ರಾಜ್ಯ ಬಿಜೆಪಿಯಲ್ಲಿ (BJP) ಇಷ್ಟೂ ದಿನ ತೆರೆ ಮರೆಯಲ್ಲಿ ನಡೆಯುತ್ತಿದ್ದ ಭಿನ್ನಮತೀಯ ಚಟುವಟಿಕೆಗಳು ಈಗ ಬಹಿರಂಗವಾಗಿಯೇ ನಡೆಯುತ್ತಿದೆ. ಬಿಜೆಪಿಯಲ್ಲಿ ಕೋರ್ ಕಮಿಟಿ ಸಭೆ (Core committee meeting) ಬಳಿಕ ಭಿನ್ನಮತ ಮತ್ತಷ್ಟು ಭುಗಿಲೆದಿದೆ. ಮಾಜಿ ಸಿಎಂ ಡಿ.ವಿ.ಸದಾನಂದಗೌಡ (Dv Sadananda gowda) ನಿವಾಸದಲ್ಲಿ ಸಭೆ ಬಳಿಕ ರಮೇಶ್ ಜಾರಕಿಹೊಳಿ (Ramesh jarakiholi) ಮನೆಯಲ್ಲಿ ಬಿಜೆಪಿ ಅತೃಪ್ತ ನಾಯಕರು ಡಿನ್ನರ್ ಮೀಟಿಂಗ್ ಮಾಡಿದ್ದಾರೆ.

ಕೋರ್ ಕಮಿಟಿ ಸಭೆಯ ಬಳಿಕ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ವರದಿ ನೀಡುವಂತೆ ಡಿ.ವಿ.ಸದಾನಂದಗೌಡರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಸೂಚನೆ ನೀಡಿದ್ರು.ಈ ಸೂಚನೆ ಮೇರೆಗೆ ಡಿ.ವಿ.ಸದಾನಂದಗೌಡ ಮನೆಯಲ್ಲಿ ನಾಯಕರು ಸಭೆ ಮಾಡಿದ್ರು.

ಇದೀಗ ಬೆಂಗಳೂರಿನ ಸದಾಶಿವನಗರದಲ್ಲಿರುವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಯತ್ನಾಳ್ ಅಂಡ್ ಟೀಂ ಮತ್ತೆ ಸಭೆ ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ರಮೇಶ್ ಜಾರಕಿಹೊಳಿ, ಯತ್ನಾಳ್ ಸೇರಿ ಹಲವು ನಾಯಕರು ಚರ್ಚೆ ಮಾಡಿದ್ದಾರೆ ಎನ್ನಲಾಗ್ತಿದೆ.