ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಧರಿಸಿದ ಟೀಶರ್ಟ್ 41 ಸಾವಿರ ರೂ. ಬೆಲೆಯದ್ದು ಎಂದು ಬಿಜೆಪಿ ವ್ಯಂಗ್ಯವಾಡಿದರೆ, ಪ್ರಧಾನಿ ಮೋದಿ ಧರಿಸುವ ಸೂಟ್ 10 ಲಕ್ಷದ್ದು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ರಾಹುಲ್ ಗಾಂಧಿ ಧರಿಸುವ ಬಟ್ಟೆಯನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದ ಬಿಜೆಪಿ, ಭಾರತ್ ಜೋಡೋ ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಧರಿಸಿದ ಟೀ-ಶರ್ಟ್ ಪ್ರಸ್ತಾಪಿಸಿದ್ದು, ರಾಹುಲ್ ಧರಿಸಿದ ಬರ್ಬರಿ ಶರ್ಟ್ ಬೆಲೆ 41 ಸಾವಿರ ರೂ. ಮೌಲ್ಯದ್ದು, ಭಾರತ್ ದೇಖೋ (ಭಾರತ ನೋಡಿ) ಎಂದು ಕಾಲೆಳೆದಿತ್ತು.

ಬಿಜೆಪಿ ಟ್ವೀಟ್ ಬೆನ್ನಲ್ಲೇ ತಿರುಗೇಟು ನೀಡಿದ ಕಾಂಗ್ರೆಸ್, ಪಾದಯಾತ್ರೆಯಲ್ಲಿ ಜನ ಸೇರಿದ್ದನ್ನು ನೋಡಿ ಹೆದರಿಕೆ ಆಯಿತಾ? ನೀವು ವಿಷಯಗಳ ಬಗ್ಗೆ ಚರ್ಚೆ ನಡೆಸಿ. ಹಣದುಬ್ಬರ ಮತ್ತು ನಿರುದ್ಯೋಗದ ಬಗ್ಗೆ ಮಾತನಾಡಿ. ನೀವು ಧರಿಸುವ ಬಟ್ಟೆ ಬಗ್ಗೆ ಚರ್ಚಿಸುವುದಾದರೆ ಮೋದಿ ಧರಿಸುವ ಸೂಟ್ 10 ಲಕ್ಷದ್ದಾಗಿದೆ. ಅವರು ಧರಿಸುವ ಕನ್ನಡಕ 1.5 ಲಕ್ಷ ರೂ. ಆಗಿದೆ ಎಂದು ಹೇಳಿದೆ.