ಬೆಳಗಾವಿಯ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬೆಳಗಾವಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಕಾಂಗ್ರಸ್ ನಾಯಕಿ, ಶಾಸಕಿ ಲಕ್ಷೀ ಹೆಬ್ಬಾಳ್ಕರ್ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂಭಾಗ ಪ್ರತಿಕೃತಿ ದಹಿಸಿ ಪ್ರತಿಭಟಿಸಿ ಆಕ್ರೋಶವನ್ನು ಹೊರಹಾಕಿದ್ದಾರೆ.
ಬಿಜೆಪಿ ನಾಯಕರಿಗೆ ಪ್ರತಿನಿತ್ಯ ಈಗ ರಾತ್ರಿ ಸಂಸ್ಕೃತಿ ನೆನಪಾಗುತ್ತಿದೆ ಏಕೆಂದರೆ ಬಿಜೆಪಿಯಲ್ಲಿ ಯಾವ ರೀತಿ ಕಾಮುಕರು ಇದ್ದಾರೆ ಎಂಬುದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಈಗ ಬಹಿರಂಗವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ವೇಳೆ ʻಪ್ರತಿಧ್ವನಿʼಯೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಸಂಜಯ್ ಪಾಟೀಲ್ ನೀಡಿರುವ ರಾತ್ರಿ ಸಂಸ್ಕೃತಿಯ ಹೇಳಿಕೆಯನ್ನ ಖಂಡಿಸಿದರು ಆ ಸಂಸ್ಕೃತಿ ಸಂಜಯ್ ಪಾಟೀಲ್ ಗೆ ಹಾಗೂ ಆ ಪಕ್ಷದ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್‌ಗೆ ಬಹಳ ಹತ್ತಿರವಾಗಿದೆ ಆದ್ದರಿಂದ ರಾತ್ರಿ ಸಂಸ್ಕೃತಿ ಬಗ್ಗೆ ಮಾತನಾಡಿದ್ದರೆ ಇಂತಹ ರಾಜಕಾರಣಿಗಳಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ ಬಿಜೆಪಿ ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ನಿರ್ನಾಮ ಆಗುವುದು ಖಚಿತ ಎಂದು ಹೇಳಿದ್ದಾರೆ.
ಈ ವೇಳೆ ʻಪ್ರತಿಧ್ವನಿʼಯೊಂದಿಗೆ ಮಾತನಾಡಿದ ಮಾಜಿ ಮಹಾಪೌರರಾದ ಪದ್ಮಾವತಿಯವರು ಸಂಜಯ್ ಪಾಟೀಲ್ ನೀಡಿರುವ ಹೇಳಿಕ ದುರದೃಷ್ಟಕರ ಅವರು ಬಳಸಿರುವಂತ ಪದಗಳು ಬಿಜೆಪಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಅವರು ಹೇಳಿರುವಂತ ಅಷ್ಟು ಪದಗಳು ಬಿಜೆಪಿಯ ನೀಚ ಸಂಸ್ಕೃತಿಯನ್ನು ತೋರಿಸಿತ್ತಿದೆ. ಸಂಜಯ್ ಪಾಟೀಲ್ ಶಾಸಕರಾಗಿ ಕೆಲಸ ಮಾಡಿದವರು ಅಂತವರು ಇಂತ ಹೇಳಿಕೆ ನೀಡಿರುವುದು ಎಲ್ಲಾ ಹೆಣ್ಣು ಮಕ್ಕಳು ತಲೆ ತಗ್ಗಿಸುವಂತಹ ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿ ಹೆಣ್ಣು ಮಕ್ಕಳ ಬಗ್ಗೆ ಗೌರವ ತೋರುವ ಬಗ್ಗೆ ತಿಳಿಸುತ್ತದೆ ಇದು ಅವರ ಸಂಸ್ಕಾರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಈ ವೇಳೆ ಮುಖಂಡರಾದ ಎಸ್ ಮನೋಹರ್, ವಿ ಶಂಕರ್, ವಿಜಯ್ ಮುಳಗುಂದ, ಜಿ ಪದ್ಮಾವತಿ, ಜಿ ಜನಾರ್ದನ್, ಎ ಆನಂದ್, ಜಯಸಿಂಹ, ಎಂ ಎ ಸಲೀಂ, ಆದಿತ್ಯ ಪ್ರಕಾಶ್, ಪುಟ್ಟರಾಜು, ಚಂದ್ರಶೇಖರ, ಜಾನಕೀ ರಾಮ್ ಬ್ಲಾಕ್ ಅಧ್ಯಕ್ಷರಾದ ತೇಜಸ್ ಅಶ್ವಥ್ ಹಾಗೂ ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು