ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಏನೂ ಮಾಡುವುದಿಲ್ಲ ಎಂಬ ಭಾವನೆ ಅಪರಾಧಿಗಳಿಗೆ ಕಾನೂನಿನ ಭಯವನ್ನೇ ಇಲ್ಲದಂತಾಗಿಸಿದ್ದು, ನಮ್ಮನ್ನು ಕೇಳುವವರಿಲ್ಲ ಎಂಬಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಶಿಕಾರಿಪುರದಲ್ಲಿ ಯುವಕನಿಗೆ ಚಾಕು ಇರಿತ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಈಗಾಗಲೇ ನಮ್ಮ ಸಂಸದರಾದ ಬಿ. ವೈ.ರಾಘವೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ವಾತಾವರಣ ತಿಳಿಯಾಗಿದೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಬೆಳಗಾವಿ ಘಟನೆ, ಶಿವಮೊಗ್ಗ ಘಟನೆ ಸೇರಿದಂತೆ ಎಲ್ಲೆಡೆ ಗಲಭೆ ಆಗುತ್ತಿದೆ. ಸಿದ್ಧರಾಮಯ್ಯ ತಮ್ಮ ಇಡೀ ಸಂಪುಟದಲ್ಲಿನ ಸಚಿವರ ಜೊತೆಗೆ ದೆಹಲಿಯಲ್ಲಿ ಕುಳಿತಿದ್ದಾರೆ, ಇದು ಸರಿಯಲ್ಲ. ಶಿಕಾರಿಪುರದ ಜನ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬಂದವರು ಎಂದರು.
#Shikaripura #BYVijayendra #BJPpresident #BJPKarnataka






