ಮುಂದಿನ ತಿಂಗಳು ಏಳು ಹಂತಗಳಲ್ಲಿ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶದಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮದೇ ಆದ ತಂತ್ರ-ಪ್ರತಿತಂತ್ರ ಹೆಣೆಯುತ್ತಿವೆ . ಹೇಗಾದರೂ ಮಾಡಿ ಉತ್ತರಪ್ರದೇಶದ ಅಧಿಕಾರವನ್ನ ಹಿಡಿಯಲೇಬೇಕು ಎಂದು ಹೊರಟಿವೆ. ಆದರೆ, ಈ ಮಧ್ಯೆ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಮೇಲಿಂದ ಮೇಲೆ ದೊಡ್ಡ ಶಾಕ್
ಹೌದು, ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಹಾಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸಚಿವ ಸ್ಥಾನಕ್ಕೆ ಹಾಗೂ ರೋಷನ್ ಲಾಲ್ ವರ್ಮಾ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಮೂಲಗಳು ಹೇಳುವ ಪ್ರಕಾರ, ಈ ಇಬ್ಬರು ನಾಯಕರ ವಲಸೆಯಿಂದ ಮತ್ತಷ್ಟು ನಾಯಕರು ಪಕ್ಷಾಂತರ ಮಾಡಬಹುದು ಎಂದು ಹೇಳಲಾಗುತ್ತಿದೆ.
ತಮ್ಮ ರಾಜೀನಾಮೆ ಪತ್ರದಲ್ಲಿ ʻವಿಭಿನ್ನ ಸಿದ್ಧಾಂತದ ಹೊರತಾಗಿಯೂ ನಾನೂ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಕೆಲಸ ಮಾಡಿದೆ. ಆದರೆ, ಬಿಜೆಪಿಗೆ ದಲಿತರು, ಒಬಿಸಿ, ರೈತರು, ನಿರುದ್ಯೋಗಿ ಮತ್ತು ಸಣ್ಣಪುಟ್ಟ ಉದ್ಯಮಿಗಳನ್ನು ಕಂಡರೆ ತಾತ್ಸಾರ ಮನೋಭಾವ ಮತ್ತು ಇವರುಗಳ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಿದೆ ಹಾಗಾಗಿ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಮೌರ್ಯ ರಾಜೀನಾಮೆ ಪತ್ರ ಟ್ವಿಟರ್ನಲ್ಲಿ ಹರಿದಾಡಲು ಶುರುವಾಗುತ್ತಿದ್ದಂತೆ ಅಖಿಲೇಶ್ ಯಾದವ್ ಮೌರ್ಯ ಜೊತೆಗೆ ಇರುವ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಮೌರ್ಯ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಸ್ವಾಗತಿಸಿದರು.

ಮತ್ತೊಂದೆಡೆ ಮೂರು ಬಾರಿ ಶಾಸಕರಾಗಿ ಚುನಾಯಿತರಾಗಿರುವ ರೋಷನ್ ಲಾಲ್ ವರ್ಮಾ ಸಹ ತಮ್ಮ ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿಗೆ ರಾಜೀನಾಮೆಯನ್ನ ಸಲ್ಲಿಸಿದ್ದಾರೆ.
ಈ ಕುರಿತು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಯುಪಿ ಡಿಸಿಎಂ ಕೇಶವ್ ಪ್ರಸಾದ ಮೌರ್ಯ, ಸ್ವಾಮಿ ಪ್ರಸಾದ ಮೌರ್ಯ ಪಕ್ಷವನ್ನು ಏಕೆ ತ್ಯಜಿಸಿದ್ದರು ಎಂದು ʻನನಗೆ ಗೊತ್ತಿಲ್ಲ. ನಾನು ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ ದಯವಿಟ್ಟು ಈ ವಿಚಾರವಾಗಿ ಕುಳಿತು ಮಾತನಾಡೋಣ. ಆತುರದಲ್ಲಿ ತೆಗೆದುಕೊಂಡ ನಿರ್ಧಾರ ಮುಂದಿನ ದಿನಗಳಲ್ಲಿ ನಿಮ್ಮಗೆ ಮುಳುವಾಗಬಹುದುʼ ಎಂದು ಟ್ವೀಟ್ ಮಾಡಿದ್ದಾರೆ.
ಮೌರ್ಯ ಪೂರ್ವ ಲಖನೌನ ಪದ್ರೌನಾದ ಹಾಲಿ ಶಾಸಕರಾಗಿದ್ದಾರೆ. ಅವರ ಪುತ್ರಿ ಸಂಘಮಿತ್ರ ಸಂಸದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ದೇಶದ ರಾಜಕೀಯ ವಿಚಾರದಲ್ಲಿ ಪ್ರಮುಖ ರಾಜ್ಯವಾದ ಉತ್ತರಪ್ರದೇಶದ ಮೇಲೆ ಎಲ್ಲ ರಾಜಕೀಯ ಪಕ್ಷಗಳು ಕಣ್ಣಿಟ್ಟಿವೆ. ಏಕೆಂದರೆ ರಾಜಕೀಯ ತಜ್ಞರು ಒಂದು ನಾಣುದಿಯನ್ನೆ ಹೇಳುತ್ತಾರೆ ಅದು ಎನೆಂದರೆ, ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರುವ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಯನ್ನ ಹಿಡಿಯುತ್ತಾರೆ ಎಂದು. ಫೆಬ್ರವರಿ 7ರಿಂದ ಮಾರ್ಚ್ 7ರವರೆಗೆ ಒಟ್ಟು 7 ಹಂತಗಳಲ್ಲಿ ಯುಪಿ ಚುನಾವಣೆಯನ್ನು ಎದುರಿಸಲಿದೆ. ಮಾರ್ಚ್ 10ರಂದು ಪಲಿತಾಂಶ ಹೊರಬೀಳಲಿದೆ. ಮೋಡೋಣ ಉತ್ತರಪ್ರದೇಶದ ಯಾರ ಕಡೆ ಹೆಚ್ಚು ಒಲವು ತೋರುತ್ತಾನೆ ಎಂಬುದನ್ನು ಪಲಿತಾಂಶ ಹೊರಬರುವವರೆಗೂ ಕಾದು ನೋಡಬೇಕಿದೆ.