ಬೆಂಗಳೂರು : ಅಬಕಾರಿ ಇಲಾಖೆಯ ಡಿಸಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ವಿಪಕ್ಷ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ.
ರಾಜ್ಯ ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ನೂತನ ಲೈಸೆನ್ಸ್‌ಗಳಿಗೆ ಹಣ ಪಡೆದುಕೊಂಡೇ ಲೈಸೆನ್ಸ್ ನೀಡುತ್ತಾರೆ. ಲೈಸೆನ್ಸ್ ರಿನಿವಲ್‌ಗಳಿಗೆ ಬೇರೆ ಕೊಡಬೇಕು. ಸಿಎಂ ಸಿದ್ದರಾಮಯ್ಯ ತಮ್ಮಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ತೋರಿಸಿ ಅಂತಾರೆ. ಆದ್ರೆ ಸಿಎಂ ಕಪ್ಪು ಕಾಗೆಯೇ ಆಗಿಹೋಗಿದ್ದಾರೆ, ಕಪ್ಪು ಚುಕ್ಕೆ ಹೇಗೆ ತೋರಿಸಲು ಆಗುತ್ತದೆ. ಲೂಟಿ, ಭ್ರಷ್ಟಾಚಾರ ಪ್ರಕರಣಗಳು ದಿನಕ್ಕೊಂದು ಹೊರಗೆ ಬರುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಲೋಕಸಭಾ ಎಲೆಕ್ಷನ್ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ
ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಒಂದಕ್ಕೇ 1,714 ಕೋಟಿ ರೂ. ಟೆಂಡರ್ ನೀಡಿದ್ದಾರೆ. 15 ವರ್ಷದ ಟೆಂಡರ್ ಇದಾಗಿದ್ದು ಇವರೆಷ್ಟು ವರ್ಷ ಅಧಿಕಾರದಲ್ಲಿ ಇರುತ್ತಾರೆ? ಒಂದೇ ಕಂಪನಿಗೆ ಟೆಂಡರ್ ಕೊಡುವ ಬದಲು ನಾಲ್ಕೈದು ಕಂಪೆನಿಗಳಿಗೆ ನೀಡಬಹುದಿತ್ತು. ಕಸ ಹೊಡೆಯುವ ಯಂತ್ರಗಳಿಗೂ ಏಳು ವರ್ಷಕ್ಕೆ 614 ಕೋಟಿ ರೂ. ಟೆಂಡರ್ ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಅಬಕಾರಿ ಸಚಿವರನ್ನು ಸಿಎಂ ವಜಾ ಮಾಡಬೇಕು. ಇಲ್ಲದಿದ್ದರೆ ಇದು ಸಿಎಂ ಅವರೇ ಹೇಳಿ ಮಾಡಿಸಿದ ಭ್ರಷ್ಟಾಚಾರ. ಸಿಎಂ ತಿಮ್ಮಾಪುರರನ್ನು ವಜಾ ಮಾಡದಿದ್ದರೆ ಇದರಲ್ಲಿ ಸಿಎಂ ಪಾತ್ರವೂ ಇದೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಇದರ ವಿರುದ್ಧ ನಾವು ಕಾನೂನು ಹೋರಾಟವನ್ನೂ ಮಾಡುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.













