ಸುಮಾರು 300 ಕಾಲೇಜುಗಳನ್ನು ನಿಯಂತ್ರಿಸುವ ಮಧ್ಯಪ್ರದೇಶದ ಉನ್ನತ ಸರ್ಕಾರಿ ವೈದ್ಯಕೀಯ ವಿಶ್ವವಿದ್ಯಾಲಯ ಪರೀಕ್ಷಾ ಫಲಿತಾಂಶಗಳನ್ನು ತಿದ್ದಲಾಗಿದ್ದು ಇದು 2013ರ ವ್ಯಾಪಂ ಹಗರಣದ ರೀತಿಯ ಅತಿದೊಡ್ಡ ಹಗರಣವಾಗಿರಬಹುದೆಂದು ಸರ್ಕಾರಕ್ಕೆ ತನೆಖಾ ಸಂಸ್ಥೆ ಸಲ್ಲಿಸಿರುವ ವರದಿಯಲ್ಲಿ ಉಲೇಖಿಸಲಾಗಿದೆ.
ಮಧ್ಯಪ್ರದೇಶ ಆಯುರ್ವಿಜ್ಞಾನ ವಿಶ್ವವಿದ್ಯಾಲಯವು ರಾಜ್ಯದ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಎಂದೂ ಕರೆಯಲ್ಪಡುತ್ತದೆ, ಇದು ರಾಜ್ಯದಲ್ಲಿ ವೈದ್ಯಕೀಯ, ದಂತ ಅಧ್ಯಯನ, ಶುಶ್ರೂಷೆ, ಪ್ಯಾರಾಮೆಡಿಸಿನ್, ಆಯುರ್ವೇದ, ಹೋಮಿಯೋಪತಿ, ಯುನಾನಿ ಮತ್ತು ಯೋಗವನ್ನು ಕಲಿಸುವ ಎಲ್ಲಾ ಕಾಲೇಜುಗಳ ಆಡಳಿತ ಮಂಡಳಿಯಾಗಿದ್ದು ಸರಿಸುಮಾರು 300 ಕಾಲೇಜುಗಳ ಅಡಿಯಲ್ಲಿ, ವಿಶ್ವವಿದ್ಯಾನಿಲಯವು ಪ್ರತಿ ವರ್ಷ ಸುಮಾರು 80,000 ವಿದ್ಯಾರ್ಥಿಗಳನ್ನು ಹೊಂದಿರುತ್ತದೆ.
ಆದರೆ ಕಳೆದ ಕೆಲವು ವರ್ಷಗಳಲ್ಲಿ ಪರೀಕ್ಷೆಗೆ ಹಾಜರಾಗದ ಕೆಲವು ವಿದ್ಯಾರ್ಥಿಗಳು, ಉತ್ತೀರ್ಣ ಎಂದು ಘೋಷಿಸಲಾಗಿದ್ದು, ಈ ಬಗ್ಗೆ ಆರ್.ಟಿ.ಐ. ಕಾರ್ಯಕರ್ತ ಅಖಿಲೇಶ ತ್ರಿಪಾಠಿ ಸಲ್ಲಿಸಿದ ದೂರಿನ ಮೇರೆಗೆ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ ಸಾರಂಗ ಈ ವರ್ಷ ಮೇ ತಿಂಗಳಲ್ಲಿ ತನಿಖೆಗೆ ಆದ್ದೇಶಿಸಿದ್ದರು.
ಮೂವರು ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಮಾಹಿತಿ ತಂತ್ರಜ್ಞಾನ ತಜ್ಞರ ತಂಡವು ಆರೋಪಗಳನ್ನು ಪರಿಶೀಲಿಸಿತು ಮತ್ತು ಕಳೆದ ತಿಂಗಳು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಅಂಕಪಟ್ಟಿಗಳನ್ನು ತಯಾರಿಸುವ ಹೊಣೆಗಾರಿಕೆಯನ್ನು ಖಾಸಗಿ ಕಂಪನಿಗೆ ವಹಿಸಲಾಗಿತ್ತು ವಿಶ್ವವಿದ್ಯಾಲಯದ ಗೌಪ್ಯ ಶಾಖೆಗೆ ವರ್ಗಾಯಿಸುವ ಸಮಯದಲ್ಲಿ ತಿದ್ದುಪಡಿ ಮಾಡಿರುವ ಬಗ್ಗೆ ಸಮಿತಿ ವರದಿಯನ್ನು ಸಲ್ಲಿಸಿದೆ.
