ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಜೆಡಿಎಸ್ ಅಸಮಾಧಾನ ಕುರಿತು ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವ್ರು ,
ಚಲುವರಾಯಸ್ವಾಮಿ, ಬಿಜೆಪಿಯಲ್ಲಿ ಸಾಕಷ್ಟು ಗೊಂದಲವಿದೆ. ಜೆಡಿಎಸ್ ಪಕ್ಷದ ಮೇಲೆ ಅವರಿಗೇನೇ ಆತ್ಮವಿಶ್ವಾಸ ಕುಗ್ಗಿದೆ. ಹೆಚ್.ಡಿ ಕುಮಾರಸ್ವಾಮಿ ನೋವು ಅವರ ಭಾವನೆಯಲ್ಲಿ ಗೊತ್ತಾಗ್ತಿದೆ. ಹೆಚ್.ಡಿ ಕುಮಾರಸ್ವಾಮಿಗೆ ಮೈತ್ರಿ ಸಮಾಧಾನ ತಂದಿಲ್ಲ ಎಂದು ಲೇವಡಿ ಮಾಡಿದ್ದಾರೆ.ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಆದಾಗ ಜೆಡಿಎಸ್ ಗೆ 7 ಸ್ಥಾನ ಕೊಟ್ಟಿದ್ದವು. ಕುಮಾರಸ್ವಾಮಿ ಇದನ್ನ ಹೇಗೆ ಸರಿಪಡಿಸುತ್ತಾರೆ ನೋಡಬೇಕು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ನನ್ನ ಮಗನ ಮದುವೆ ಇತ್ತು. ಆಹ್ವಾನಿಸುವುದಕ್ಕೆ ಹೋಗಿದ್ದೆ ಎಂದರು.
‘ಬಿಜೆಪಿಯಲ್ಲಿ ಸಾಕಷ್ಟು ಗೊಂದಲ ಇದೆ.ಜೆಡಿಎಸ್ ಪಕ್ಷದ ಮೇಲೆ ಅವರಿಗೇನೆ ಆತ್ಮ ವಿಶ್ವಾಸ ಕುಗ್ಗಿದೆ ಕುಮಾರಸ್ವಾಮಿ ನೋವು ಅವರ ಭಾವನೆಯಲ್ಲಿ ಗೊತ್ತಾಗುತ್ತಿದೆ.
ಬಿಜೆಪಿಯಲ್ಲೆ ಸಾಕಷ್ಟು ಗೊಂದಲ ಇದೆ.ಮೈಸೂರಿನ ಪ್ರತಾಪ್ ಸಿಂಹ ಹಾಗೂ ನಾಯಕರ ನಡುವೆ ವ್ಯತ್ಯಾಸ ಇದೆ.ಸದಾನಂದ ಗೌಡರಲ್ಲೂ ವ್ಯತ್ಯಾಸ ಅಗಿದೆ.
ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರರನ್ನ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ.
ಶೋಭಾಕರಂದ್ಲಾಜೆ ಬಿಟ್ಟರೆ ಬಿಜೆಪಿಯ ನಿಜವಾದ ಕ್ಯಾಂಡಿಡೆಟ್ ಒಂದೇ.ಹಳೆ ಮೈಸೂರಿನ ಭಾಗದಲ್ಲಿ ಒಕ್ಕಲಿಗರ ಒಂದೇ ಅವಕಾಶ ಸಿಕ್ಕಿದೆ.ಆಗಾಗಿ ಬಿಜೆಪಿಯಲ್ಲಿ ದೊಡ್ಡ ಗೊಂದಲದ ಮನೆಯಾಗಿದೆ.*
ಡಾ.ಮಂಜುನಾಥ್ ಅವರನ್ನ ದೇವೇಗೌಡ್ರು ಸ್ವಂತ ಅಳಿಮಯ್ಯರನ್ನ ಅವರ ಪಕ್ಷದಲ್ಲೇ ಚಿಹ್ನೆ ತೆಗೆದುಕೊಳ್ಳದೆ.
ಬಿಜೆಪಿ ಚಿಹ್ನೆಯಲ್ಲಿ ನಿಲ್ಲಿಸಿದ್ದಾರೆ.
ಜೆಡಿಎಸ್ ಅವರ ಪಕ್ಷದ ಮೇಲೆ ಅವರಿಗೇನೆ ಆತ್ಮ ವಿಶ್ವಾಸ ಕುಗ್ಗಿದೆ
ಮಕ್ಕಳಿಗಿಂದ ಮಂಜುನಾಥ್ ಅವರ ಮೇಲೆ ವಿಶ್ವಾಸ ದೇವೇಗೌಡ್ರುಗೆ ಇದೆ.ಕುಮಾರಸ್ವಾಮಿ ತಡಿಯಲಾರದೆ ಬಹಳ ನೋವಿನಿಂದ ಮಾತನಾಡುತ್ತಿದ್ದಾರೆ.
ಮಾಧ್ಯಮದ ಮುಂದೆ ಹೋಗಿ ನೋವಿನ ಮಾತನ್ನ ಆಡಿದ್ದಾರೆ.
ಅವರ ನೋವು ಅವರ ಭಾವನೆಯಲ್ಲಿ ಗೊತ್ತಾಗುತ್ತಿದೆ.
ಮುಂದೆ ಇನ್ನಷ್ಟು ಗೊಂದಲ ಆದ್ರೂ ಅಚ್ಚರಿಯಿಲ್ಲ ಅಂತ ಚೆಲುವರಾಯಸ್ವಾಮಿ ಹೇಳಿದ್ರು.