ಲೋಕಸಭಾ ಚುನಾವಣೆ(Lokasabha Election) ಮುಕ್ತಾಯ ಹಂತಕ್ಕೆ ಬಂದು ನಿಂತಿದೆ. ಈ ನಡುವೆ ಸಟ್ಟಾ ಬಜಾರ್ (ಬೆಟ್ಟಿಂಗ್ ಮಾರುಕಟ್ಟೆ) ಲೆಕ್ಕಾಚಾರ ಬಿಜೆಪಿ(BJP) ನಾಯಕರ ನಿದ್ದೆಗೆಡಿಸಿದೆ. ದೇಶದಲ್ಲಿ ಚುನಾವಣಾ ಸಮೀಕ್ಷೆ ಹೊರ ಬೀಳುವುದಕ್ಕೆ ಇನ್ನೇನು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಈ ನಡುವೆ ಹೊರಬಿದ್ದಿರುವ ಸಟ್ಟಾ ಬಜಾರ್ ಮಾಹಿತಿ ಪ್ರಕಾರ, ಕೇಂದ್ರ ಸರ್ಕಾರ ಅತಂತ್ರ ಎನ್ನುವ ಲೆಕ್ಕಾಚಾರ ಹೊರಬಿದ್ದಿದೆ. ಬಿಜೆಪಿ ನೇತೃತ್ವದ ಎನ್ಡಿಎ(NDA) ಮೈತ್ರಿಕೂಟ ಹಾಗು ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಯಾವುದೇ ಒಕ್ಕೂಟಕ್ಕೂ ಬೇಕಿರುವ ಬಹುಮತ ಬರಲ್ಲ ಎನ್ನುವ ಮಾಹಿತಿ ಕಮಲ ಪಾಳಯದ ಕಾರ್ಯಕರ್ತರನ್ನು ಚಕಿತರನ್ನಾಗಿಯೂ ಮಾಡಿದೆ.
![](https://pratidhvani.com/wp-content/uploads/2024/05/InShot_20240530_081359775-1024x1024.jpg)
ಚಾರ್ ಸೋ ಪಾರ್ ಅಂದ್ರೆ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎನ್ನುವುದು ನರೇಂದ್ರ ಮೋದಿ ಅವರ ಲೆಕ್ಕಾಚಾರ ಆಗಿತ್ತು. ಕಳೆದ ಬಾರಿ 303 ಸ್ಥಾನಗಳನ್ನು ಏಕಾಂಗಿಯಾಗಿ ಗೆಲುವು ಕಂಡಿದ್ದ ಬಿಜೆಪಿ ಈ ಬಾರಿ ಏಕಾಂಗಿಯಾಗಿ 370 ಸ್ಥಾನ ಗೆಲ್ಲಬೇಕು. ಒಟ್ಟಾರೆ ಎನ್ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ನರೇಂದ್ರ ಮೋದಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಚುನಾವಣೆ ಪೂರ್ವದಲ್ಲಿ 305 ಸ್ಥಾನ ಗೆಲ್ಲುತ್ತದೆ ಎಂದಿದ್ದ ಸಟ್ಟಾ ಬಜಾರ್ ಇದೀಗ 6ನೇ ಹಂತದ ಚುನಾವಣೆ(Election) ಮುಕ್ತಾಯದ ಬಳಿಕ 253 ಸ್ಥಾನಗಳಿಗೆ ಬಂದು ನಿಲ್ಲುವ ಅತಂತ್ರ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎನ್ನುತ್ತಿದೆ ಬೆಟ್ಟಿಂಗ್ ಮಾರ್ಕೆಟ್.