ತನಿಖೆಯ ಪ್ರಕಾರ, ಪ್ರಶ್ನೆಪತ್ರಿಕೆಗಳನ್ನು ತಯಾರಿಸುವುದರಿಂದ ಹಿಡಿದು, ಉತ್ತರ ಪತ್ರಿಕೆಗಳ ಪರಿಶೀಲನೆ , ಮರು ಮೌಲ್ಯಮಾಪನ ಮತ್ತು ಅಂಕಪಟ್ಟಿಗಳನ್ನು ನೀಡುವವರೆಗೆ ಗಂಭೀರ ಅಕ್ರಮಗಳು ನಡೆದಿವೆ. ಕಂಪನಿಯ ಸರ್ವರ್ ವಿಶ್ವವಿದ್ಯಾನಿಲಯದ ಗೌಪ್ಯ ಕೊಠಡಿಯಲ್ಲಿದ್ದರೂ ಅಧಿಕಾರಿಗಳು ಎಷ್ಟೇ ಬೇಡಿಕೆ ಇಟ್ಟರೂ ಡೇಟಾಬೇಸ್ ನೀಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಂಕಪಟ್ಟಿಗಳ ಡೇಟಾವನ್ನು ಕತ್ತರಿಸಿ ಅಂಟಿಸಲಾಗಿದೆ. ಪಿಡಿಎಫ್ ಮತ್ತು ಎಕ್ಸೆಲ್ ಫೈಲ್‌ಗಳಲ್ಲಿ ಇಮೇಲ್ ಮೂಲಕ ಮಾಹಿತಿಯನ್ನು ಕಳಿಹಿಸಲಾಗಿದ್ದು ಇದು ಡೇಟಾ ಬದಲಾವಣೆ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಪರೀಕ್ಷಾ ಅಂಕಗಳಂತಹ ಸೂಕ್ಷ್ಮ ದತ್ತಾಂಶಗಳ ಮಾರ್ಪಾಡುಗಳನ್ನು ತಡೆಯಲು ವಿವಿಧ ಸುರಕ್ಷತಾ ಕ್ರಮಗಳನ್ನು ಸಹ ಉಲ್ಲಂಘಿಸಲಾಗಿದೆ ಎಂದು ವರದಿ ಹೇಳಿದೆ. ವಿಚಾರಣಾ ಸಮಿತಿಯು, ಒಬ್ಬ ಗುಮಾಸ್ತ ಮತ್ತು ಒಬ್ಬಗುತ್ತಿಗೆ ನೌಕರನು ಅಂತಿಮವಾಗಿ ಪಲಿತಾಂಶ ಪ್ರಕಟವಾಗುವ ಮೊದಲು ವಿದ್ಯಾರ್ಥಿಗಳ ಅಂಕಗಳನ್ನು ಬದಲಾಯಿಸಿರುವುದು ಕಂಡು ಬಂದಿದೆ ಇದರಿಂದ ವಿಶ್ವವಿದ್ಯಾಲಯದ ಪರೀಕ್ಷೆಗಳ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ತಲೆದೂರಿವೆ.
ವಿಷಯ ಬೆಳಕಿಗೆ ಬಂದ ನಂತರವೂ, ಫಲಿತಾಂಶ ಮಾಡಿದ ಕಂಪನಿಯ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿರಲಿಲ್ಲ. ಅದರ ಒಪ್ಪಂದವನ್ನು ಮಾತ್ರ ರದ್ದುಗೊಳಿಸಲಾಗಿದೆ. ಕಂಪನಿಯು ವಿಶ್ವವಿದ್ಯಾಲಯಕ್ಕೆ ಯಾವುದೇ ಡೇಟಾವನ್ನು ಸಹ ನೀಡಿಲ್ಲ,ಈ ಬಗ್ಗೆ ವಿಚಾರಿಸಿದ್ದಕ್ಕೆ ಬೆಂಗಳೂರಿನಲ್ಲಿರುವ ಅವರ ಕಚೇರಿಯನ್ನು ಲಾಕ್‌ಡೌನ್‌ನಿಂದ ಮುಚ್ಚಲಾಗಿದೆ ಎಂದು ಹೇಳಿದರು. ನಂತರ ಕಂಪನಿಯು ಒಪ್ಪಂದವನ್ನು ರದ್ದುಗೊಳಿಸಿರುವ ಆದೇಶದ ವಿರುದ್ಧ ಹೈಕೋರ್ಟ್‌ಗೆ ಮೊರೆ ಹೋಗಿದೆ.
ಈ ಬಗ್ಗೆ ಪತ್ರಿಕಿಯಿಸಿದ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಡಾ.ಪ್ರಭಾತ್ ಬುಧೋಲಿಯಾ, ಕಂಪನಿಯು ನ್ಯಾಯಾಲಯದ ಮೊರೆ ಹೋಗಿದೆ. ನಾವು ವಕೀಲರನ್ನು ನೇಮಿಸಿದ್ದೇವೆ. ಗೌರವಾನ್ವಿತ ನ್ಯಾಯಾಲಯವು ನಿರ್ಧರಿಸುತ್ತದೆ ಎಂದು ಅವರು ಹೇಳಿದ್ದಾರೆ.
