ಒಂದು ದೇಶ, ಒಂದು ತೆರಿಗೆ, ಒಂದು ದೇಶ, ಒಂದು ಪಡಿತರ ಅಂತೆಲ್ಲ ಪ್ರಾದೇಶಿಕ ಅಗತ್ಯತೆಗಳನ್ನು ಕಡೆಗಣಿಸುತ್ತಿರುವ ಕೇಂದ್ರ ಸರ್ಕಾರ ಈಗ ಒಂದು ದೇಶ, ಒಂದು ಭಾಷೆ ಎಂಬ ಪ್ರಯೋಗಕ್ಕೆ ಹೊರಟಿದೆ.
ಶುಕ್ರವಾರ ಸಂಜೆ ದೆಹಲಿಯಿಂದ ಬಿಡುಗಡೆಯಾದ 25 ಎಂಎಲ್ಸಿ ಅಭ್ಯರ್ಥಿಗಳ ಪಟ್ಟಿಯನ್ನು ಹಿಂದಿಯಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳ ಹೆಸರನ್ನು ಇಂಗ್ಲಿಷ್ನಲ್ಲೂ ಪ್ರಕಟಿಸಿದೆ. ಅಲ್ಲಿ ಕನ್ನಡವೇ ನಾಪತ್ತೆ!
ಈ ಧೋರಣೆಯನ್ನು ಸಾವಿರಾರು ಜನ ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸಿದ್ದಾರೆ ಈ ಕುರಿತು ʼಪ್ರತಿಧ್ವನಿʼ ಜೊತೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ನಾರಾಯಣಗೌಡ, ʼಎಲ್ಲವನ್ನೂ ಏಕೀಕೃತ ಮಾಡುವ ಕೆಟ್ಟ ಉದ್ದೇಶವನ್ನು ಸಂಘ ಪರಿವಾರ ಹೊಂದಿದೆ. ಅದನ್ನು ಪಾಲಿಸಲು ಬಿಜೆಪಿ ಸಿದ್ಧವಾಗಿದೆ. ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ಈ ದೇಶದಲ್ಲಿ ಆಯಾ ಪ್ರಾಂತ್ಯಗಳಿಗೆ ತಮ್ಮದೇ ಆದ ಅಸ್ಮಿತೆ ಇದೆ. ಈ ಮೂಲ ಅಸ್ಮಿತೆಯನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅದರಲ್ಲೂ ಕನ್ನಡ ಸೇರಿದಂತೆ ಇತರ ಸ್ಥಳೀಯ ಭಾಷೆಗಳನ್ನು ಹತ್ತಿಕ್ಕಿ ಹಿಂದಿ ಹೇರುವ ಪ್ರಯತ್ಬವನವ್ನು ಕರವೇ ಸ್ಪಷ್ಟವಾಗಿ ವಿರೋಧಿಸುತ್ತದೆ. ಕರ್ನಾಟಕ ಎಂಎಲ್ಸಿ ಅಭ್ಯರ್ಥಿಗಳ ಪಟ್ಟಿಯನ್ನು ಹಿಂದಿಯಲ್ಲಿ ಓದಬೇಕಾದ ದುರ್ಗತಿ ಕನ್ನಡಿಗರಿಗೆ ಬಂದಿಲ್ಲʼ ಎಂದು ಕಿಡಿ ಕಾರಿದರು. ಈ ವಿಷಯ ಎತ್ತಿಕೊಂಡು ಪತ್ರಿಕಾಗೋಷ್ಠಿ ನಡೆಸಿ ಎಚ್ಚರಿಸುತ್ತೇವೆ ಎಂದು ನಾರಾಯಣಗೌಡರು ತಿಳಿಸಿದರು.
ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಮುಂದಾಗಿರುವ ಬಿಜೆಪಿ ಸಂಸ್ಕೃತ ಮತ್ತು ಹಿಂದಿ ಭಾಷೆಗಳನ್ನು ಪೋಷಿಸುತ್ತಿದೆ.
