ಬಿಜೆಪಿ (Bjp) ವತಿಯಿಂದ ಇಂದು ಮಂಡ್ಯದಲ್ಲಿ (Mandya) ಬೃಹತ್ ಶೋಭಯಾತ್ರೆ ಕೈಗೊಳ್ಳಲಾಗಿದೆ. ಹೀಗಾಗಿ ಸಕ್ಕರೆ ನಾಡು ಮಂಡ್ಯ ಸಂಪೂರ್ಣ ಕೇಸರಿಮಯವಾಗಿದೆ. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಕೇಸರಿ ಬಂಟಿಂಗ್ಸ್ ಗಳು ರಾರಾಜಿಸುತ್ತಿವೆ. ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಕೇಸರಿ ಬಂಟಿಂಗ್ಸ್ ಅಳವಡಿಕೆ ಮಾಡಲಾಗಿದೆ.

ಮಂಡ್ಯದ ಶಕ್ತಿ ದೇವತೆ ಕಾಳಿಕಾಂಬ ದೇವಾಲಯದ ಆವರಣದಲ್ಲಿ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಸುಮಾರು 6 ಕಿಮೀ ಸಾಗಲಿರುವ ಶೋಭಯಾತ್ರೆ, ಆ ನಂತರ ಮಂಡ್ಯ ವಿವಿ ಆವರಣದಲ್ಲಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ದವಾಗಿದೆ.
ನಗರದ ಪೇಟೆ ಬೀದಿ, ಹೊಳಲು ಸರ್ಕಲ್, ಸಂಜಯ ವೃತ್ತ, ಹಳೇ ಮೈಸೂರು-ಬೆಂಗಳೂರು ರಸ್ತೆ ಮೂಲಕ ಮಹಾವೀರ ಸರ್ಕಲ್ ತಲುಪಲಿರುವ ಯಾತ್ರೆ,ಬಳಿಕ ವಿವಿ ರಸ್ತೆ ಮೂಲಕ ಹೊಸಹಳ್ಳಿ ಸರ್ಕಲ್, ನೂರಡಿ ರಸ್ತೆ, ವಾಟರ್ ಟ್ಯಾಂಗ್ ಸರ್ಕಲ್ ನಿಂದ ವಿನೋಭ ರಸ್ತೆಗೆ ಆಗಮಿಸಲಿದೆ.

ಆ ಬಳಿಕ ಮತ್ತೆ ಹಳೇ ಮೈಸೂರು-ಬೆಂಗಳೂರು ರಸ್ತೆಗೆ ತಲುಪಿ ಮಂಡ್ಯ ವಿವಿ ಆವರಣದಲ್ಲಿ ಮೆರವಣಿಗೆ ಅಂತ್ಯವಾಗಲಿದೆ.ಈ ಮೆರವಣಿಗೆ ಮುಗಿಯುತ್ತಿದ್ದಂತೆ ಬಹಿರಂಗ ಸಮಾವೇಶ ಆರಂಭವಾಗಲಿದೆ.