ವಿಶ್ವವಿದ್ಯಾನಿಲಯದ ಅಡಿಯಲ್ಲಿರುವ ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸುವ ಮತ್ತು ಫಲಿತಾಂಶವನ್ನು ಸಿದ್ಧಪಡಿಸುವ ಕೆಲಸವನ್ನು ಹೊರಗುತ್ತಿಗೆ ಪಡೆದ ಖಾಸಗಿ ಸಂಸ್ಥೆಯಾಗಿರುವ ಮೈಂಡ್ಲೋಜಿಕ್ಸ್ ಇನ್ಫ್ರಾಟೆಕ್ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.
ಪರೀಕ್ಷಾ ಕೆಲಸವನ್ನು ನಿರ್ವಹಿಸುವ ಗುತ್ತಿಗೆಯನ್ನು ಜುಲೈ 2018 ರಲ್ಲಿ ನಮಗೆ ನೀಡಲಾಯಿತು ಮತ್ತು ನಾವು ಈ ಯೋಜನೆಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ ಮತ್ತು ಬಹು ಮೆಚ್ಚುಗೆ ಪ್ರಮಾಣಪತ್ರಗಳನ್ನು ಸಹ ಪಡೆದಿದ್ದೇವೆ, ಎಂದು 22 ನೇ ಫೆಬ್ರವರಿ 2021 ರಂದು ಕಂಪನಿಯು ತನ್ನ ಇಮೇಲ್ ಹೇಳಿಕೆಯಲ್ಲಿ ತಿಳಿಸಿದೆ.

ಆದಾಗ್ಯೂ, ಕಳೆದ ಕೆಲವು ತಿಂಗಳುಗಳಿಂದ, ವಿಶ್ವವಿದ್ಯಾನಿಲಯದ ಅಧಿಕಾರಿಯೊಬ್ಬರು ನಮ್ಮನ್ನು ವಿವಿಧ ಕಾರಣಗಳಿಗಾಗಿ ವಿವಿಧ ರೀತಿಯ ಕಿರುಕುಳಗಳಿಗೆ ಒಳಪಡಿಸಿದರು. ಪರೀಕ್ಷೆಯ ಸಮಯದಲ್ಲಿ ರಾಜಿ ಮಾಡಿಕೊಳ್ಳುವಂತೆ ನಮ್ಮ ಪ್ರಾಜೆಕ್ಟ್ ತಂಡದ ಮೇಲೆ ಅಧಿಕಾರಿಯ ಒತ್ತಡವಿತ್ತು. ಅಧಿಕಾರಿಯು ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡರು ಮತ್ತು ವಿಶ್ವವಿದ್ಯಾನಿಲಯದ ಯಾವುದೇ ನಿಯಮಗಳನ್ನು ಅನುಸರಿಸದೆ ಮತ್ತು ಯಾವುದೇ ಅಧಿಕೃತ ಆದೇಶವಿಲ್ಲದೆ ನಮ್ಮ ಒಪ್ಪಂದವನ್ನು ರದ್ದುಗೊಳಿಸಿ ಕಪ್ಪುಪಟ್ಟಿಗೆ ಸೇರಿಸಲಾಯಿತು ಎಂದಿದೆ.
ಈ ಆದೇಶವನ್ನು ಪ್ರಶ್ನಿಸಿ ನಾವು ಮಧ್ಯಪ್ರದೇಶದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವು, ಕೋರ್ಟ್ ನಮ್ಮ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದನ್ನು ಆದೇಶವನ್ನ ತಡೆಹಿಡಿದು, ಈ ಪ್ರಕರಣವನ್ನು ಮುಂದಿನ ವಿಚಾರಣೆಗೆ ಆಗಸ್ಟ್ 21 ರಂದು ನಿಗದಿ ಮಾಡಿದೆ ಎಂದು ಕೋರ್ಟ್ ಹೇಳಿದೆ.
ಗೌರವಾನ್ವಿತ ಹೈಕೋರ್ಟ್ ನಮ್ಮ ಸಲ್ಲಿಕೆ ಮತ್ತು ನ್ಯಾಯದ ಆಧಾರದ ಮೇಲೆ ಈ ವಿಷಯವನ್ನು ನಿರ್ಧರಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಈ ವಿಷಯವು ಪೂರ್ವಾಗ್ರಹವಾಗಿರುವುದರಿಂದ ನಾವು ಒಬ್ಬ ಅಧಿಕಾರಿಯ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ, ಅವರ ರುಜುವಾತುಗಳು ಕೂಡ ಪ್ರಶ್ನಾರ್ಹವಾಗಿವೆ, ಎಂದು ಕಂಪನಿ ಹೇಳಿದೆ.