ಕೇಂದ್ರದಲ್ಲಿ ಹ್ಯಾಟ್ರಿಕ್ (Hatrik) ಗೆಲುವು ಕಾಣುವ ವಿಶ್ವಾಸದಲ್ಲಿರುವ ಬಿಜೆಪಿ (BJP) ಅದಕ್ಕಾಗಿ ಪೂರಕ ತಯಾರಿಗಳನ್ನೂ ನಡೆಸಿದೆ. ಈಗಾಗಾಲೇ ಮೊದಲ ಪಟ್ಟಿಯಲ್ಲಿ 190ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಫೈನಲ್ (final) ಮಾಡಿರುವ ಬಿಜೆಪಿ ಪಕ್ಷ, ಇಂದು ಎರಡನೇ ಪಟ್ಟಿಯನ್ನು (second list) ಬಿಡುಗಡೆ ಗೊಳಿಸಲಿದೆ. ಆ ನಿಟ್ಟಿನಲ್ಲಿ ಇವತ್ತು ಸಾಲು ಸಾಲು ಸಭೆಗಳಿವೆ. ಖುದ್ದು ಪ್ರಧಾನಿ ನರೇಂದ್ರ ಮೋದಿ (Modi) ಕೂಡ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಬಿಜೆಪಿ ಹೈ ಕಮಾಂಡ್ ತನ್ನ ಮೊದಲ ಪಟ್ಟಿಯಲ್ಲಿ ದೇಶದ್ದಾದ್ಯಂತ ಬೇರೆ ಬೇರೆ ರಾಜ್ಯಗಳ 195 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಈ ಪೈಕಿ ಕರ್ನಾಟಕದಿಂದ (Karnataka) ಒಬ್ಬೇ ಒಬ್ಬ ಅಭ್ಯರ್ಥಿಯನ್ನು ಕೂಡ ಫೈನಲ್ ಮಾಡಿಲ್ಲ . ಹೀಗಾಗಿ ರಾಜ್ಯದ ಪಾಲಿಗೆ ಎರಡನೇ ಪಟ್ಟಿ ಬಹಳ ಪ್ರಮುಖವೆನಿಸಿಕೊಂಡಿದೆ. ರಾಜ್ಯದ ಎಲ್ಲಾ ೨೮ ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಟ್ಟಿಗೆ ಫೈನಲ್ ಮಾಡೋದು ಡೌಟ್ ಎನ್ನಲಾಗ್ತಿದ್ದು, ಅರ್ಧಕ್ಕೆ ಅರ್ಧ ಕ್ಷೇತ್ರಗಳ ಲಿಸ್ಟ್ ಬಿಡುಗಡೆಯಾಗಬಹುದು ಅನ್ನೋ ನಿರೀಕ್ಷೆ ಇದೆ.

ಮೈಸೂರು-ಕೊಡಗು, ಉಡುಪಿ-ಚಿಕ್ಕಮಗಳೂರು, ತುಮಕೂರು.. ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂಬ ತೀವ್ರ ಕುತೂಹಲವಿದ್ದು , 2 ನೇ ಲಿಸ್ಟ್ ನಲ್ಲಿ ಕ್ಲಿಯರ್ ಪಿಕ್ಚರ್ ಸಿಗುತ್ತಾ ಕಾದು ನೋಡಬೇಕಿದೆ .