![](https://pratidhvani.com/wp-content/uploads/2024/05/IMG-20240523-WA0007-1.jpg)
ದೇಶದಲ್ಲಿ BJP 209 ಸ್ಥಾನಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್ ಪಕ್ಷ 117 ಸ್ಥಾನಗಳಲ್ಲಿ ಗೆಲುವು ಕಾಣುವ ಮೂಲಕ ಅಚ್ಚರಿಯ ಫಲಿತಾಂಶ ಪಡೆಯಲಿದೆ ಎನ್ನುತ್ತಿದೆ. NDA ಮೈತ್ರಿಕೂಟ ಒಟ್ಟಾರೆಯಾಗಿ 253 ಸ್ಥಾನ ಗೆಲ್ಲಲಿದೆ. ಇನ್ನು INDIA ಒಕ್ಕೂಟ 246 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡೂ ಮೈತ್ರಿಕೂಟಗಳು ಅಧಿಕಾರಕ್ಕೆ(Officers) ಬೇಕಾದ ಗೆರೆಯನ್ನು ದಾಟುವುದು ಸಾಧ್ಯವಿಲ್ಲ ಎನ್ನುತ್ತಿದೆ ಸಟ್ಟಾ ಬಜಾರ್. ದೇಶದಲ್ಲಿ 543 ಲೋಕಸಭಾ ಸ್ಥಾನಗಳಿದ್ದು, 272 ಸ್ಥಾನಗಳನ್ನು ಗೆಲ್ಲುವ ಪಕ್ಷ ಅಧಿಕಾರಕ್ಕೆ ಏರಲಿದೆ. ಆದರೆ ಈಗಾಗಲೇ ನಡೆದಿರುವ ಚುನಾವಣಾ ಲೆಕ್ಕಾಚಾರದ ಮೇಲೆ ಸಟ್ಟಾ ಬಜಾರ್ ಹೇಳುತ್ತಿರುವ ಅಂಕಿ ಅಂಶ ಯಾವುದೇ ಪಕ್ಷಕ್ಕೆ ಬಹುಮತ ಸಿಗಲ್ಲ.
![](https://pratidhvani.com/wp-content/uploads/2024/05/IMG-20240530-WA0001-1024x800.jpg)
ಸಟ್ಟಾ ಬಜಾರ್ ಮಾಹಿತಿ ನಂಬಿಕೆಗೆ ಅರ್ಹವೇ..? ಅನ್ನೋ ಪ್ರಶ್ನೆಯನ್ನು ಸಾಮಾನ್ಯ ಜನರೂ ಕೂಡ ಕೇಳುವ ಸರ್ವೇ ಸಾಮಾನ್ಯ ಪ್ರಶ್ನೆ. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆ(Vidhanasabha Election) ವೇಳೆಯಲ್ಲೂ ಇದೇ ಸಟ್ಟಾ ಬಜಾರ್ ಅಂಕಿ ಅಂಶಗಳನ್ನು ನೀಡಿತ್ತು. ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎನ್ನಲಾಗ್ತಿತ್ತು. ಆದರೆ ಸಟ್ಟಾ ಬಜಾರ್ನಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ 137 ಸ್ಥಾನ ಗೆಲ್ಲುತ್ತದೆ ಎನ್ನಲಾಗಿತ್ತು. ಕಾಂಗ್ರೆಸ್ ಪಕ್ಷ 135 ಸ್ಥಾನ ಗೆಲುವು ಕಾಣುವ ಮೂಲಕ ಹೆಚ್ಚು ಕಡಿಮೆ ನಿಖರ ಮಾಹಿತಿ ನೀಡಿತ್ತು. ಅದೇ ರೀತಿ ಬಿಜೆಪಿ(BJP) 55 ಸ್ಥಾನ ಗೆಲ್ಲಲಿದೆ ಎನ್ನಲಾಗಿತ್ತು. ಆದರೆ ಬಿಜೆಪಿ 66 ಸ್ಥಾನಗಳನ್ನು ಗೆಲುವು ಕಂಡಿತ್ತು. ಇದೀಗ ಎನ್ಡಿಎ(NDA) ಮೈತ್ರಿಕೂಟ ಅಥವಾ INDIA ಒಕ್ಕೂಟ ಯಾವುದಕ್ಕೂ ಬಹುಮತ(Majority) ಬರುವುದಿಲ್ಲ ಎನ್ನುತ್ತಿದೆ ಸಟ್ಟಾ ಬಜಾರ್.
ಕೃಷ್ಣಮಣಿ