ಉತ್ತರಪ್ರದೇಶದಲ್ಲಿ ಚುನಾವಣೆ ನಿಮಿತ್ತ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಅಭ್ಯರ್ಥಿಯನ್ನು ಅಲ್ಲಿನ ಜನ ವಾಪಸ್ ಓಡಿಸಿದ್ದಾರೆ. ಹೌದು ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಮನ್ವರಪುರ್ ಗ್ರಾಮಕ್ಕೆ ಪ್ರಚಾರಕ್ಕೆ ತೆರಳಿದ ವೇಳೆ ಗ್ರಾಮಸ್ಥರು ಶಾಸಕನ ವಿರುದ್ದ ತೀವ್ರ ಅಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.
ಸೈನಿ ಗ್ರಾಮದ ಮುಂಭಾಗ ಆಗಮಿಸುತ್ತಿದ್ದಂತೆಯೇ ಘೋಷಣೆಗಳನ್ನು ಕೂಗಿದ ಗ್ರಾಮಸ್ಥರು ಊರ ಒಳಗಡೆ ಯಾವುದೇ ಕಾರಣಕ್ಕೂ ಬರಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಂತೆಯೇ ಬಿಜೆಪಿ ಶಾಸಕ ಹಿಂತಿರುಗಿದ್ದಾರೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಶಾಸಕ ಕೋಪಗೊಂಡು ತನ್ನ ಕಾರಿನ ಬಳಿ ಹೋಗುತ್ತಿರುವುದನ್ನು ಕಾಣಬಹುದು. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸೈನಿ ಪ್ರತಭಟನೆ ನಡೆಸುತ್ತಿದ್ದವರೆಲ್ಲರೂ ಮಧ್ಯದ ಅಮಲಿನಲ್ಲಿದ್ದರು ಹಾಗಾಗಿ ನಾನು ಜಾಸ್ತಿ ಮಾತನಾಡದೆ ವಾಪಸ್ ಹೊರಟು ಬಿಟ್ಟೆ ಎಂದು ಹೇಳಿದ್ದಾರೆ.





