ಬಳ್ಳಾರಿ ರಾಜಕಾರಣದಲ್ಲಿ (Bellary politics) ರೆಡ್ಡಿ ಮತ್ತು ರಾಮುಲು (Janardan reddy) ನಡುವಿನ ಕಾಳಗ ತೀವ್ರಗೊಂಡಿದ್ದು, ಪಕ್ಷದಲ್ಲಿನ ಆಂತರಿಕೆ ಬೆಳವಣಿಗೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಮಾಜಿ ಸಚಿವ ಬಿ.ಶ್ರೀರಾಮುಲು (Sri ramulu) ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.

ಕೋರ್ ಕಮಿಟಿ ಸಭೆಯಲ್ಲಿ (Bjp core committee) ಸಂಡೂರು ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯ ಸೋಲಿನ ವಿಚಾರ ಪ್ರಸ್ತಾಪಿಸಿ ಶ್ರೀರಾಮುಲು ಕಾರ್ಯವೈಖರಿ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಕ್ಲಾಸ್ ತೆಗೆದುಕೊಂಡಿದ್ರು.

ಇದ್ರಿಂದ ಬೇಸರಗೊಂಡಿದ್ದ ಶ್ರೀರಾಮುಲು ಸಭೆಯಲ್ಲೇ ಅಸಮಾಧಾನ ಹೊರ ಹಾಕಿದ್ರು.ಈ ಸಭೆಯ ಬಳಿಕ ತಮ್ಮ ಆಪ್ತ ಜನಾರ್ದನ ರೆಡ್ಡಿ ನಡೆಯ ಬಗ್ಗೆ ರಾಮುಲು ಅಸಮಾಧಾನ ಹೊರ ಹಾಕಿದ್ರು. ಸದ್ಯ ರಾಮುಲು, ರೆಡ್ಡಿ ಮಧ್ಯೆ ಅಸಮಾಧಾನ ಸ್ಫೋಟಗೊಂಡಿದ್ದು, ಇದನ್ನು ಶಮನಗೊಳಿಸಲಿ ಹೈಕಮಾಂಡ್ ಮುಂದಾದಂತೆ ಕಾಣಿದೆ.
ಈ ಬಗ್ಗೆ ನಿನ್ನೆ ಸುದ್ದಿಗೋಷ್ಟಿ ವೇಳೆ ರಾಮುಲುಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕರೆ ಮಾಡಿ, ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದರು. ಇಂದು ಬೆಂಗಳೂರಿಗೆ ಆಗಮಿಸಲಿರುವ ರಾಮುಲು ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿಸಿದೆ.