ಬೆಂಗಳೂರು :ಮಾ.೩೧: ವರುಣ ಕ್ಷೇತ್ರದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಬಿಜೆಪಿಯಲ್ಲಿ ಮಾಸ್ಟರ್ ಪ್ಲ್ಯಾನ್ ನಡೆಸಿದೆ. ಸಿದ್ದರಾಮಯ್ಯ ಕಟ್ಟಿ ಹಾಕಲು ವಿಜಯೇಂದ್ರ ಎಂಬ ಬ್ರಹಾಸ್ತ್ರ ಪ್ರಯೋಗ ಮಾಡಲು BJP ಮುಂದಾಗಿದೆ ಅನ್ನೋ ಮಾತುಗಳ ಜೋರಾಗಿಯೇ ಕೇಳಿಬರ್ತಿದೆ. ನಾನು ಚುನಾವಣಾ ಪ್ರಚಾರಕ್ಕೆ ಬರಲ್ಲ, ಕೇವಲ ಒಂದು ದಿನ ನಾಮಪತ್ರ ಸಲ್ಲಿಸಲು ಬರುತ್ತೇನೆ ಎಂದಿರುವ ಮಾತೇ ಸಿದ್ದರಾಮಯ್ಯಗೆ ಮುಳುವಾಗುವ ಸಾಧ್ಯತೆಯಿದೆ. ನಾನು ರಾಜ್ಯ ಸುತ್ತಿ ಕಾಂಗ್ರೆಸ್ನ ಅಧಿಕಾರಕ್ಕೆ ತರಬೇಕಿದೆ ಎಂಬ ಸಿದ್ದರಾಮಯ್ಯ ಮಾತಿನಿಂದ BJP ನಾಯಕರು ಅಲರ್ಟ್ ಆಗಿದ್ದಾರೆ. ಸಿದ್ದರಾಮಯ್ಯರನ್ನ ವರುಣ ಕ್ಷೇತ್ರಕ್ಕೆ ಕಟ್ಟಿ ಹಾಕಿದರೆ, ಇಡೀ ರಾಜ್ಯ ಗೆಲ್ಲಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ಇನ್ನ ಸಿದ್ದರಾಮಯ್ಯ ರೀತಿ 2 ಕಡೆ ಸ್ಪರ್ಧಿಸಲು ಬಿ.ವೈ.ವಿಜಯೇಂದ್ರ ಕೂಡ ಚಿಂತನೆ ನಡೆಸಿದ್ದು, ಶಿಕಾರಿಪುರ-ವರುಣ ಕ್ಷೇತ್ರಗಳ ಕಣ್ಣಿಟ್ಟಿದ್ದಾರೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ .ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸೋತರೆ, ಮುಂದೆ ಮೈಸೂರು ಭಾಗದ ನಾಯಕತ್ವವನ್ನ ಹೊತ್ತು ಪಕ್ಷ ಸಂಘಟನೆಗೆ ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಗೆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗೆಲುವು ಸಾಧಿಸಿದ ಕೀರ್ತಿ ಸಿಗಲಿದೆ. ಈ ಹಿನ್ನೆಲೆ ವಿಜಯೇಂದ್ರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಬಿಎಸ್ ವೈ ಸಭೆ ??
ವರುಣದಿಂದ ವಿಜಯೇಂದ್ರ ಸ್ಪರ್ಧೆಗೆ ಒತ್ತಡ ಹೆಚ್ಚಾದ ಹಿನ್ನೆಲೆ ಮೈಸೂರಿಗೆ ಶುಕ್ರವಾರ ಯಡಿಯೂರಪ್ಪ ಹಾಗೂ ವಿಜಯೇಂದ್ರ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಆಪ್ತರ ಹುಟ್ಟುಹಬ್ಬ ನಿಮಿತ್ತ ಆಗಮಿಸ್ತಿರುವ BSY, ವಿಜಯೇಂದ್ರ ಇದೇ ವೇಳೆ ಕ್ಷೇತ್ರದ ರಾಜಕೀಯ ಬಗ್ಗೆ ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಲುವ ಸಾಧ್ಯತೆ ಇದೆ. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಕ್ಷೇತದ ಪ್ರಮುಖರ ಭೇಟಿಗೆ ವೇದಿಕೆ ರೆಡಿಯಾಗಿದೆ. ವರುಣ ಕ್ಷೇತ್ರದ ಸ್ಪರ್ಧೆ ವಿಚಾರದ ಮಾಹಿತಿ ಪಡೆಯುವ ಸಾಧ್ಯತೆ ಇದೆ. ವರುಣದಲ್ಲಿ ಬಿಜೆಪಿ ಕಾರ್ಯಕರ್ತರು ಅಲರ್ಟ್ ಆಗಿದ್ದಾರೆ.
ರಾಜಹುಲಿ ನಿರ್ಧಾರ ಫೈನಲ್..
ಸದ್ಯ ವಿಜಯೇಂದ್ರ ಸ್ಪರ್ಧೆ ಮಾಡ್ಬೇಕೋ ಬೇಡವೋ ಅನ್ನೋ ವಿಚಾರ ಯಡಿಯೂರಪ್ಪ ಅಂಗಳದಲ್ಲಿ ಇದೆ. ಹೈ ಕಮಾಂಡ್ ಜತೆ ಸುದೀರ್ಘ ಚರ್ಚೆ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ. ವರುಣ ಕ್ಷೇತ್ರದಲ್ಲಿ ವಿಜಯೇಂದ್ರ ಗೆ ಯುವಕರ ಫ್ಯಾನ್ ಫಾಲೋಯಿಂಗ್ ಇದೆ. ಸಿದ್ದು ಗೆ ಪ್ರಬಲ ಸ್ಪರ್ಧೆವೊಡ್ಡುವ ಸಾಧ್ಯತೆ ಇದೆ.