ಗೋವಾ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಎಂಟು ತಿಂಗಳು ಮಾತ್ರ ಬಾಕಿ ಇದೆ. ಈ ಚುನಾವಣೆ ತಯಾರಿ ಹಿನ್ನೆಲೆಯಲ್ಲಿಯೇ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಗೋವಾಗೆ ಭೇಟಿ ನೀಡಿದ್ದಾರೆ. ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿರುವ ಜೆ.ಪಿ ನಡ್ಡಾ ಅವರು, ರಾಜ್ಯ ಗೋವಾ ಬಿಜೆಪಿ ನಾಯಕರ ಜತೆಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇವರು ನಡೆಸಲಿರುವ ಸಾಲು ಸಾಲು ಸಭೆಗಳಲ್ಲಿ ಸಂಸದರು, ಶಾಸಕರು, ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿಯೇ ಇಂದು ಮತ್ತು ನಾಳೆ ಮಹತ್ವ ಸಭೆಗಳು ನಡೆಯಲಿವೆ. ಮೊದಲು ಶಾಸಕರು ಮತ್ತು ವಿಧಾನಸಭಾ ಪರಿಷತ್ ಸದಸ್ಯರ ಜತೆಗೆ ಸಭೆ ನಡೆಸಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ. ಬಳಿಕ ಹಾಗೆಯೇ ಸಂಸದ ಮತ್ತು ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ವಿಧಾನಸಭಾ ಚುನಾವಣೆ ತಯಾರಿ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ.
ಇನ್ನು ಕೊನೆಯಲ್ಲಿ ಗೋವಾ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಡ್ಡಾಯವಾಗಿ “ಮೇರಾ ಪರಿವಾರ್, ಮೇರಾ ಬಿಜೆಪಿ” (ನನ್ನ ಮನೆ, ನನ್ನ ಬಿಜೆಪಿ) ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜೆಪಿ ನಡ್ಡಾ ಸೂಚನೆ ನೀಡಲಿದ್ದಾರೆ. ಈ ಕಾರ್ಯಕ್ರಮದ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಧ್ವಜ ಹಾರಿಸುವ ಯೋಜನೆ ಇದಾಗಿದೆ ಎನ್ನಲಾಗಿದೆ. ಇದೇ ವೇಳೆ ಇಲ್ಲಿಯವರೆಗೂ ಗೋವಾದಲ್ಲಿ ಬಿಜೆಪಿ ಆಯೋಜಿಸಿದ್ದ ಎಲ್ಲಾ ಕಾರ್ಯಕ್ರಮಗಳ ಕುರಿತು ರಿಪೋರ್ಟ್ ಪಡೆಯಲಿದ್ದಾರೆ.
ಕಾಂಗ್ರೆಸ್ ಒಂದು ವೇಳೆ ಅಧಿಕಾರಕ್ಕೆ ಬಂದರೇ ಎಂತಹ ಸರ್ಕಾರ ರಚಿಸಬಹುದು ಎಂಬುದನ್ನು ಜನರ ಮುಂದಿಡಬೇಕು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಹುಲ್ ಗಾಂಧಿಯವರನ್ನು ಹೋಲಿಸಿ. ಇಬ್ಬರಲ್ಲಿ ಯಾರು ದೇಶಕ್ಕೆ ಕೊಡುಗೆ ನೀಡಬಲ್ಲರು ಎಂಬುದನ್ನು ಬಿಡಿಸಿ ಹೇಳಬೇಕು ಎಂದು ನಡ್ಡಾ ತಾಕೀತು ಮಾಡಲಿದ್ದಾರೆ.
ಈ ಬಾರಿಯೂ ಬಿಜೆಪಿಗೆ ಬಹುಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಬೇಕು. ಇದಕ್ಕಾಗಿ ಇಡೀ ದೇಶದಲ್ಲಿ ಬಿಜೆಪಿಪರ ವಾತಾವರಣ ಹೇಗಿದೆ ಎಂಬುದನ್ನು ವಿವರಿಸಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದಲೇ ಕಾರ್ಯಕರ್ತರು ಕೆಲಸ ಶುರು ಮಾಡಬೇಕು, ಸಾಧ್ಯವಾದರೆ ನಿಮ್ಮ ಸಂಪೂರ್ಣ ಸಮಯ ಚುನಾವಣೆಗಾಗಿ ಮೀಸಲಿಡಬೇಕು ಎಂದು ಸೂಚಿಸಲಿದ್ದಾರೆ ಎನ್ನುತ್ತಿವೆ ಬಿಜೆಪಿ ಮೂಲಗಳು.
ಕಾಂಗ್ರೆಸ್ ಗೆದ್ದರೆ ಅಭದ್ರ ಸರ್ಕಾರ ಬರಲಿದೆ. ನಿಮಗೆ ಅಭದ್ರ ಸರ್ಕಾರ ಬೇಕೋ, ಸುಭದ್ರ ಸರ್ಕಾರ ಬೇಕೋ ಎಂದು ಜನರಿಗೆ ಮನವರಿಕೆ ಮಾಡಬೇಕು. ಮುಂದಿನ ತಿಂಗಳೊಳಗೆ ಎಲ್ಲಾ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಬೇಕು. ಕನಿಷ್ಟ 20 ಲಕ್ಷ ದ್ವಜ ಹಾರಿಸಬೇಕು ಎಂದು ಆದೇಶಿಸಲಿದ್ದಾರೆ.
ಬಿಜೆಪಿ ಕಾರ್ಯಕರ್ತರು ಕನಿಷ್ಟ 1 ಕೋಟಿ ದೀಪ ಬೆಳೆಗಿಸಬೇಕು. ಪ್ರತಿ ಭೂತ್ನಲ್ಲಿಯೂ ಬಿಜೆಪಿಗೆ ಲೀಡ್ ಸಿಗಬೇಕು. ‘ಮೇರಾ ಭೂತ್ ಸಬ್ ಸೇ ಮಜಬೂತ್’ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಯಶಸ್ವಿ ಮಾಡಬೇಕು. ಇದಕ್ಕೆ ಬೇಕಾದ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಗೋವಾ ರಾಜ್ಯ ಬಿಜೆಪಿ ನಾಯಕರಿಗೆ ಸಲಹೆ ಮತ್ತು ಸೂಚನೆ ನೀಡಲಿದ್ದಾರೆ.