗೆ ಆಡಳಿತ ವೈಫಲ್ಯ ಎಂದು ಕರೆದಿರುವ ಬಿಜೆಪಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಗಾಯಕನ ಸಾವಿನ್ನು ರಾಜಕೀಯಗೊಳಿಸದಂತೆ ಕೇಸರಿ ಪಾಳಯಕ್ಕೆ ಎಚ್ಚರಿಕೆ ನೀಡಿದೆ.
ಮಂಗಳವಾರ ಸಂಜೆ ಕೆಕೆ ದಕ್ಷಿಣ ಕೋಲ್ಕತ್ತಾದಲ್ಲಿರುವ ನಜ್ರುಲ್ ಮಂಚಾದಲ್ಲಿರುವ ಗುರುದಾಸ್ ಕಾಲೇಜಿನಲ್ಲಿ ಸಂಗೀತ ಸಂಜೆ ನಡೆಸಿಕೊಟ್ಟು ತಂಗಿದ್ದ ಹೋಟೆಲ್ಗೆ ವಾಪಸಾದ ನಂತರ ಕುಸಿದು ಬಿದ್ದರು ಎಂದು ತಿಳಿದು ಬಂದಿದೆ.
ತಕ್ಷಣವೇ ಅಲ್ಲಿದ್ದ ಸ್ಥಳೀಯರು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರಾದರು ಮಾರ್ಗ ಮದ್ಯೆ ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಕೆಕೆ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಘಟನೆ ಕುರಿತು ಸಂಪೂರ್ಣ ನಿಷ್ಪಪಕ್ಷಪಾತ ತನಿಖೆಯಾಗಬೇಕು ಮತ್ತು ಭದ್ರತಾ ಹಾಗು ಆಡಳಿತ ವೈಫಲ್ಯವೇ ಗಾಯಕನ ಸಾವಿಗೆ ಕಾರಣ ಎಂದು ಟಿಎಂಸಿಯನ್ನ ದೂಷಿಸಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ವಕ್ತಾರ ಸಮಿಕ್ ಭಟ್ಟಾವಾರ್ಯ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಮೂರು ಸಾವಿರ ಜನರಿಗೆ ಆಸನ ಸಾಮರ್ಥ್ಯವಿದೆ ಆದರೆ, ಅಲ್ಲಿ ಏಳು ಸಾವಿರಕ್ಕಿಂತಲ್ಲು ಹೆಚ್ಚು ಜನರು ಭಾಗಿಯಾಗಿದ್ದರು. ಅಲ್ಲಿ ಹೆಚ್ಚು ಹೆಚ್ಚು ಜನರು ಗುಂಪುಗೂಡಿದ್ದರಿಂದ ಒಬ್ಬ ವಿಐಪಿಗೆ ಸೂಕ್ತ ಭದ್ರತೆಯನ್ನ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಗೋಶ್ ಇಂತಹ ದುರದೃಷ್ಕರ ಘಟನೆಯಲ್ಲು ಸಹ ಬಿಜೆಪಿ ತನ್ನ ಹೊಲಸು ರಾಜಕಾರಣವನ್ನ ಮುಂದಿವರೆಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಮುಂದುವರೆದು, ಗಾಯಕರ ಸಾವು ಅತ್ಯಂತ ದುರದೃಷ್ಕರ ಸಂಗತಿ ಎಲ್ಲರು ಗಾಯಕನ ಸಾವಿಗೆ ಸಂತಾಪ ಸೂಚಿಸುವ ಬದಲು ಕೇಸರಿ ಪಾಳಯ ಸಾವಿನಲ್ಲು ರಾಜಕೀಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕೆಕೆಯನ್ನ ತಮ್ಮ ಪಕ್ಷದ ನಾಯಕ ಎಂದು ಬಿಜೆಪಿ ಹೇಳಿದ್ದರು ಅಚ್ಚರಿಪಡಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಎರಡು ದಿನಗಳ ಕೋಲ್ಕತ್ತಾ ಪ್ರವಾಸದಲ್ಲಿದ್ದ ಕೆಕೆ ಎರಡು ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಿ ಕೊಡುವವರಿದ್ದರು. ಆದರೆ, ಅಭಿಮಾನಿಗಳು ಕಾರ್ಯಕ್ರಮದ ಸ್ಥಳ ಹಾಗು ಹೋಟೆಲ್ ಬಳಿ ಜಮಾಯಿಸಿದ್ದರಿಂದ ಅವರ ಆರೋಗ್ಯ ಹದಗೆಡಲು ಮುಖ್ಯ ಕಾರಣ ಎಂದು ತಿಳಿದು ಬಂದಿದೆ.
ಇಂದು ಅವರ ಪಾರ್ಥಿವ ಶರೀರದ ಪೋಸ್ಟ್ ಮಾರ್ಟಮ್ ವರದಿ ಬಂದ ನಂತರ ಕೆಕೆ ಸಾವಿಗೆ ನಿಖರ ಕಾರಣ ಏನೆಂದು ಗೊತ್ತಾಗಲಿದೆ.