ಸಂಘ ಪರಿವಾರದ ಮೂಲ ಉದ್ದೇಶವೇ ಏಕೀಕ್ಗೃತ ಸಂಸ್ಕೃತಿಯನ್ನು ನಿರ್ಮಿಸುವುದು. ಸಂಘ ಪರಿವಾರಕ್ಕೆ ಸಂಸ್ಕೃತ ಎಂಬ ಸತ್ತ ಭಾಷೆಯ ಮೇಲೆ ಮೋಹ, ಈಗದು ಸಂಸ್ಕೃತ ವನ್ನು ಹೇರಲಾಹದೇ ಇರುವ ಕಾರಣಕ್ಕೆ ಹಿಂದಿಯನ್ನು ನಮ್ಮ ,ಮೇಲೆ ಹೇರಲು ಹೊರಟಿದೆ.
ಅದರ ಪರಿಣಾಮವೇ ಈಗ ಬಿಡುಗಡೆಗೊಂಡ 25 ಎಂಎಲ್ಸಿ ಅಭ್ಯರ್ಥಿಗಳ ಪಟ್ಟಿಯೇ ಅದಕ್ಕೆ ಸಾಕ್ಷಿ.
ಡಿಸೆಂಬರ್ 10 ರಂದು 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಕುರಿತಂತೆ ಶುಕ್ರವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ಹೈಕಮಾಂಡ್, ಎಲ್ಲ ವಿವರಗಳನ್ನುಹಿಂದಿಯಲ್ಲಿ ಪ್ರಕಟಿಸಿದೆ. ಅಲ್ಲಲ್ಲಿ ಇಂಗ್ಲಿಷ್ನಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಹೀಗೆ ಕನ್ನಡವನ್ನು ಕಡೆಗಣಿಸುವ ಬಿಜೆಪಿ, ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ರಾಜ್ಯ ಸರ್ಜಾರಗಳಿಗೆ ಮತ್ತು ಅಲ್ಲಿನ ಬಿಜೆಪಿ ಘಟಕಗಳಿಗೆ ಪತ್ರ ಕಳಿಸುವಾಗ ಅಲ್ಲಿನ ಸ್ಥಳೀಯ ಭಾಷೆಗೆ ಆದ್ಯತೆ ನೀಡುತ್ತದೆ.
ಆದರೆ, ಕನ್ನಡ ಅಥವಾ ಕರ್ನಾಟಕದ ವಿಷಯದಲ್ಲಿ ಹಿಂದಿ ಮೂಲಕವೇ ವ್ಯವಹರಿಸುವ ಮೂಲಕ ಕನ್ನಡ ಭಾಚೆಯನ್ನು ಕೊಲ್ಲುತ್ತಿದೆ.
ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ತೆರಿಗೆ ಪಾಲಿನ ಹಣ ಪೂರ್ತಿಯಾಗಿ ಬರಲೇ ಇಲ್ಲ. ರಾಜ್ಯ ಕೇಳಿದ ನೆರೆ ಪರಿಹಾರ ಮೊತ್ತವೂ ಸಂಪೂರ್ಣವಾಗಿ ಸಿಗಕೇ ಇಲ್ಲ್ಲ. ಈಗದು ಎಂಎಲ್ಸಿ ಅಭ್ಯರ್ಥಿಗಳ ಪಟ್ಟಿಯನ್ನು ಹಿಂದಿ-ಇಂಗ್ಲಿಷ್ನಲ್ಲಷ್ಟೇ ಪ್ರಕಟಿಸಿ ಕನ್ನಡವನ್ನು ಮತ್ತೆ ಕಡೆಗಣಿಸಿದೆ. ನಾಚಿಕೆ, ಮಾನ, ಮರ್ಯಾದೆ ಎಲ್ಲ ಬಿಟ್ಟ ನಮ್ಮ ಸಂಸದರು ಮತ್ತೆ ಬೆತ್ತಲಾಗಿದ್ದಾರೆ.