ಅಬಿಜೆಪಿಗೆ ಬರುವ ಮುನ್ನ ನನಗೆ ಹಣದ ಆಫರ್ ಕೊಟ್ಟಿದ್ರು ಎಂದು ಹೇಳಿದ್ದ ಶ್ರೀಮಂತ್ ಪಾಟೀಲ್ ಇಂದು ಯು ಟರ್ನ್ ಹಾಕಿದ್ದಾರೆ. ಬಿಜೆಪಿಯಿಂದ ಆಮಿಷ ಬಗ್ಗೆ ಶ್ರೀಮಂತ ಪಾಟೀಲ್ ಯುಟರ್ನ್ ಹೊಡೆದಿದ್ದಾರೆ. ಬಿಜೆಪಿಯವರು ಯಾವುದೇ ಹಣದ ಆಫರ್ ಕೊಟ್ಟಿರಲಿಲ್ಲ. ಆಪರೇಷನ್ ಕಮಲದ ವೇಳೆ ಯಾರೂ ಆಮಿಷ ನೀಡಿರಲಿಲ್ಲ. ನಾನೇ ಬಿಜೆಪಿಯ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದೆ. ಏನು ಅಪೇಕ್ಷೆ ಇಟ್ಟುಕೊಂಡು ಬಂದಿದ್ದೀರಿ ಅಂತಾ ಕೇಳಿದ್ರು. ನನ್ನದು ಯಾವುದೇ ಅಪೇಕ್ಷೆ ಇಲ್ಲವೆಂದು ನಾನು ಹೇಳಿದ್ದೆ. ಒಳ್ಳೆಯ ಸ್ಥಾನಮಾನ ನೀಡುವಂತೆ ಮಾತ್ರ ನಾನು ಕೇಳಿದ್ದೆ. ಮೋದಿರವರ ಕೆಲಸ, ಬಿಜೆಪಿ ವಿಚಾರಕ್ಕೆ ಬೆಂಬಲ ಎಂದಿದ್ದೆ ಎಂದು ತಿಳಿಸಿದ್ದಾರೆ.
ಕಾಗ್ವಾಡ ತಲೂಕಿನ ಐನಾಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶ್ರೀಮಂತ ಪಾಟೀಲ್ ಶಂಕುಸ್ಥಾಪನೆ ನಡೆಸಿಮಾಧ್ಯಮದವರು ಸಚಿವ ಸ್ಥಾನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಶ್ರೀಮಂತ ಪಾಟೀಲ್, “ನನಗೆ ನನ್ನ ಕ್ಷೇತ್ರದ ಅಭಿವೃದ್ಧಿಯಾಗಬೇಕು ಆಪರೇಷನ್ ಕಮಲದ ವೇಳೆ ನನಗೆ ದೊಡ್ಡ ಮೊತ್ತದ ಹಣದ ಆಮಿಷ ಬಂದಿತ್ತು. ಆದರೆ ಅದನ್ನು ನಿರಾಕರಿಸಿದ ನಾನು ನನ್ನ ಕ್ಷೇತ್ರ, ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರದಲ್ಲಿ ದೊಡ್ಡ ಹುದ್ದೆಯನ್ನು ಕೇಳಿದ್ದೆ. ಆದರೆ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ದೊರೆತಿಲ್ಲ. ಬಿಜೆಪಿ ನಾಯಕರು ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ, ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ಹೇಳಿದ್ದಾರೆ.
ಬೆಳಿಗ್ಗೆ ಹಣದ ಆಮಿಷ ಇತ್ತು ಅಂದು ಸಂಜೆಯೊತ್ತಿಗೆ ತಮ್ಮ ಮಾತನ್ನೆ ಬದಲಿಸಿಬಿಟಿದ್ದಾರೆ. ನಾನೇ ಬಿಜೆಪಿಯ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದೆ. ನನ್ನದು ಯಾವುದೇ ಅಪೇಕ್ಷೆ ಇಲ್ಲವೆಂದು ನಾನು ಹೇಳಿದ್ದೆ. ಒಳ್ಳೆಯ ಸ್ಥಾನಮಾನ ನೀಡುವಂತೆ ಮಾತ್ರ ನಾನು ಕೇಳಿದ್ದೆ. ಮೋದಿರವರ ಕೆಲಸ, ಬಿಜೆಪಿ ವಿಚಾರಕ್ಕೆ ಬೆಂಬಲ ಎಂದಿದ್ದೆ ಎಂದು ತಿಳಿಸಿದ್ದಾರೆ.
ಭಾನುವಾರ ಸಂಜೆ ಅವರ ಮತ್ತೆ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ಹಣದ ಆಮಿಷದ ಬಗ್ಗೆ ಸ್ಪಷ್ಟೀಕರಣ ನೀಡುವ ಜೊತೆಗೆ, ರಾಜ್ಯದಲ್ಲಿ 40-50 ಲಕ್ಷ ಮರಾಠ ಸಮಾಜದ ಜನರಿದ್ದಾರೆ. ಶೈಕ್ಷಣಿಕ, ಸಾಮಾಜಿಕವಾಗಿ ನಾವು ಬಹಳಷ್ಟು ಹಿಂದೆ ಇದ್ದೇವೆ. ಹಿಂದಿನಿಂದ ಮರಾಠಾ ಸಮಾಜದ ಮೇಲೆ ಅನ್ಯಾಯವಾಗಿದೆ. ಸರ್ಕಾರದ ಮೇಲೆ ಒತ್ತಡ ತರದಿದ್ದರೆ ನಮ್ಮ ಕೆಲಸ ಆಗಲ್ಲ. ಸರ್ಕಾರದ ಬಳಿ ಬೇಡಿಕೊಳ್ಳುತ್ತಾ ಕುಳಿತರೆ ಏನೂ ಸಿಗುವುದಿಲ್ಲ. ಮರಾಠಾ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತೇವೆ ಎಂದು ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿಯಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದಾರೆ.
ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರವಾಗಿ ಶ್ರೀಮಂತ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಮರಾಠ ಸಮುದಾಯಕ್ಕೆ ಮೇಯರ್ ಸ್ಥಾನ ನೀಡುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮರಾಠಾ ಸಮಾಜ ದೊಡ್ಡ ಸಂಖ್ಯೆಯಲ್ಲಿ ಇದೆ. ಹೀಗಾಗಿ ಮರಾಠಾ ಸಮಾಜಕ್ಕೆ ಮೇಯರ್ ಸ್ಥಾನ ನೀಡಬೇಕು ಎಂದು ಸರ್ಕಾರಕ್ಕೆ ಮಾಜಿ ಸಚಿವ ಶ್ರೀಮಂತ ಪಾಟೀಲ್ ಒತ್ತಾಯ ಮಾಡಿದ್ದಾರೆ.